ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತುಸಂಗ್ರಹಾಲಯ ಹೂವಿನಹಡಗಲಿ

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪ್ರಾಚ್ಯವಸ್ತು ಸಂಗ್ರಹಾಲಯದ ಪ್ರಾರಂಭ :

 

ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪ್ರಾಚ್ಯವಸ್ತು ಸಂಗ್ರಹಾಲಯವನ್ನು ದಿನಾಂಕ: 11.07.1999ರಂದು ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರ ಉದ್ಘಾಟನೆಯೊಂದಿಗೆ ಪ್ರಾರಂಭಿಸಲಾಯಿತು.  ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲ್ಲೂಕು ಪ್ರದೇಶಗಳಲ್ಲಿ ದೊರೆತ ಪ್ರಾಚ್ಯವಸ್ತುಗಳನ್ನು ಸಂರಕ್ಷಿಸಿ ಪ್ರದರ್ಶಿಸಲಾಗಿದೆ.

 

ಹೂವಿನಹಡಗಲಿ ವಸ್ತುಸಂಗ್ರಹಾಲಯದಲ್ಲಿರುವ ವಿಭಾಗಗಳು:

 

ಒಂದನೇ ಮೂರ್ತಿ ಶಿಲ್ಪಗಳ ಗ್ಯಾಲರಿ:

 

ಒಂದನೇ ಮೂರ್ತಿ ಶಿಲ್ಪಗಳ ಗ್ಯಾಲರಿಯಲ್ಲಿ ಚಾಲ್ಯುಕ್ಯ, ಹೊಯ್ಸಳ ಹಾಗೂ ವಿಜಯ ನಗರ ಕಾಲದ ನಾಗಶಿಲ್ಪ, ಭೈರವಿ, ಕೃಷ್ಣ ಮತ್ತು ಗೋಪಿಕಾಸ್ತ್ರೀ, ಶಿವ, ಪಂಚಲಿಂಗ, ಲಕ್ಷ್ಮಿನರಸಿಂಹ, ಕಾಳಿ, ರಾಮ, ದಕ್ಷಬ್ರಹ್ಮ, ಆಂಜನೇಯ, ರಾಜದಂಪತಿ ಇನ್ನು ಮುಂತಾದ ಮೂರ್ತಿ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.

 

ಎರಡನೇ ಮೂರ್ತಿ ಶಿಲ್ಪಗಳ ಗ್ಯಾಲರಿ :

 

ಎರಡನೇ ಮೂರ್ತಿ ಶಿಲ್ಪಗಳ ಗ್ಯಾಲರಿಯಲ್ಲಿ ಮೈಲಾರ ಗ್ರಾಮದ ಪ್ರದೇಶದಲ್ಲಿ ಸಂಗ್ರಹಿಸಿದ ವೀರಗಲ್ಲು, ಗಜಲಕ್ಷ್ಮಿ, ನಂದಿ, ಮೈಲಾರಲಿಂಗ, ಉಗ್ರ ನರಸಿಂಹ, ಗರುಡಪೀಠ, ವಿಷ್ಣು, ಗಣೇಶ ಇನ್ನು ಮುಂತಾದ ಮೂರ್ತಿ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.

 

ಹೊರಭಾಗದ ಗಾರ್ಡ್‍ನಲ್ಲಿ ಪ್ರದರ್ಶಿಸಿರುವ ಶಿಲ್ಪಗಳು:

 

ಚಾಲುಕ್ಯ, ಹೊಯ್ಸಳ, ವಿಜಯನಗರ ಕಾಲದ ಕನ್ನಡ ಶಿಲಾಶಾಸನಗಳು, ನಂದಿ, ನಾಗಶಿಲ್ಪ, ರಾಮ, ಲಕ್ಷ್ಮಣ ಗಣೇಶ, ವೀರಗಲ್ಲು, ತೀರ್ಥಂಕರ ಮೂರ್ತಿ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.

          

ಇತ್ತೀಚಿನ ನವೀಕರಣ​ : 14-10-2020 04:52 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080