ಅಭಿಪ್ರಾಯ / ಸಲಹೆಗಳು

ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

ಉದ್ದೇಶ;

 

 

  • ಕರ್ನಾಟಕವನ್ನು ವಿವಿಧ ರಾಜಮನೆತನಗಳು ಆಳಿದ್ದು, ಅವುಗಳಲ್ಲಿ ಚಾಲುಕ್ಯರು ಬಾದಾಮಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ನಡೆಸಿದರು. ಇವರ ಆಳ್ವಿಕೆಯಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳಲ್ಲಿ ವಿಶಿಷ್ಟ ವಾಸ್ತುಶೈಲಿಯ ದೇವಾಲಯಗಳು, ಗುಡಿ ಗೋಪುರಗಳು, ಜಿನಾಲಯಗಳು, ಬೃಹತ್‌ ಶಿಲಾಗೋರಿಗಳನ್ನು ಇಂಡೋ-ಸಾರ್ಸನಿಕ್‌ ಶೈಲಿಯಲ್ಲಿ ನಿರ್ಮಿಸಿದ್ದು, ಇವು ಇಂದಿಗೂ ನಮ್ಮ ಐತಿಹಾಸಿಕ ಸ್ಮಾರಕಗಳಾಗಿ ಚಾಲುಕ್ಯರ ಕಾಲದ ಇತಿಹಾಸವನ್ನು ತಿಳಿಸುತ್ತವೆ. ಈ ಕಾಲದಲ್ಲಿ ನಿರ್ಮಾಣಗೊಂಡ ಇನ್ನಿತರ ದೇವಾಲಯಗಳಾದ ಗುಹಾಲಯ ದೇವಾಲಯಗಳು, ಬಾದಾಮಿ ಕೋಟೆ, ಬೌದ್ಧರ ನೈಸರ್ಗಿಕ ಕೋಟೆ, ಜೈನಗುಹಾಲಯ, ವಿರೂಪಾಕ್ಷ ದೇವಾಲಯ, ಐಹೊಳೆ ಕೋಟೆ, ರಾವಳಫಡಿ ಗುಹಾಲಯ, ಜೈನ ದೇವಾಲಯ (ಮೀನ ಬಸದಿ), ಬೌದ್ಧ ಚೈತ್ಯಾಲಯ ಮುಂತಾದ ಐತಿಹಾಸಿಕ ಸ್ಮಾರಕಗಳು ಇವರ ಕಾಲದಲ್ಲಿ ನಿರ್ಮಾಣಗೊಂಡು “ಸ್ಮಾರಕಗಳ ತೊಟ್ಟಿಲು” ಎಂದು ಪ್ರಸಿದ್ಧವಾಗಿದೆ. ಈಗಾಗಲೇ ಪಟ್ಟದಕಲ್ಲು ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಈ ಸ್ಥಾನಮಾನವನ್ನು ಐಹೊಳೆ ಮತ್ತು ಬಾದಾಮಿ ಪ್ರದೇಶಕ್ಕೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

 

 

ವ್ಯಾಪ್ತಿ;

 

 

  • ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿರುವ ಎಲ್ಲಾ ಪುರಾತತ್ವ ಅವಶೇಷಗಳ ಮತ್ತು ನೈಸರ್ಗಿಕ ಪರಿಸರಗಳೊಂದಿಗೆ ಅದರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದಕ್ಕಾಗಿ, ಕರ್ನಾಟಕ ರಾಜ್ಯದಲ್ಲಿ ಅದರ ಸಾಂಸ್ಕೃತಿಕ ಸಮಗ್ರತೆಯನ್ನು ರಕ್ಷಿಸುವುದಕ್ಕಾಗಿ, ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಪ್ರದೇಶದಲ್ಲಿರುವ ಬಾದಾಮಿ ಕೋಟೆ, ಗುಹಾಲಯ ದೇವಾಲಯಗಳು, ಅಗಸ್ತ್ಯ ತೀರ್ಥ ಪರಿಸರ, ಭೂತನಾತ ಗುಡಿ, ಅನಂತಶಯನ ಗುಡಿ, ಮಾಲೆಗಿತ್ತಿ ಶಿವಾಲಯ, ಉತ್ತರದ ಕೋಟೆ, ದಕ್ಷಿಣದ ಕೋಟೆ, ಬೌದ್ಧರ ನೈಸರ್ಗಿಕ ಕೋಟೆ, ಜೈನಗುಹಾಲಯ, ಎಲ್ಲಮ್ಮ ಗುಡಿ, ಜಂಬುಲಿಂಗ ದೇವಾಲಯ, ವಿರೂಪಾಕ್ಷ ದೇವಾಲಯ, ಇಂಡೋ-ಇಸ್ಲಾಮಿಕ್ ಸ್ಮಾರಕಗಳು, ಅರಳೀ ಹೊಂಡ, ಪಟ್ಟದಕಲ್ಲಿನ ತ್ರಿಪುರಾಂತಕ ಶಿವ, ಕಾಲಾರಿ ಶಿವ ಮತ್ತು ಜೋಡಿ ಮಾತೃಕೆಯರ ಶಿಲ್ಪಗಳು ಮತ್ತು ಐಹೊಳೆಯಲ್ಲಿರುವ ಬೃಹತ್ ಶಿಲಾಗೋರಿಗಳು, ಐಹೊಳೆ ಕೋಟೆ, ರಾವಳಫಡಿ ಗುಹಾಲಯ, ಜೈನ ದೇವಾಲಯ (ಮೀನ ಬಸದಿ), ದುರ್ಗಾಗುಡಿ, ಲಾಡಖಾನ ಗುಡಿ, ಗೌಡಗುಡಿ, ಚಕ್ರಗುಡಿ, ಬಡಿಗೇರ ಗುಡಿ, ಅಂಭಿಗೇರ ಗುಡಿ ಗುಂಪು, ಚಿಕ್ಕಿಗುಡಿ ಗುಂಪು, ತಾರ ಬಸಪ್ಪ ಗುಡಿ, ಹುಚ್ಚಿಮಲ್ಲಿ ಗುಡಿ, ಮಲ್ಲಿಕಾರ್ಜುನ, ಜ್ಯೋತಿರ್ಲಿಂಗ ಗುಡಿಗಳ ಗುಂಪು, ಬೌದ್ಧ ಚೈತ್ಯಾಲಯ, ಮೇಗುಟಿ ಜಿನಾಲಯ, ಹುಚ್ಚಪ್ಪಯ್ಯ ಮಠ, ಕೊಂತಿ ಗುಡಿಗಳ ಗುಂಪು, ಗಳಗನಾಥ ಗುಡಿ ಗುಂಪು, ಗೌರಿ ಗುಡಿ, ಜೈನನಾರಾಯಣ ಗುಂಪು, ಮದ್ದಿನಗುಡಿ-ತ್ರ್ಯಂಬಕೇಶ್ವರ ಗುಂಪು, ಚರಂತಿಮಠ ಗುಂಪು, ರಾಚಿ ಗುಡಿ, ಏಣಿಯವರ ಗುಡಿ ಗುಂಪು, ಅರಳೀಬಸಪ್ಪ ಗುಡಿ, ರಾಮಲಿಂಗೇಶ್ವರ ಗುಡಿ ಗುಂಪು, ಮುಂತಾದ ಸ್ಮಾರಕಗಳ ಮತ್ತು ಐತಿಹಾಸಿಕ ಸ್ಥಳಗಳಿವೆ.

 

 

  • 2015-16ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳನ್ನು ಒಳಗೊಂಡಂತೆ “ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ”ವನ್ನು ರಚಿಸಿ ಆದೇಶಿಸಲಾಗಿದೆ.

 

 

  • ಚಾಲುಕ್ಯ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ವಿಧೇಯಕ 2017- (2017ರ ವಿಧಾನ ಸಭೆಯ ವಿಧೇಯಕ ಸಂಖ್ಯೆ-46) ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಅನುಮೋದನೆಗೊಂಡಿರುತ್ತದೆ. ಹಾಗೂ ಸರ್ಕಾರಿ ಆದೇಶ ಸಂಖ್ಯೆ: ಕಸಂವಾ 119 ಕೆಎಂಯು 2018, ಬೆಂಗಳೂರು ದಿನಾಂಕ: 26.10.2018ರಿಂದ ಜಾರಿಗೆ ಬರುವಂತೆ ಅಧಿಸೂಚನೆಯನ್ನು ಹೊರಡಿಸಿದೆ.

 

ವಿಧೇಯಕ

ಡೌನ್ಲೋಡ್

ಅಧಿಸೂಚನೆ

ಡೌನ್ಲೋಡ್

ನಿಯಮಗಳು

ಡೌನ್ಲೋಡ್

 

 

ಇತ್ತೀಚಿನ ನವೀಕರಣ​ : 22-12-2022 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080