ಅಭಿಪ್ರಾಯ / ಸಲಹೆಗಳು

ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಕಿತ್ತೂರು

ಕಿತ್ತೂರು ರಾಣಿ ಚೆನ್ನಮ್ಮ ವಸ್ತು ಸಂಗ್ರಹಾಲಯ

 

ಕಿತ್ತೂರು ಭಾರತ ಸ್ವಾತಂತ್ರ್ಯ ಸಂಗ್ರಾಮದಿಂದಾಗಿ ಈ ನಗರವು ಕ್ರಿ.ಶ. 19 ನೇ ಶತಮಾನದ ಮೊದಲ ದಶಕದಲ್ಲಿ ಪ್ರಾಮುಖ್ಯತೆ ಪಡೆಯಿತು. ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಧ್ರುವ ತಾರೆಯಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ ಹಾಗೂ ಮುನ್ನಡಿಯನ್ನು ಬರೆದರು ಎಂದರೆ ಉತ್ಪ್ರೆಕ್ಷೆಯಾಗಲಾರದು. ಕಿತ್ತೂರು (ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರ) ರಾಷ್ಟೀಯ ಹೆದ್ದಾರಿ 4 ರಲ್ಲಿ ಬೆಂಗಳೂರಿನಿಂದ ವಾಯುವ್ಯದಲ್ಲಿ ಸುಮಾರು 460 ಕಿ.ಮೀ. ಹಾಗೂ ಮುಂಬಯಿಯಿಂದ ಆಗ್ನೇಯದಲ್ಲಿ ಸುಮಾರು 750 ಕಿ.ಮೀ ದೂರದಲ್ಲಿದೆ. ಇಂತಹ ರಾಣಿ ಚೆನ್ನಮ್ಮಳ ಸವಿ ನೆನಪಿಗಾಗಿ ಪ್ರಸ್ತತ ಕೋಟೆಯ ಒಳಗೆ ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯವನ್ನು ಈ ಹಿಂದೆ ಕರ್ನಾಟಕದ ಶಿಕ್ಷಣ ಮಂತ್ರಿಯಾಗಿದ್ದ ಶ್ರೀ ಎಸ್ ಆರ್ ಕಂಠಿಯವರ ಆಸಕ್ತಿಯಿಂದ ಈ ವಸ್ತುಸಂಗ್ರಹಾಲಯವು ಸ್ಥಾಪಿಸಲ್ಪಟ್ಟಿತು. ಅಂದು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು 1967 ಜನವರಿ 10 ರಂದು ಈ ಸಂಗ್ರಹಾಲಯವನ್ನು ಉದ್ಘಾಟಿಸಿದರು. ಈ ವಸ್ತುಸಂಗ್ರಹಾಲಯದಲ್ಲಿ ನಾಲ್ಕು ಗ್ಯಾಲರಿಗಳಿವೆ.

 

ದೇಸಾಯಿ ಮನೆತನದ ವಸ್ತು ವಿಶೇಷಗಳು:

 

ಕ್ರಿ.ಶ.1585ರಿಂದ 1824 ಅ ವರಗೆ ಆಳ್ವಿಕೆ ಮಾಡಿದ ದೇಸಾಯಿ ಅರಸರು  ಕಾಲದ ವಿವಿಧ ಮಾದರಿಗಳ ಕತ್ತಿಗಳು, ಭರ್ಜಿ, ಗುರಾಣಿಗಳು, ಮಹಾದಂಢನಾಯಕ ಬಳಸುತ್ತಿದ್ದ ಚಿಲಕತ್ತು, ರಾಜ ರಾಣಿಯರ, ಸೈನಿಕರ ಉಡುಪುಗಳು, ಪಿರಂಗಿ ಗುಂಡುಗಳು, ವಿವಿಧ ಮಾದರಿಯ ಮಡಿಕೆಗಳು  ಇಲ್ಲಿ ಪ್ರದರ್ಶಿಸಲ್ಪಟ್ಟಿವೆ. ಬ್ರಿಟಿಷರು ಉದ್ದೇಶ ಪೂರ್ವಕವಾಗಿ ನಾಶಮಾಡಿದ ಅರಮನೆಯ ಭವ್ಯ ಉತ್ಕೃಷ್ಟ ಕೆತ್ತನೆಯುಳ್ಳ ಜ್ಯಾಮಿತಿಯ ವಿವಿಧ ವಿನ್ಯಾಸಗಳುಳ್ಳ ತೇಗದ ಮರದ ಬಾಗಿಲುಗಳು, ಕಿಟಕಿಗಳು ಮುಂತಾದ ವಾಸ್ತು ರಚನೆಗಳು ಇಲ್ಲಿ ಪ್ರದರ್ಶಿಸಲ್ಪಟ್ಟಿವೆ.

 

ಶಿಲ್ಪಗಳು ಮತ್ತು ಶಾಸನಗಳು:

 

ಪ್ರಾಚೀನ ಚಾಲುಕ್ಯರಿಂದ (ಸು ಕ್ರಿ.ಶ. 500-753) ಆರಂಭವಾಗಿ ವಿಜಯನಗರೋತ್ತರ (1561ರ ನಂತರ) ಕಾಲದವರಗಿನ ವಿವಿಧ ಶೈಲಿಯ ಹಾಗೂ ಧಾರ್ಮಿಕ ಮತ್ತು ಲೌಕಿಕ ಶಿಲ್ಪಗಳು ಮತ್ತು ಶಾಸನಗಳು ಇಲ್ಲಿವೆ. ಇಲ್ಲಿ ಕಂಡು ಬರುವ ಮುಖ್ಯ ಮೂರ್ತಿಶಿಲ್ಪಗಳು ಯಾವುವೆಂದರೆ  ಆನಂದ ತಾಂಡವ ನಾಟ್ಯಶಿಲ್ಪ ಸಿಂಹದ ಮೇಲೆ ಆಸೀನಳಾಗಿದ್ದು, ಮಹಿಷಾಸುರನ ಮೇಲೆ ಆಕ್ರಮಣ ಮಾಡುತ್ತಿರುವ ನೈಜವಾದ ಹಾಗೂ ಚಲನಾತ್ಮಕ ಲಕ್ಷಣ ಹೊಂದಿದೆ. ಪೌರಾಣಿಕ ಕಥೆಯ ಮೇಲೆ ಆಧಾರಿತ ಬಹಳ ಅಪರೂಪದ ಸುಮಾರು ಕ್ರಿ.ಶ. ಎಂಟನೆಯ ಶತಮಾನದ ಮಹಿಷಮರ್ದಿನಿ ಶಿಲ್ಪ , ಸುಂದರವಾದ ಹಾಗೂ ಉತ್ತಮ ಲಾವಣ್ಯವನ್ನು ಸೂಸುತ್ತಿರುವ ಮದನಿಕ ಶಿಲ್ಪ, ಉತ್ತಮ ಕುಶಲಕಲೆಯ ಶಾಂತವಾದ ಮುದ್ರೆಯ ಖಡ್ಗಾಸನದಲ್ಲಿ 23 ನೆಯ ತಿರ್ಥಂಕರ ಪಾಶ್ವನಾಥ, ವೀರರ ತ್ಯಾಗಕ್ಕೆ ಸಂಖೇತವಾದ ವೀರಗಲ್ಲುಗಳು ಹಾಗೂ ವೀರರ ಸತಿಯಾದಂತಹ ಮಡದಿಯರ ಮಹಾಸತಿ ಕಲ್ಲುಗಳು, ಬಹು ಸುಂದರವಾಗಿ ಖಂಡರಿಸಲ್ಪಟ್ಟಿರುವ ಸಪ್ತಮಾತೃಕೆಯರ ಶಿಲ್ಪಗಳು, ವಿದ್ಯಾಧಿದೇವತೆಯಾದ ಸರಸ್ವತಿ, ದುರ್ಗೆ ಇತ್ಯಾದಿ...  ದೇಸಾಯರ ಕಾಲದ ಧಾನ್ಯ ಬೀಸುವ ಕಲ್ಲುಗಳು ನೀರಿನ ತೊಟ್ಟಿಗಳು ಪ್ರದರ್ಶಿಸಲ್ಪಟ್ಟಿವೆ.      

 

ಕ್ರಿ.ಶ.ಸು 11 ಮತ್ತು 12 ಶತಮಾನದ ಕನ್ನಡ ಶಿಲಾ ಶಾಸನಗಳು ಶಿಲೆ ಹಾಗೂ ತಾಮ್ರ ಫಲಕಗಳ ಮೇಲೆ ಕೆತ್ತಲಾದ ಶಾನಗಳು ಈ ಭಾಗದ ಸಾಂಸ್ಕೃತಿಕ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿರುವ ಒಂದು ಶಾನದಲ್ಲಿ  ಕಿತ್ತೂರಿನ ಉಲ್ಲೇಖವಿದ್ದು ಈ ನಗರ ಕೊನೆಯ ಪಕ್ಷ ಒಂದು ಸಾವಿರ ವರ್ಷಗಳಿಂದ ಇದೇ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದಿತ್ತು ಎಂಬ ಪ್ರಮುಖ ಅಂಶವನ್ನು ತಿಳಿಸುತ್ತದೆ. ವಿಶೇಷವಾಗಿ ತಾಮ್ರದಿಂದ ಮಾಡಿದ ಹಾಗೂ ಮಧ್ಯಕಾಲೀನ ನಾಣ್ಯಗಳು ಪ್ರದರ್ಶನಗೊಂಡಿವೆ.

 

ಆಧುನಿಕ ವರ್ಣಚಿತ್ರಗಳು:

 

ಈ ಭಾಗದ ಕಲಾಕಾರರು ರಚಿಸಿದ ವೈವಿಧ್ಯಮಯವಾದ ವಿವಿಧ ಶೈಲಿಗಳ ಹಾಗೂ ವಿಷಯಗಳ ಸೃಜನಾತ್ಮಕ ಮತ್ತು ನೈಜವಾದ ಆಧುನಿಕ ವರ್ಣಚಿತ್ರಗಳು ಇಲ್ಲಿ ಪ್ರದರ್ಶಿಸಲ್ಪಟ್ಟಿವೆ. ತೀಕ್ಷ ಗ್ರಹಣ ಶಕ್ತಿ ಮುಮ್ಮುಖ ಪರಿಣಾಮ, ವಿವಿಧ ಬಣ್ಣಗಳ ಸಾಮರಸ್ಯ ಹಾಗೂ ವೈಯಕ್ತಿಕ ಶೈಲಿ ಮತ್ತು ತಾಂತ್ರಿಕತೆಗಳೇ ಈ ವರ್ಣಚಿತ್ರಗಳು. ಇವುಗಳು ಪ್ರಮುಖವಾಗಿ ರಾಣಿ ಚೆನ್ನಮ್ಮಳ ಇತಿಹಾಸಕ್ಕೆ ಸಂಬಂಧಿಸಿದ ವರ್ಣಚಿತ್ರಗಳು ನೋಡುಗರಿಗೆ ತುಂಬಾ ಆಕರ್ಷಕವಾಗಿವೆ. ಇವುಗಳಲ್ಲಿ ಕಲ್ಮಠದ ಶ್ರೀಗಳ ವ್ಯಾಖ್ಯಾನ, ರಾಣಿ ಚೆನ್ನಮ್ಮ ಹಾಗೂ ಮಲ್ಲಸರ್ಜರ ಪ್ರಥಮ ಭೇಟಿ ದೃಶ್ಯ, ಯುದ್ಧಕ್ಕೆ ಹೊರಟ ರಾಣಿ ಚೆನ್ನಮ್ಮಳ ಜೊತೆ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರಿನ ಬಾಳಪ್ಪನ ವರ್ಣಚಿತ್ರ, ರಣರಂಗದಲ್ಲಿ ಮಹಾದಂಡನಾಯಕನಾದ ಸರ್ದಾರ್ ಗುರುಸಿದ್ದಪ್ಪನೊಂದಿಗೆ ರಾಣಿ ಚೆನ್ನಮ್ಮ ದೃಶ್ಯ, ಯುದ್ದಕ್ಕೆ ನಿಂತ ಬ್ರಿಟಿಷ್ ಸೇನೆಯೊಂದಿಗೆ ರಾಣಿ ಚೆನ್ನಮ್ಮ ಹಾಗೂ ಕಿತ್ತೂರಿನ ಸೇನೆ, ಅಮಟೂರಿನ ಬಾಳಪ್ಪನ ಗುಂಡಿಗೆ  ಥ್ಯಾಕರೆ ಬಲಿಯಾಗಿರುವ ದೃಶ್ಯ, ಬ್ರಿಟಿಷ್ ಸೈನಿಕರನ್ನು ಬಂಧಿಸಿ ಕರೆದೊಯ್ಯತ್ತಿರುವ ದೃಶ್ಯ, ಬ್ರಿಟಿಷ್ ಮಕ್ಕಳೊಂದಿಗೆ ಅರಮನೆಯಲ್ಲಿ ಆಟವಾಡುತ್ತಿರುವ ರಾಣಿ ಚೆನ್ನಮ್ಮಳ ದೃಶ್ಯಗಳು ನೋಡುಗರಿಗೆ ಮನಮೊಹಕವಾಗಿವೆ. ಅದೇ ರೀತಿಯಾಗಿ ಕು ಪ್ರಭಾವತಿ ವಿ ಹೆದ್ದೂರ್ ಶೆಟ್ಟಿಯವರು 1958 ರಲ್ಲಿ ಎಂಬ್ರಾಯ್ಡರಿಯಲ್ಲಿ ರಚಿಸಿದ ರಾಣಿಚೆನ್ನಮ್ಮಳ ಚಿತ್ರವೂ ತುಂಬಾ ಅದ್ಬುತವಾಗಿದೆ.

 

ಈ ಸಂಗ್ರಹಾಲಯವನ್ನು ಸಂದರ್ಶಿಸುವುದೇ ಒಂದು ಸ್ವಾಗತಾರ್ಹ ಅನುಭವ. ಇದು ಆಕರ್ಷಣೀಯವು ಮತ್ತು ಸ್ಪೂರ್ತಿದಾಯಕವೂ ಆಗಿದ್ದು, ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಉಜ್ವಲ ಘಟನೆಯನ್ನು ಇಲ್ಲಿ ಸಂದರ್ಶೀಸುವ ಪ್ರವಾಸಿಗರ ಸ್ಮೃತಿಪಟಲದ ಮುಂದೆ ತರುತ್ತದೆ. ಈ ವಸ್ತುಸಂಗ್ರಹಾಲಯವು ವಾರದ ಎಲ್ಲಾ ದಿನಗಳಲ್ಲಿ (ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ) ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 5:30 ರ ವರಗೆ ತೆರೆದಿರುತ್ತದೆ.

 

ಇತ್ತೀಚಿನ ನವೀಕರಣ​ : 14-10-2020 04:29 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080