ಅಭಿಪ್ರಾಯ / ಸಲಹೆಗಳು

ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ

ಉದ್ದೇಶ;

 

  • ಸಾಂಸ್ಕೃತಿಕ, ನೈಸರ್ಗಿಕ ಹಾಗೂ ಐತಿಹಾಸಿಕವಾಗಿ ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಕರ್ನಾಟಕದಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಈ ಮೂರು ಜಿಲ್ಲೆಗಳು ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿವೆ. ಕದಂಬ, ಹೊಯ್ಸಳ ಮತ್ತು ಕೆಳದಿ ಅರಸು ಮನೆತನಗಳು ಈ ನಾಡಿನಲ್ಲಿ ಹುಟ್ಟಿವೆ. ಇದಲ್ಲದೆ ಇಲ್ಲಿನ ಅನೇಕ ಸಾಮಂತ ಮನೆತನಗಳು ಮತ್ತು ಪಾಳೆಪಟ್ಟುಗಳು ಕೂಡಾ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಸಾಮಾಜಿಕವಾಗಿಯೂ ಶರಣರ ನಾಡೆಂದು ಗುರ್ತಿಸಿಕೊಂಡಿದೆ. ಅವಿರಳ ಜ್ಞಾನಿ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯಂತಹ ಸಾಧ್ವಿ, ನಾಟ್ಯರಾಣಿಯೆನಿಸಿದ ಶಾಂತಲೆ ಶಿಕಾರಿಪುರ ತಾಲ್ಲೂಕಿನಲ್ಲಿ ಜನಿಸಿದ್ದಾರೆ. ತರೀಕೆರೆಯಲ್ಲಿ ಅಕ್ಕನಾಗಮ್ಮನವರ ಗದ್ದುಗೆ ಇದೆ. ತೀರ್ಥಹಳ್ಳಿ ತಾಲೂಕಿನ ಕಂದಾದ್ರಿ ಬೆಟ್ಟವು ಜೈನ ಮುನಿ ಕುಂದಕುಂದಾಚಾರ್ಯರ ಸ್ಥಳವಾಗಿದೆ. ಶರಣರ ಬೀಡಾಗಿ ಶಿಕಾರಿಪುರ ಗುರ್ತಿಸಿಕೊಂಡರೆ, ಧಾರ್ಮಿಕ ಕ್ಷೇತ್ರಗಳಾಗಿ ಶೃಂಗೇರಿ, ಶಿರಸಿ, ಹೊಂಬುಜ ಮತ್ತು ಬಾಳೆಹೊನ್ನೂರು ಇವೆ.

 

  • ಮಲೆನಾಡು ವಿಶ್ವದ 20 ಜೈವಿಕ ಕೇಂದ್ರಗಳಲ್ಲೊಂದು ಎಂದು ಗುರ್ತಿಸಲ್ಪಟ್ಟಿದೆ. ಇಲ್ಲಿ ಅನೇಕ ನದಿಗಳು ಉಗಮಿಸಿ ನಾಡಿನ ಜೀವ ಜಾಲವಾಗಿವೆ. ನಾಡಿಗೆ ವಿದ್ಯುತ್‌ ನೀಡುವ ಶರಾವತಿ, ಕಾಳಿ ನದಿಗಳಿವೆ. ನೀರಾವರಿ ನೀಡುವ ಭದ್ರಾ ಮತ್ತು ತುಂಗಾ ಜಲಾಶಯಗಳಿವೆ. ಇದಲ್ಲದೆ ಅನೇಕ ನೈಸರ್ಗಿಕ ತಾಣಗಳಿವೆ. ಈ ಪ್ರದೇಶ ಅಪೂರ್ವ ಮಳೆ ಕಾಡಿನಿಂದ ಪ್ರಸಿದ್ಧ ಮತ್ತು ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

 

  • ಈ ಪ್ರದೇಶದ ಸಾಂಸ್ಕೃತಿಕ ಜೀವನವನ್ನು ರೂಪಿಸುತ್ತಿರುವ, ದೇಶ ವಿದೇಶಗಳಿಂದ ಜನರನ್ನು ಆಕರ್ಷಿಸುತ್ತಿರುವ ಹೆಗ್ಗೋಡಿನ ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ) ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನಗಳು ಕಳೆದ ಹಲವಾರು ದಶಕಗಳಿಂದ ಕಾರ್ಯನಿರ್ವಹಿಸುತ್ತಿವೆ.

 

  • ಈ ಮೂರು ಜಿಲ್ಲೆಗಳಲ್ಲಿರುವ ನಿರ್ಮಿತ ಪರಂಪರೆ ಮತ್ತು ನೈಸರ್ಗಿಕ ಹಾಗೂ ಸಾಂಸ್ಕೃತಿಕ ಪರಂಪರೆಗಳ ಜ್ಞಾನವನ್ನು ಸಂಗ್ರಹಿಸುವುದು ಮತ್ತು ಸಾರ್ವಜನಿಕರಿಗೆ ತಿಳಿಯಪಡಿಸುವುದು ಅವಶ್ಯಕವಾಗಿದೆ.

 

ವ್ಯಾಪ್ತಿ

 

 

  • ಈ ಮೂರು ಜಿಲ್ಲೆಗಳಲ್ಲಿ ಸಂರಕ್ಷಿತ ಸ್ಮಾರಕಗಳನ್ನು ಹೊರತು ಪಡಿಸಿ ಉಳಿದ ದೇವಾಲಯಗಳು ಕೆಳಗಿನಂತಿವೆ.

 

  • ಶಿವಮೊಗ್ಗ ಜಿಲ್ಲೆ: ಬೇಗೂರು ಈಶ್ವರ ದೇವಾಲಯ, ಹಿರೆಮಾಗಡಿ ಈಶ್ವರ ದೇವಾಲಯ, ಹಂಚೆ ದೇವಾಲಯ, ಸೋಮೇಶ್ವರಮಡ ದೇವಾಲಯ (ಕುಮದ್ವತಿ ನದಿ ದಂಡೆ), ನೇರಲಿಗೆ ವೀರಭದ್ರ ದೇವಾಲಯ, ಪುರ ಸೋಮೇಶ್ವರ ದೇವಾಲಯ, ಕಲ್ಲೂರು ಈಶ್ವರ ದೇವಾಲಯ, ಅಮೃತ ಬಳಿಯಿರುವ ಸುಣ್ಣದ ಬಸದಿ, ಹೊಂಬುಜ ಕಮಠೇಶ್ವರ ದೇವಾಲಯ ಮತ್ತು ಬಿಲ್ಲೇಶ್ವರ ದೇವಾಲಯ, ಆರಗ ದೇವಾಲಯಗಳ ಸಮೂಹ, ನಾಡಕಲಸಿ ಬಿಲ್ಲೇಶ್ವರ ದೇವಾಲಯ, ತಲಗದ್ದೆ ದೇವಾಲಯ, ಮತ್ತೂರು, ಮಾವಳಿ, ಮುತ್ತಳ್ಳಿಯ ಹಾಗೂ ಸಂಡದಲ್ಲಿನ ಗೋಸಾಸ ಶಿಲ್ಪಗಳು, ನಿಲಸ್‌ಕಲ್ಲು, ಮತ್ತು ಬೈಸೆಯ ನಿಲಸ್‌ ಕಲ್ಲುಗಳು. ಆನಂದಪುರ ಬಳಿಯಿರುವ ಚಂಪಕಸರಸ್ಸು ಪುಷ್ಕರಣಿ.

 

  • ಚಿಕ್ಕಮಗಳೂರು ಜಿಲ್ಲೆ: ಖಾಂಡ್ಯ ಮಾರ್ಕಂಡೇಶ್ವರ ದೇವಾಲಯ, ಮುತ್ತಿನಪುರ ಪ್ರಸನ್ನ ವಿರುಪಾಕ್ಷ ದೇವಾಲಯ, ಕಳಸಾಪುರ ಚಲುವ ನಾರಾಯಣ ಮತ್ತು ಮಲ್ಲಿಕಾರ್ಜುನ ದೇವಾಲಯ, ಈಶ್ವರಹಳ್ಳಿ ಲಕ್ಷ್ಮಿನಾರಾಯಣ ದೇವಾಲಯ, ಮುತ್ತಾವರ ಪಾರ್ಶ್ವನಾಥ ಬಸದಿ, ಚಿಕ್ಕಮಗಳೂರು ಸಗಿನ ಮಸೀದಿ, ಹಂಪಾಪುರ ವಿರುಪಾಕ್ಷ ಮತ್ತು ಬಸವೇಶ್ವರ ದೇವಾಲಯ, ಸೋಮಪುರ ಪ್ರಸನ್ನ ಸೋಮೇಶ್ವರ ದೇವಾಲಯ, ಮೂಡಿಗೆರೆ ಸಿಂಘೇಶ್ವರ, ಲಕ್ಷ್ಮಿನಾರಾಯಣ ಮತ್ತು ರಾಮೇಶ್ವರ ದೇವಾಲಯಗಳು, ನಂದಿ ಸಿದ್ದರಾಮೇಶ್ವರ ದೇವಾಲಯ, ಗರ್ಜೆ ಕಲ್ಲೇಶ್ವರ ದೇವಾಲಯ, ಹಂತೂರು ಪಾರ್ಶ್ವನಾಥ ಬಸದಿ, ಕಲ್ಲೇಶ್ವರ ದೇವಾಲಯ, ಕಿಗ್ಗ ಋಷ್ಯಶೃಂಗೇಶ್ವರ ದೇವಾಲಯ, ಜಯಪುರ ಲೋಕೇಶ್ವರ ಮತ್ತು ಚನ್ನಕೇಶವ ದೇವಾಲಯ.

 

  • ಉತ್ತರ ಕನ್ನಡ ಜಿಲ್ಲೆ: ಬನವಾಸಿಯ ಆದಿ ಮಧುಕೇಶ್ವರ ದೇವಾಲಯ ಬಳಿ ಉದ್ಯಾನವನ, ಕುಮಟಾ ಪಾರ್ಶನಾಥ ಬಸದಿ, ಕಾಯಕಿಣಿ ಪಾರ್ಶ್ವನಾಥ ಬಸದಿ, ಭಟ್ಕಳ ರತ್ನತ್ರಯ ಬಸದಿ, ಭಟ್ಕಳ ಬಂಡ ಬಸದಿ (ಜೆಟ್ಟಪ್ಪನಾಯಕನ ಬಸದಿ), ಮೂಡುಭಟ್ಕಳ ಖೇತಪ್ಪನಾರಾಯಣ ದೇವಾಲಯ, ಹಾಡುವಳ್ಳಿ ಚತುರ್ಮುಖ ಬಸದಿ, ಗೋಕರ್ಣ ತೀರ್ಥಗಳು (30 ಸಂಖ್ಯೆ), ಹುಣಸೆಹೊಂಡ ವೆಂಕಟರಮಣ ದೇವಾಲಯ, ಸೋಮಸಾಗರ ಸೋಮೇಶ್ವರ ದೇವಾಲಯ, ಮುತ್ತಿನ ಕೆರೆ ವೆಂಕಟರಮಣ ದೇವಾಲಯ ಬ್ಯಾಗದ್ದೆ ಲಕ್ಷ್ಮೀನಾರಾಯಣ ದೇವಾಲಯ, ಬೆಡಸ್‌ಗಾಂವ್‌ ಬೊಪ್ಪೇಶ್ವರ ದೇವಾಲಯ, ಬಾಡಲಕೊಪ್ಪ ಮಹಂತಿನ ಮಠ, ಒಕ್ಕಳ ಸತ್ಯನಾಥ ದೇವಾಲಯ, ಕಲ್ಲಾಪುರ ವೀರಭದ್ರ ದೇವಾಲಯ, ಕರೂರು ವೀರಭದ್ರ ದೇವಾಲಯ, ಇಸಳೂರು ಈಶ್ವರ ದೇವಾಲಯ, ಭೂಮಿಗೇರಿ ದೇವಾಲಯ ಮತ್ತು ಕೆರೆ, ಬೀಳಗಿಯಲ್ಲಿನ ಗೋಲಬಾವಿ.

 

  • 2010-11ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಾರಂಪರಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಶಿವಮೊಗ್ಗದಲ್ಲಿ “ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ” (ಸರ್ಕಾರಿ ಆದೇಶ ಸಂಖ್ಯೆ: ಕಸಂವಾಪ್ರ 145 ಕೆಎಂಯು 2009 ಬೆಂಗಳೂರು, ದಿನಾಂಕ: 28.10.2010ರನ್ವಯ)ವನ್ನು ರಚಿಸಿ ಆದೇಶಿಸಲಾಗಿದೆ.

 

  • ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 29 ಶಾಸನ 2011, ಬೆಂಗಳೂರು, ದಿನಾಂಕ:28.04.2012ರಂದು ವಿಧೇಯಕ ಅನುಮೋದನೆಗೊಂಡಿರುತ್ತದೆ. ಹಾಗೂ ಸರ್ಕಾರಿ ಆದೇಶ ಸಂಖ್ಯೆ: ಕಸಂವಾಪ್ರ 106 ಕೆಎಂಯು 2012, ಬೆಂಗಳೂರು ದಿನಾಂಕ: 21.05.2012ರಿಂದ ಜಾರಿಗೆ ಬರುವಂತೆ ಅಧಿಸೂಚನೆಯನ್ನು ಹೊರಡಿಸಿದೆ.

 

  • ಪ್ರಸ್ತುತ ಕಛೇರಿಯು ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ.

 

 

ವಿಧೇಯಕ

ಡೌನ್ಲೋಡ್

ಅಧಿಸೂಚನೆ

ಡೌನ್ಲೋಡ್

ನಿಯಮಗಳು

ಡೌನ್ಲೋಡ್

ಇತ್ತೀಚಿನ ನವೀಕರಣ​ : 22-12-2022 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080