ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತುಸಂಗ್ರಹಾಲಯ ಬಸವಕಲ್ಯಾಣ

ಬಸವಕಲ್ಯಾಣ ನಗರವು ಕಲೆ, ಸಾಹಿತ್ಯ, ವಾಸ್ತುಶಿಲ್ಪದ ನೆಲೆವೀಡಾಗಿದ್ದು ಇವುಗಳ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸುವ ಪ್ರಾಚ್ಯವಸ್ತುಗಳನ್ನು ಸಂರಕ್ಷಿಸುವ ಸಲುವಾಗಿ ಇಲ್ಲಿನ ಕೋಟೆಗೆ ಹೊಂದಿಕೊಂಡಂತೆ ಕರ್ನಾಟಕ ರಾಜ್ಯ ಸರ್ಕಾರವು 1994ರಲ್ಲಿ ವಸ್ತುಸಂಗ್ರಹಾಲಯವನ್ನು  ಸ್ಥಾಪಿಸಲಾಯಿತು. ಇಲ್ಲಿ ಜಿಲ್ಲೆಯ ಮೂಲೆ-ಮೂಲೆಗಳಿಂದ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗಿದೆ. ಇವುಗಳನ್ನು ಒಟ್ಟು ಆರು ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗಿದೆ.

 

ಮೊದಲ ಗ್ಯಾಲರಿಯಲ್ಲಿ ಯುದ್ಧ ಸಾಮಾಗ್ರಿಗಳನ್ನು ಪ್ರದರ್ಶಿಸಲಾಗಿದೆ. ಯುದ್ದಕ್ಕೆ ಬಳಸುತ್ತಿದ್ದ 4 ಗೋಳಕಾರದ ಕಲ್ಲಿನ ಸಿಡಿಮದ್ದು ಗುಂಡುಗಳಿವೆ. 16-17ನೇ ಶತಮಾನಕ್ಕೆ ಸೇರಿದ್ದ 4 ಚಿಕ್ಕದಾದ ತೋಪುಗಳಿದ್ದು, ಹಿತ್ತಾಳೆ ಮತ್ತು ತಾಮ್ರ ಮಿಶ್ರಿತವಾಗಿವೆ. ಕೋಟೆಯ ಬಾಗಿಲನ್ನು ಎಳೆಯಲು ಬಳಸುತ್ತಿದ್ದ ಸುಮಾರು 8 ಅಡಿ ಉದ್ದದ ಎರಡು ಚೈನ್‍ಗಳು ಇಲ್ಲಿದೆ. ಇಲ್ಲಿ ಸುಮಾರು 5 ಬಂದೂಕುಗಳು, 4 ಬರ್ಜಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬಸವಕಲ್ಯಾಣದ ವಿವಿಧ ಕಡೆಗಳಿಂದ ಸಂಗ್ರಹಿಸಿದ ಕ್ರಿ.ಶ. 12-13 ಶತಮಾನದ ನರಸಿಂಹ, ಇದರ ಪಕ್ಕದಲ್ಲಿ ಉಮಾ-ಮಹೇಶ್ವರ ಹಾಗೂ ಗ್ಯಾಲರಿಯ ಮಧ್ಯಭಾಗದಲ್ಲಿ ಶಿವ ಮತ್ತು ವಿಷ್ಣು ವಿಗ್ರಹಗಳನ್ನು ನೋಡಬಹುದು.

 

ಎರಡನೇ ಗ್ಯಾಲರಿಯಲ್ಲಿ ಹೈದರಬಾದ್ ನಿಜಾಮರ ಕಾಲದಲ್ಲಿ ಜನರು ಬಳಸುತ್ತಿದ್ದ ಮಣ್ಣಿನ ಪಾತ್ರೆಯ ಚೂರುಗಳನ್ನು ಇಲ್ಲಿ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಸುಮಾರು ಅಂದಾಜು 60 ಕೆ.ಜಿ. ತೂಕದ 6 ಕಲ್ಲಿನ ಗುಂಡುಗಳಿದ್ದು, ಇವುಗಳನ್ನು ವ್ಯಾಯಾಮ ಶಾಲೆಯಲ್ಲಿ ಬಳಸುತ್ತಿದ್ದರು. ನವ ಶಿಲಾಯುಗಕ್ಕೆ ಸೇರಿದ  ಕಲ್ಲಿನ ಆಯುದಗಳು ಇಲ್ಲಿವೆ. 11ನೇ ಶತಮಾನದ ಜೈನಶಿಲ್ಪಗಳು, 12ನೇ ಶತಮಾನದ ಲಕ್ಷ್ಮೀ ವಿಗ್ರಹವಿದೆ. ಗ್ಯಾಲರಿಯ ಮಧ್ಯಭಾಗದಲ್ಲಿ ಮಣಿಗಳು, ಖಡ್ಗಗಳು, ಶಾಸನಗಳು, ಮಡಿಕೆ ಚೂರುಗಳು ಗ್ಯಾಲರಿಯ ಕೊನೆಯ ಭಾಗದಲ್ಲಿ ದೊಡ್ಡದಾದ ಬಾಹುಬಲಿ ವಿಗ್ರಹವಿದೆ. ಜೊತೆಗೆ ನಾಲ್ಕು ವರ್ಣಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

 

ಮೂರನೇ ಗ್ಯಾಲರಿಯಲ್ಲಿ  ಅಲಂಕಾರಿಕ ವಸ್ತುಗಳು ಮತ್ತು ಅನೇಕ ಪ್ರಾಚ್ಯಾವಶೇಷಗಳನ್ನು ಕಪಾಟುಗಳಲ್ಲಿ ಪ್ರದರ್ಶಿಸಲಾಗಿದೆ. ಇಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಗಾಜಿನ ಪಾತ್ರೆಯ ಚೂರುಗಳನ್ನು ಪ್ರದರ್ಶಿಸಲಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಸರದ ಮಣಿಗಳಿವೆ. ಕೋಟೆಯಲ್ಲಿ ದೊರೆತಿರುವ 11-12 ಶತಮಾನದ ಸಿಂಹ, ವೀರಗಲ್ಲು, ಕುಬೇರ ಮೂರ್ತಿ ಹಾಗೂ ಮೂರು ಶಾಸನಗಳು, ಜೈನ ವಿಗ್ರಹ, ವೀರಗಲ್ಲು, ನಿಶಿಧಿ ಕಲ್ಲು, 13ನೇ ಶತಮಾನದ ದೊಡ್ಡಗಣಪತಿ ವಿಗ್ರಹಗಳಿವೆ. ಈ ಗ್ಯಾಲರಿಯ ಪ್ರಮುಖವಾದ ಆಕರ್ಷಣೆ ಎಂದರೆ ಬೀದರ್‍ನ ಬರಿದ್‍ಶಾಹಿಗಳ ಎರಡು ದೊಡ್ಡ ಪಲ್ಲಕ್ಕಿಗಳನ್ನು ಗ್ಯಾಲರಿಯ ಮಧ್ಯಭಾಗದಲ್ಲಿ ಪ್ರದರ್ಶಿಸಲಾಗಿದೆ. ಈ ಪ್ರದರ್ಶನ ಕೊಠಡಿಯಲ್ಲಿ ಸನ್ನತಿ ಅವಶೇಷಗಳು ಅಂದರೆ ಮಡಿಕೆ ಚೂರುಗಳು ಹಾಗೂ ಜನರ ನಿತ್ಯ ಉಪಯೋಗಿ ವಸ್ತುಗಳನ್ನು ಕಾಣಬಹುದು.

 

ನಾಲ್ಕನೇ ಗ್ಯಾಲರಿಯಲ್ಲಿ ವಿವಿಧ ರೀತಿಯ ಪೂಜಾ ಸಾಮಾಗ್ರಿಗಳನ್ನು ಕಪಾಟುಗಳಲ್ಲಿ ಪ್ರದರ್ಶಿಸಲಾಗಿದೆ. ಈ ಕೊಠಡಿಯಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ 5 ಮಣ್ಣಿನ ದೀಪಗಳಿವೆ. ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಮೂರು ಗಂಟೆಗಳನ್ನು ಇಲ್ಲಿ ಕಾಣಬಹುದು. ಅದರಲ್ಲಿ ಒಂದು ಚಿಕ್ಕ ಗಂಟೆ, ಎರಡು ದೊಡ್ಡ ಗಂಟೆಗಳಿವೆ. ಈ ದೊಡ್ಡ ಗಂಟೆಗಳನ್ನು ಅರಮನೆಯ ಬಾಗಿಲಿಲಲ್ಲಿ ಕಟ್ಟುತ್ತಿದ್ದರು. ಈ ಗಂಟೆಯು ಸುಮಾರು 25 ರಿಂದ 30 ಕೆ.ಜಿ. ಅಂದಾಜು ತೂಕವಿರಬಹುದು. ಹಾಗೆಯೇ ತಾಮ್ರದ ಜಾಗಂಟೆಯನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಕ್ರಿ.ಶ. 12ನೇ ಶತಮಾನದ ವೀರಗಲ್ಲು, ವಿಷ್ಣುವಿನ ವಿಗ್ರಹ 12-13 ಶತಮಾನದ ಮಹಿಷಮರ್ದಿನಿ ವಿಗ್ರಹ, 14ನೇ ಶತಮಾದ ಕಾಲಭೈರವ ವಿಗ್ರಹ, ಕಕ್ಷಾಶನ, ಅನಂತಪದ್ಮನಾಭ ವಿಗ್ರಹ ಇನ್ನು ಮುಂತಾದ ವಿಗ್ರಹಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

 

ಐದನೇ ಗ್ಯಾಲರಿಯಲ್ಲಿ 15ನೇ ಶತಮಾನಕ್ಕೆ ಸೇರಿದ ಕೋಟೆಯಲ್ಲಿ ದೊರೆತಿರುವ 5 ದಂತದ ಚೂರುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಬಳೆಗಳು, ಮಣಿಗಳು, ಆಭರಣಗಳನ್ನು ಇಲ್ಲಿ ಕಾಣಬಹುದು. ವಿಜಯನಗರ ಸಾಮ್ರಾಜ್ಯದ ಮಡಿಕೆ ಚೂರುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.  ಮಡಿಕೆ ಚೂರುಗಳ ಮೇಲೆ ಪ್ರಾಣಿಗಳ ಚಿತ್ರ, ಹೂವಿನ ಚಿತ್ರಗಳನ್ನು ಕಾಣಬಹುದು. ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಮಸ್ಕಿ ಎಂಬಲ್ಲಿ ದೊರೆತಿರುವ ಹೈದರಬಾದ್ ನಿಜಾಮವರ ಕಾಲದ 7 ತೂಕದ ಕಲ್ಲುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ ಕ್ರಿ.ಶ. 12ನೇ ಶತಮಾನದ ಶಿವನ ವಿಗ್ರಹವನ್ನು, ಅದರ ಪಕ್ಕದಲ್ಲಿ ದೊಡ್ಡಗಣಪತಿ ವಿಗ್ರಹ, ವೀರಗಲ್ಲು ಹಾಗೂ ದೊಡ್ಡ ಗಾತ್ರದ ಆನೆಯ ವಿಗ್ರಹಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

 

ಕೊನೆಯ ಗ್ಯಾಲರಿಯಲ್ಲಿ ಯುದ್ದಕ್ಕಾಗಿ ಬಳಸುತ್ತಿದ್ದ 7 ಬಾಣಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ದೊಡ್ಡದಾದ 12 ಅಡಿ ಉದ್ದದ ಎರಡು ಪಲ್ಲಕ್ಕಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ಫಿರಂಗಿ ಇದ್ದು, ಅದರ ಅಕ್ಕ-ಪಕ್ಕದಲ್ಲಿ ಮದ್ದುಗುಂಡುಗಳನ್ನು ಇಡಲಾಗಿದೆ. ಕ್ರಿ.ಶ. 12ನೇ ಶತಮಾನದ ವಿಷ್ಣುವಿನ ವಿಗ್ರಹ, ಶಿವನ ವಿಗ್ರಹಗಳು, ವರಹಚಿತ್ರ ಹಾಗೂ ರತಿ-ಮನ್ಮಥ ವಿಗ್ರಹಗಳು ಮುಂತಾದವುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

 

ಇಲ್ಲಿ ವಿವಿಧ ರಾಜಮನೆತನಗಳ ಅನೇಕ ನಾಣ್ಯಗಳನ್ನು ಸಂಗ್ರಹಿಸಲಾಗಿದೆ. ಜೈಮಿನಿ ಭಾರತ, ಅಶ್ವಮೇಧ ಪರ್ವ, ಕೌಶಿಕ ರಾಮಾಯಣ, ಸ್ಕಂದ ಪುರಾಣ, ದೇವಿ ಮಹಾತ್ಮೆಗಳ ತಾಳೆಗರಿ ಗ್ರಂಥಗಳನ್ನು ಈ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.

 

ಈ ವಸ್ತುಸಂಗ್ರಹಾಲಯವು ವಾರದ ಎಲ್ಲಾ ದಿನಗಳಲ್ಲಿ (ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ) ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 5:30 ರ ವರಗೆ ತೆರೆದಿರುತ್ತದೆ.

 

ಇತ್ತೀಚಿನ ನವೀಕರಣ​ : 14-10-2020 04:59 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080