ಅಭಿಪ್ರಾಯ / ಸಲಹೆಗಳು

ಪ್ರಾಚೀನ ಸ್ಮಾರಕಗಳು

ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ, 1961 ಕಲಂ 2(1) ರನ್ವಯಪ್ರಾಚೀನ ಸ್ಮಾರಕಎಂದರೆ ಯಾವುದೇ ರಚನೆ, ನಿರ್ಮಾಣ ಅಥವಾ ಸ್ಮಾರಕ ಅಥವಾ ಯಾವುದೇ ಪ್ರಾಚ್ಯ ನಿವೇಶನ ಅಥವಾ ಗೋರಿಯ ಸ್ಥಳ, ಅಥವಾ ಶಿಲಾಗುಹೆ, ಶಿಲಾ-ಶಿಲ್ಪ, ಶಿಲಾಶಾಸನ, ನಾಣ್ಯಗಳು, ಐತಿಹಾಸಿಕ ಪುರಾತತ್ವ ಅಥವಾ ಕಲಾತ್ಮಕ ಆಸಕ್ತಿಯನ್ನು ಹೊಂದಿದ ಮತ್ತು 100 ವರ್ಷಗಳಿಗಿಂತ ಹೆಚ್ಚು ಅಸ್ತಿತ್ವದಲ್ಲಿರುವಂತಹ ಪ್ರಾಚ್ಯಾವಶೇಷಗಳನ್ನು ಒಳಗೊಂಡಿದೆ.

 

  1. ಪ್ರಾಚೀನ ಸ್ಮಾರಕದ ಪ್ರಾಚ್ಯಾವಶೇಷಗಳು
  2. ಪ್ರಾಚೀನ ಸ್ಮಾರಕದ ಸ್ಥಳ
  3. ಸ್ಮಾರಕದ ಆವರಣದಲ್ಲಿ ಫೆನ್ಸಿಂಗ್ ಹಾಕಲು ಅಥವಾ ಮುಚ್ಚಲು ಸಂರಕ್ಷಣೆಗೆ ಅಗತ್ಯವಿರುವ ಪುರಾತನ ಸ್ಮಾರಕದ ಸ್ಥಳಕ್ಕೆ ಹೊಂದಿಕೊಂಡಿರುವ ಭೂಭಾಗ, ಮತ್ತು
  4. ಪ್ರಾಚೀನ ಸ್ಮಾರಕದ ಪ್ರವೇಶ ಸಾಧನಗಳು ಮತ್ತು ಅನುಕೂಲಕರ ಪರಿಶೀಲನೆಯ ಸಾಧನೆಗಳು ಇವುಗಳನ್ನು ಒಳಗೊಳ್ಳುತ್ತದೆ. ಇದು ರಾಷ್ಟ್ರೀಯ ಮಹತ್ವದ್ದೆಂದು ಸಂಸತ್ತು ರಚಿಸಿದ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಘೋಷಿಸಲಾದ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಒಳಗೊಳ್ಳತಕ್ಕದಲ್ಲ;

 

ಪುರಾತತ್ವ ಸ್ಥಳ ಮತ್ತು ಅವಶೇಷಗಳು”:

 

ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ, 1961 ಕಲಂ 2 (3)ರನ್ವಯಪುರಾತತ್ವ ಸ್ಥಳ ಮತ್ತು ಅವಶೇಷಗಳುಎಂದರೆ ನೂರು ವರ್ಷಗಳಿಗಿಂತಲೂ ಕಡಿಮೆಯಿಲ್ಲದ ಅಸ್ತಿತ್ವದಲ್ಲಿರುವಂಥ ಐತಿಹಾಸಿಕ ಅಥವಾ ಪುರಾತತ್ವ ಮಹತ್ವವುಳ್ಳ ಭಗ್ನಾವಶೇಷಗಳು ಅಥವಾ ಪ್ರಾಚ್ಯಾವಶೇಷಗಳನ್ನು ಒಳಗೊಂಡಿರುವ ಯಾವುದೇ ಪ್ರದೇಶ; ಮತ್ತು ಇದಕ್ಕೆ ಹೊಂದಿಕೊಂಡಂತೆ 

 

  1. ಫೆನ್ಸಿಂಗ್ ಅಥವಾ ಅದನ್ನು ಸಂರಕ್ಷಿಸಲು ಅಗತ್ಯವಿರುವ ಪ್ರದೇಶಕ್ಕೆ ಹೊಂದಿ ಕೊಂಡಿರುವಂತಹ ಭೂ ಭಾಗ, ಮತ್ತು
  2. ಪ್ರವೇಶದ ವಿಧಾನಗಳು ಮತ್ತು ಪ್ರದೇಶದ ಪರಿಶೀಲನೆ.

 

ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳಾಗಿ ಘೋಷಣೆ :

 

ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ, 1961 ಕಲಂ 4 (1) ರನ್ವಯ ಸರ್ಕಾರವು, ಯಾವುದೇ ಪ್ರಾಚೀನ ಸ್ಮಾರಕವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸತಕ್ಕದೆಂದು ಅಭಿಪ್ರಾಯಪಡುವಲ್ಲಿ, ಅದು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಮಾತ್ರ. ಅಂಥ ಪ್ರಾಚೀನ ಸ್ಮಾರಕವನ್ನು ಒಂದು ಸಂರಕ್ಷಿತ ಸ್ಮಾರಕವಾಗಿ ಘೋಷಿಸಲು ಅದರ ಉದ್ದೇಶದ ಬಗ್ಗೆ ಎರಡು ತಿಂಗಳುಗಳ ನೋಟೀಸನ್ನು ಕೊಡಬಹುದು ಮತ್ತು ಅಂಥ ಪ್ರತಿಯೊಂದು ಅಧಿಸೂಚನೆಯ ಒಂದು ಪ್ರತಿಯನ್ನು ಸ್ಮಾರಕದ ಸಮೀಪದ ಬಳಿ  ಕಾಣುವ ಸ್ಥಳದಲ್ಲಿ ಅಂಟಿಸತಕ್ಕದ್ದು.

 

  • ಇಂತಹ ಯಾವುದೇ ಪ್ರಾಚೀನ ಸ್ಮಾರಕದಲ್ಲಿ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಅಧಿಸೂಚನೆಯನ್ನು ಹೊರಡಿಸಿದ ತರುವಾಯ, ಎರಡು ತಿಂಗಳೊಳಗೆ ಸ್ಮಾರಕವನ್ನು ಸಂರಕ್ಷಿತ ಸ್ಮಾರಕವಾಗಿ ಘೋಷಿಸುವ ಬಗ್ಗೆ ಆಕ್ಷೇಪಿಸಬಹುದು.

 

  • ಎರಡು ತಿಂಗಳುಗಳ ಸದರಿ ಅವಧಿಯು ಮುಕ್ತಾಯವಾದ ಮೇಲೆ ಸರ್ಕಾರವು ಅದು ಸ್ವೀಕರಿಸಿದ ಅಕ್ಷೇಪಣೆಗಳು ಯಾವುದಾದರೂ ಇದ್ದರೆ, ಅವುಗಳನ್ನು ಪರಿಶೀಲಿಸಿದ ತರುವಾಯ ಪ್ರಾಚೀನ ಸ್ಮಾರಕವು ಸಂರಕ್ಷಿತ ಸ್ಮಾರಕವಾಗಿರುವುದಾಗಿ ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಘೋಷಿಸಬಹುದು.

 

  • (3)ನೇ ಉಪಪ್ರಕರಣದ ಮೇರೆಗೆ ಪ್ರಕಟಿಸಲಾದ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳದ ಹೊರತು ಮತ್ತು ಅಲ್ಲಿಯವರೆಗೆ ಪ್ರಾಚೀನ ಸ್ಮಾರಕವು ಅಧಿನಿಯಮದ ಉದ್ದೇಶಗಳಿಗಾಗಿ ಸಂರಕ್ಷಿತ ಸ್ಮಾರಕವಾಗಿರುವ ಬಗ್ಗೆ ನಿರ್ಣಾಯಕ ಸಾಕ್ಷ್ಯವಾಗಿರತಕ್ಕದು.

 

ಕರ್ನಾಟಕ ರಾಜ್ಯದಲ್ಲಿ ಸುಮಾರು 25,000 ರಿಂದ 30,000ಕ್ಕೂ ಹೆಚ್ಚು ಅರಕ್ಷಿತ ಸ್ಮಾರಕಗಳು ಹರಡಿವೆ. ಇವುಗಳಲ್ಲಿ 848 ಸ್ಮಾರಕಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕವೆಂದು ಇಲಾಖೆಯು ಘೋಷಿಸಿದೆ.  ಭಾರತೀಯ ಪುರಾತತ್ವ ಸರ್ವೇಕ್ಷಣಾ ವ್ಯಾಪ್ತಿಯಲ್ಲಿ ಒಟ್ಟು 609 ಸ್ಮಾರಕಗಳು ರಾಷ್ಟ್ರೀಯ ಸಂರಕ್ಷಿತ ಸ್ಮಾರಕವೆಂಬುದಾಗಿ ಘೋಷಿಸಲಾಗಿದೆ.

 

  • ಕರ್ನಾಟಕ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಸಂರಕ್ಷಿತ ಸ್ಮಾರಕಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ.

 

 

 

ವಿಭಾಗಾವಾರು ಸಂರಕ್ಷಿತ ಸ್ಮಾರಕಗಳ ಸಂಖ್ಯೆ ಹಾಗೂ ಶೇಕಡವಾರು

 

 

ಕ್ರ ಸಂ

ವಿಭಾಗ

ರಾಜ್ಯ

ರಾಷ್ಟ್ರೀಯ (ಎಎಸ್)

ಒಟ್ಟು ಸಂರಕ್ಷಿತ

ಸಂಸ್ಥೆ / ನೆಲೆಗಳು

ಸಂಸ್ಥೆ / ನೆಲೆಗಳು

ಸ್ಮಾರಕಗಳು

ಸಂ.

ಒಟ್ಟು ಪ್ರತಿ %

ಸಂ.

ಒಟ್ಟು ಪ್ರತಿ %

ಸಂ.

ಒಟ್ಟು ಪ್ರತಿ %

1

ಬೆಂಗಳೂರು

105

12.44

63

10.34

168

11.56

2

ಬೆಳಗಾವಿ

365

43.25

311

51.07

676

46.52

3

ಕಲಬುರಗಿ

249

29.50

164

26.93

413

28.42

4

ಮೈಸೂರು

129

14.81

71

11.66

196

13.51

                      ಒಟ್ಟು

848

100.00

609

100.00

1453

100.00

 

 

2020-21ನೇ ಸಾಲಿನ ಆಯ್ಯವ್ಯಯ ಭಾಷಣ ಕಂಡಿಕೆ (253) ರನ್ವಯ ಗ್ರಾಮವಾರು ಸರ್ವೆ ಕಾರ್ಯದ ಮೂಲಕ ರಾಜ್ಯದಲ್ಲಿರುವ ನಿರ್ಲಕ್ಷಿತ ಸ್ಮಾರಕಗಳು/ ಶಿಲಾ ಶಾಸನಗಳು/ ಪ್ರಾಚೀನ ಅವಶೇಷಗಳ ದಾಖಲೀಕರಣವನ್ನು ಇಲಾಖಾವತಿಯಿಂದ ಹಂತ ಹಂತವಾಗಿ ಕೈಗೊಂಡು ಬರಲಾಗುತ್ತಿದೆ.

 

2019-20 ಮತ್ತು 2020-21 ನೇ ಸಾಲು

ಗ್ರಾಮಗಳು

2596

ಸ್ಮಾರಕಗಳು

2390

ಶಾಸನಗಳು

1312

ಶಿಲಾ ಶಿಲ್ಪಗಳು

4587

ಪ್ರಾಚ್ಯ ಸ್ಥಳಗಳು

485

ಒಟ್ಟು

8774

 

 

ಇತ್ತೀಚಿನ ನವೀಕರಣ​ : 01-08-2023 11:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080