ಅಭಿಪ್ರಾಯ / ಸಲಹೆಗಳು

ಎನ್ ಎಸ್ ಎಸ್ ಸಹಯೋಗದೊಂದಿಗೆ ಪರಂಪರೆ ಕಟ್ಟಡ ಸ್ಮಾರಕಗಳ ಸ್ವಚ್ಚತೆ ಹಾಗೂ ಸಂರಕ್ಷಣೆ ಮತ್ತು ಪ್ರಚಾರ

2004-05 ಮತ್ತು 2012-13ನೇ ಆರ್ಥಿಕ ಸಾಲಿನ ಆಯವ್ಯಯ ಭಾಷಣದಲ್ಲಿ ಸರ್ಕಾರವು ಘೋಷಿಸಿರುವ 20 ಪಾರಂಪರಿಕ ಪ್ರದೇಶಗಳಲ್ಲಿರುವ ಐತಿಹಾಸಿಕ ಸ್ಮಾರಕಗಳು, ಪಾರಂಪರಿಕ ಕಟ್ಟಡಗಳು ಮತ್ತು ದೇವಾಲಯಗಳ ಸ್ವಚ್ಛತೆಯನ್ನು ಕೈಗೊಂಡು, ಇವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ವಿಶ್ವವಿದ್ಯಾನಿಲಯಗಳ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರನ್ನು ತೊಡಗಿಸಿಕೊಂಡು ಸ್ಮಾರಕಗಳ ಸ್ವಚ್ಚತ ಕಾರ್ಯವನ್ನು ಕೈಗೊಳ್ಳಲಾಗಿದೆ.

 

ಸ್ವಚ್ಚತಾ ಕಾರ್ಯ ಕೈಗೊಂಡಿರುವ ಸ್ಮಾರಕಗಳ ವಿವರ.

 

ವರ್ಷ

 

ಸ್ವಚ್ಚತೆ ಮಾಡಿರುವ ಸ್ಮಾರಕಗಳ ಸಂಖ್ಯೆ

2016-17

51

2017-18

69

2018-19

78

2019-20

200

2020-21

ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಿಲ್ಲ

 ಒಟ್ಟು

398

 

ಸ್ಮಾರಕ ಸ್ವಚ್ಚತೆಯ ವಿಧಾನ ಮತ್ತು  ಚಟುವಟಿಕೆಗಳು :

 

  • ಸ್ಮಾರಕದ ಆವರಣದ ಒಳಗೆ ಹೋಗಲು ಸರಿಯಾದ ದಾರಿ ಮಾಡಿಕೊಳ್ಳುವುದು.

  • ಸ್ಮಾರಕದ ಸುತ್ತಲೂ ಇರುವ ಕಸ-ಕಡ್ಡಿ, ಗಿಡ-ಗಂಟೆಗಳನ್ನು ಕಡಿದು ಸ್ವಚ್ಚಗೊಳಿಸುವುದು.

  • ಸ್ಮಾರಕದ ಸುತ್ತಲೂ ಕಲ್ಲು ಮಣ್ಣುಗಳ ಗುಡ್ಡೆ (Debris)ಗಳನ್ನು ತೆಗೆದು ದೂರ ಸಾಗಿಸುವುದು.

  • ಇಂತಹ ಗುಡ್ಡೆ(ಗುಂಪಿ)ಯಲ್ಲಿ ಪ್ರಾಚ್ಯವಸ್ತುಗಳಿದ್ದರೆ ಅವುಗಳನ್ನು ಆಯ್ದುಕೊಂಡು ಸುರಕ್ಷಿತ ಸ್ಥಳದಲ್ಲಿಟ್ಟು, ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವುದು.

  • ಮಣ್ಣಿನ ಗುಡ್ಡೆ ತೆಗೆಯುವಾಗ ಸ್ಮಾರಕಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು.

  • ಸ್ಮಾರಕದ ಮೂಲ ನೆಲ ಹಾಸನ್ನು ಅಗೆಯ ಬಾರದು ಅಥವಾ ಧಕ್ಕೆ ಮಾಡಬಾರದು.

  • ಸ್ಮಾರಕದ ಗೋಡೆ, ಮಾಳಿಗೆ, ಕಂಬ, ತೊಲೆ, ಗೋಪುರ, ಮೇಲ್ಛಾವಣಿ, ಪೀಠ ಮುಂತಾದವುಗಳು ಬೀಳದಂತೆ ಆನಿಕೆ ಕೊಟ್ಟಿದ್ದರೆ ಅಂತಹ ಆನಿಕೆಯನ್ನು ತೆಗೆದು ಹಾಕುವ ಅಥವಾ ಸ್ಥಳಾಂತರಿಸುವ ಕೆಲಸ ಮಾಡಬಾರದು.

  • ಸ್ಮಾರಕದ ಒಳಭಾಗ ಹಾಗೂ ಹೊರ ಭಾಗದ ಮೇಲೆ ಇರುವ ಕೊಳೆ, ಹೊಗೆ, ಕಾಡಿಗೆ, ಪಾಚಿ ಇದ್ದರೆ ಇವುಗಳನ್ನು ಸ್ವಚ್ಚ ನೀರಿನಿಂದ ಮಾತ್ರ ತೊಳೆದು ಶುಚಿ ಮಾಡುವುದು.

  • ರಾಸಾಯನಿಕಗಳನ್ನು, ಸಾಬೂನು, ಕಾಸ್ಟಿಕ್‌ ಸೋಡ್‌, ಆಸಿಡ್‌, ಹುಣಸೆಹಣ್ಣು ಅಥವಾ ಆಮ್ಲ ಇರುವ ಯಾವುದೇ ಹಣ್ಣು, ಕಾಯಿ, ಎಲೆ ಮುಂತಾದವುಗಳನ್ನು ಸ್ಮಾರಕ ಸ್ವಚ್ಚಗೊಳಿಸಲು ಉಪಯೋಗಿಸಬಾರದು.

  • ಸ್ಮಾರಕ ಕಟ್ಟುವ ಸಮಯದಲ್ಲಿ ಅದಕ್ಕೆ ಲೇಪಿಸಿದ ಕೆಂಪು ಬಣ್ಣ (Read Ochre) ವನ್ನು ತೊಳೆಯಬೇಡಿ.

  • ಸ್ಮಾರಕದ ಒಳ ಗೋಡೆ, ಹೊರ ಗೋಡೆ ಹಾಗೂ ಮುಂತಾದವುಗಳ ಮೇಲೆ ಇದ್ದ ವರ್ಣಚಿತ್ರಗಳನ್ನು ಸ್ವಚ್ಚಮಾಡುವ ಮೊದಲು ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸುವುದು.

  • ಶಿಲ್ಪಗಳನ್ನು ಶುದ್ಧ ನೀರಿನಿಂದ ಮಾತ್ರ ಸ್ವಚ್ಚಗೊಳಿಸಬೇಕು.

  • ಸ್ಮಾರಕದ ಯಾವುದೇ ಭಾಗವನ್ನು ಬಿಚ್ಚಿ ಮತ್ತೆ ಜೋಡಿಸುವ ಅಥವಾ ಹೊಸದಾಗಿ ಕಟ್ಟುವ ಕಾರ್ಯ ಮಾಡಬಾರದು.

  • ಸ್ಮಾರಕದ ಸಂರಕ್ಷಣೆ; ಸ್ವಚ್ಚತಾ ಕಾರ್ಯದಲ್ಲಿ ತೊಂದರೆ ಆದಲ್ಲಿ ಇಲಾಖೆಯ ಅಧಿಕಾರಿಯಗಳ ಸಲಹೆ ಪಡೆಯುವುದು.

 

ಸ್ಮಾರಕ ಸ್ವಚ್ಚತೆಯ ಸುರಕ್ಷತಾ ಕ್ರಮಗಳು:

 

  • ಸ್ಮಾರಕಗಳ ಒಳಗೆ ವಿಷಪೂರಿತ ವಾಯು ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಂಡು ಸ್ಮಾರಕದ ಒಳಗೆ ಪ್ರವೇಶಿಸುವುದು.

  • ಸ್ಮಾರಕಗಳ ಒಳಗೆ ಸರಿಯಾಗಿ ವಾಯು ಚಲನೆ (Air Circulation) ಇದೆಯೋ ಅಥವಾ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು.

  • ಸ್ಮಾರಕಗಳ ಒಳಗೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡುವುದು.

  • ಸೂರ್ಯಸ್ತವಾಗುವುದಕ್ಕಿಂತ ಮುಂಚೆ ಕೆಲಸ  ಕಾರ್ಯ ನಿಲ್ಲಿಸಬೇಕು.

  • ವಿಷಪೂರಿತ ಜೀವ-ಜಂತುಗಳು ಹಾಗೂ ಪ್ರಾಣಿಗಳ ಕುರಿತು ಜಾಗರೂಕತೆಯಿಂದರಬೇಕು.

  • ಕಲ್ಯಾಣಿ, ಬಾವಿ, ಗುಹೆ, ಸುರಂಗ ಮಾರ್ಗ, ಹಗೆ ಮುಂತಾದವುಗಳ ಸಂರಕ್ಷಣೆ ಹಾಗೂ ಸ್ವಚ್ಚತಾ ಕಾರ್ಯ ತೆಗೆದುಕೊಳ್ಳಬಾರದು.

  • ಸ್ಮಾರಕವನ್ನು ಏರುವಾಗ ಸ್ಮಾರಕದ ಸಡಿಲಗೊಂಡ ಭಾಗ, ಜಾರುವ ಭಾಗ, ಸೂಕ್ಷ್ಮ ಭಾಗಗಳ ಕುರಿತು ಎಚ್ಚರವಹಿಸುವುದು.

  • ಮತೀಯ ಭಾವನೆಗಳನ್ನು ಕೆರಳಿಸಬಾರದು.

  • ಸ್ಮಾರಕದ ಹೊರಗೆ ಹಾಗೂ ಒಳಗೆ ವಿದ್ಯುತ್‌ ತಂತಿಗಳಿದ್ದರೆ ವಿದ್ಯುತ್‌ ಸರಬರಾಜು ನಿಲ್ಲಿಸಿದ ನಂತರ ಕೆಲಸ ಕಾರ್ಯ ಆರಂಭಿಸುವುದು.

  • ಸ್ಮಾರಕದ ಒಳಗೆ ಬೆಂಕಿ ಹಾಕಬಾರದು.

  • ಪ್ರಥಮ ಚಿಕಿತ್ಸೆ(First Aid) ಕಿಟ್‌ನ್ನು ಸುಲಭವಾಗಿ ದೊರೆಯುವಂತೆ ಇಟ್ಟುಕೊಳ್ಳುವುದು.

  • ಸಮೀಪದ ಪೊಲೀಸ್‌ ಠಾಣೆ, ಅಗ್ನಿಶಾಮಕ ದಳ, ಆಸ್ಪತ್ರೆ, ಖಾಸಗಿ ನರ್ಸಿಂಗ್‌ ಹೋಮ್‌, ವೈದ್ಯರ ದೂರವಾಣಿ ಸಂಖ್ಯೆಯನ್ನು ಜೊತೆಯಲ್ಲಿಟ್ಟುಕೊಂಡಿರುವುದು.

 

NSS NSS 1 NSS 2

 

ಇತ್ತೀಚಿನ ನವೀಕರಣ​ : 07-06-2022 04:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080