ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತುಸಂಗ್ರಹಾಲಯ ಅಥಣಿ

ಅಥಣಿಯು ಬೆಳಗಾವಿ ಜಿಲ್ಲೆಯಿಂದ ಈಶಾನ್ಯಕ್ಕೆ 155 ಕಿ.ಮೀ. ದೂರದಲ್ಲಿದ್ದು ಬೆಳಗಾವಿ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಹಾಗೂ ದೂರದಲ್ಲಿರುವ ತಾಲ್ಲೂಕು ಕೇಂದ್ರವಾಗಿದೆ. ಇದು ಮಹಾರಾಷ್ಟ್ರ ರಾಜ್ಯದ ಜತ್ತ ಹಾಗೂ ಸಾಂಗ್ಲಿ, ಕರ್ನಾಟಕದ ಬಿಜಾಪುರ, ಬಾಗಲಕೋಟೆ ಜಿಲ್ಲೆಗಳನ್ನು ಗಡಿಗಳಾಗಿ ಹೊಂದಿದೆ. ಕೃಷ್ಣ ನದಿಯು ಅಥಣಿ ತಾಲ್ಲೂಕಿನ ಜೀವಾಳವಾಗಿದ್ದು, ಇದರಿಂದ ಇಲ್ಲಿಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸಂಪತ್ಭರಿತ ಪ್ರದೇಶವಾಗಿದೆ. ಕೃಷ್ಣ ನದಿಯ ಪಾತ್ರದಲ್ಲಿ ಶಿಲಾಯುಗದ ಕಾಲದಿಂದಲೂ ಈ ಭಾಗದಲ್ಲಿ ಮಾನವನ ಚಟುವಟಿಕೆಯಿಂದಿರುವುದು ಈ ಭಾಗದಲ್ಲಿ ದೊರೆತ ಶಿಲಾಯುಧಗಳಿಂದ ತಿಳಿದುಬರುತ್ತದೆ. ಈ ಪ್ರದೇಶವು ಪರಮಪೂಜ್ಯ ಮುರುಘೇಂದ್ರ ಶಿವಯೋಗಿಗಳು ನಡೆದಾಡಿದ ನೆಲವಾಗಿದ್ದು, ಇದು ಪ್ರಾಚೀನ ಕಾಲದಿಂದಲೂ ತುಂಬಾ ಪ್ರಸಿದ್ದಿಯನ್ನು ಪಡೆದ ಪ್ರದೇಶವಾಗಿದೆ.

 

ಅಥಣಿ ವಸ್ತುಸಂಗ್ರಹಾಲಯವು ಸ್ಥಳೀಯ ವಸ್ತುಸಂಗ್ರಹಾಲಯವಾಗಿದ್ದು ಇದನ್ನು ಶ್ರೀಮತಿ ಲೀಲಾವತಿ ಆರ್ ಪ್ರಸಾದ್‍ರವರ ಆಸಕ್ತಿಯಿಂದ ಇಲ್ಲಿ ಮೂರ್ತಿಶಿಲ್ಪಗಳ ಗ್ಯಾಲರಿಯನ್ನು ಸ್ಥಾಪಿಸಲಾಯಿತು. ಈ ವಸ್ತುಸಂಗ್ರಹಾಲಯವನ್ನು ದಿನಾಂಕ 03-03-2002ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳಾಗಿದ್ದ ಶ್ರೀಮತಿ ರಾಣಿ ಸತೀಶ್‍ರವರು ಉದ್ಘಾಟಿಸಿದರು. ಅಥಣಿ ತಾಲ್ಲೂಕು ಸುತ್ತ ಮುತ್ತಲಿನ ಸ್ಥಳಗಳಿಂದ ಅನೇಕ ಮೂರ್ತಿಶಿಲ್ಪಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ 12 ನೇ ಶತಮಾನದಿಂದ ವಿಜಯ ನಗರೋತ್ತರ ಕಾಲದ ವರೆಗಿನ ಹಲವಾರು ಧಾರ್ಮಿಕ ಮತ್ತು ಲೌಕಿಕ ಶಿಲ್ಪಗಳು ಮತ್ತು ಶಾಸನಗಳನ್ನು ನೋಡ ಬಹುದಾಗಿದೆ. ಒಟ್ಟು 69 ವಸ್ತುಗಳ ಸಂಗ್ರಹವಿದೆ.

 

ಇವುಗಳಲ್ಲಿ ಮುಖ್ಯವಾದ ಶಿಲ್ಪಗಳೆಂದರೆ ಉಮಾ-ಮಹೇಶ್ವರ, ನೃತ್ಯಭಂಗಿಯಲ್ಲಿರುವ ಶಿಲ್ಪಗಳು, ಭೈರವ, ದುರ್ಗಾ, ಭಕ್ತೆ, ಗಣಪತಿ, ನಾಗ-ನಾಗಿಣಿ ಶಿಲ್ಪಗಳು, ವೀರಗಲ್ಲುಗಳು, ಮಾಸ್ತಿ ಕಲ್ಲುಗಳು, ನಿಷಿಧಿ ಕಲ್ಲು, ಶಾಸನ ಶಿಲ್ಪಗಳು ಇನ್ನೂ ಮುಂತಾದ ಮೂರ್ತಿಶಿಲ್ಪಗಳು ಪ್ರಮುಖವಾದವುಗಳಾಗಿವೆ. ಇವುಗಳಲ್ಲಿ ಭೈರವ, ಸಂಗಿತಗಾರ್ತಿ, ಸೂರ್ಯನ ಶಿಲ್ಪಗಳು ತುಂಬಾ ಸುಂದರವಾಗಿವೆ. ಇತ್ತೀಚೆಗೆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ, ಸಂಶೋಧನಾ ವಿದ್ಯಾರ್ಥಿಗಳು, ಇತಿಹಾಸ ಆಸಕ್ತಿಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅಥಣಿ ಪ್ರದೇಶದ ಇತಿಹಾಸ ಪರಿಚಯವನ್ನು ಮಾಡಿಕೊಡುವಂತೆ ಇದೆ.

ಇತ್ತೀಚಿನ ನವೀಕರಣ​ : 17-10-2020 01:06 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080