ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತುಸಂಗ್ರಹಾಲಯ ರಾಯಚೂರು

ವಸ್ತು ಸಂಗ್ರಹಾಲಯದ ಮಾದರಿ    

ಪ್ರಾಚ್ಯ ವಸ್ತುಗಳ ಸಂಗ್ರಹಾಲಯ

ಸ್ಥಾಪನೆಯಾದ ವರ್ಷ

18ನೇ ಆಗಸ್ಟ್ 1978

ಒಡೆತನ / ಯಾರ ಅಧೀನದಲ್ಲಿದೆ

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ

ವಸ್ತು ಸಂಗ್ರಹಾಲಯದ ಕಟ್ಟಡದ ಇತಿಹಾಸ

ರಾಯಚೂರು ನಗರದ ಪ್ರಾಚೀನ ಪ್ರವೇಶ ದ್ವಾರಗಳಲ್ಲಿ ನೌರಂಗಿ ದರವಾಜ (ಕ್ರಿ.ಶ.15-17ನೇ ಶತಮಾನ) ಸ್ಮಾರಕ ಕೂಡ ಒಂದಾಗಿದ್ದು, ಇದು ರಾಜ್ಯ ಸಂರಕ್ಷಿತ ಸ್ಮಾರಕವಾಗಿರುತ್ತದೆ.  ಸದರಿ ಪ್ರವೇಶ ದ್ವಾರವು ನಗರದ ಉತ್ತರ ದಿಕ್ಕಿನ ಪ್ರವೇಶ ದ್ವಾರವಾಗಿದ್ದು, ಪುರಾತನ ಮುಸ್ಲಿಂ ಗೋಡೆಗೆ ಹೊಂದಿಕೊಂಡಿದೆ.  ವಾಸ್ತು ಶಿಲ್ಪದ ದೃಷ್ಟಿಯಿಂದ ಇದು ವ್ಯವಸ್ಥಿತ ರಚನೆಯಾಗಿದ್ದು, ಗೋಡೆಗಳ ಮೇಲೆ ಶಿಲ್ಪಗಳು ಮತ್ತು ಹೂಬಳ್ಳಿಗಳ ಕೆತ್ತನೆ ಮತ್ತು ಅಲಂಕಾರದಿಂದ ಕೂಡಿದೆ.  ಇದರ ಮೇಲೆ ಕೆತ್ತಲಾದ ಪೌರಾಣಿಕ ಮತ್ತು ಕಲಾತ್ಮಕ ವಿಶಿಷ್ಟತೆಗಳಿಂದಾಗಿ ಇದು ಹಿಂದೂ ರಚನೆಯಾಗಿ ಕಂಡುಬರುತ್ತದೆ.  ಪ್ರವೇಶ ದ್ವಾರವು ಎರಡೂ ಬದಿಯಲ್ಲಿ ಭದ್ರ ಕೋಟೆಗಳಿಂದ ಸುತ್ತುವರೆದಿದೆ.  ಹಾಗೂ ಇದರಲ್ಲಿ ಐದು ಹೆಡೆಗಳುಳ್ಳ ಸರ್ಪದ ಕಿರೀಟವನ್ನು ಹೊಂದಿರುವ ಹಾಗೂ ಮೀನಿನ ಮೇಲೆ ಧ್ಯಾನದಲ್ಲಿ ಕುಳಿತಿರುವ ನಾಗಾ ರಾಜನ ಗೋಡೆ ಶಿಲ್ಪವು ಅದ್ಭುತವಾಗಿದೆ.  ಸದರಿ ಸ್ಮಾರಕವನ್ನು ವಸ್ತು ಸಂಗ್ರಹಾಲಯದ ಕಟ್ಟಡವನ್ನಾಗಿ ಬಳಸಲಾಗುತ್ತಿದೆ.

ವಿಸ್ತೀರ್ಣ

51.23ಮೀ.*65.37ಮೀ.

ಮಹತ್ವ

ರಾಯಚೂರು ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ಐತಿಹಾಸಿಕ ಅಂಶಗಳನ್ನು ಒಳಗೊಂಡ ಪ್ರಾದೇಶಿಕ ಇತಿಹಾಸಕ್ಕೆ ಈ ವಸ್ತು ಸಂಗ್ರಹಾಲಯವನ್ನು ಮೀಸಲಿ- ಡಲಾಗಿದೆ.  ಇದು ಸಂಶೋಧಕರಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ಜನರಿಗೆ ಮತ್ತು ಶಾಲಾ ಮಕ್ಕಳಿಗೆ ಸ್ಥಳೀಯ ಇತಿಹಾಸದ ಕುರಿತು ಶಿಕ್ಷಣ ನೀಡುವ ಅತ್ಯಂತ ಉಪಯುಕ್ತ ಉದ್ದೇಶವನ್ನು ಪೂರೈಸುತ್ತಿದೆ.

ಸಂಗ್ರಹಗಳು

ಪೂರ್ವ ಐತಿಹಾಸಿಕದಿಂದ ಆರಂಭಿಕ ಐತಿಹಾಸಿಕ:

 

ರಾಯಚೂರು ಜಿಲ್ಲೆಯ ಮಸ್ಕಿ, ಮಾನ್ವಿ, ಮಲಿಯಾಬಾದ್ ಹಾಗೂ ರಾಯಚೂರು ತಾಲ್ಲೂಕಿನಿಂದ ಸಂಗ್ರಹಿಸಿದ ಪೂರ್ವ-ಐತಿಹಾಸಿಕ ಕಾಲದ ಶಿಲಾ ಆಯುಧಗಳು, ಉಪಕರಣಗಳು, ಮಡಿಕೆ ಚೂರುಗಳು, ಟೆರಾಕೋಟಾ ಮಣಿಗಳು, ಶೆಲ್ ಬಳೆ ಚೂರುಗಳು, ಗಾಜಿನ ಬಳೆ ಚೂರುಗಳು, ನವಶಿಲಾಯುಗದ ಕೈಗೊಡಲಿಗಳು, ಮಣಿ ಹಾರಗಳು ಕುಂಬಾರಿಕೆ ವಸ್ತುಗಳ ತುಣುಕುಗಳನ್ನು ಹಾಗೂ ಧಾನ್ಯದ ಕಲ್ಲುಗಳನ್ನು ಸಹ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.  

ನಾಣ್ಯಗಳು:

 

ವಸ್ತು ಸಂಗ್ರಹಾಲಯದಲ್ಲಿ ಒಟ್ಟು 14 ನಾಣ್ಯಗಳ ಸಂಗ್ರಹವಿದೆ. ಅವುಗಳಲ್ಲಿ ಎಂಟು ನಾಣ್ಯಗಳು ತಾಮ್ರದಿಂದ, ನಾಲ್ಕು ನಾಣ್ಯಗಳು ನಿಕ್ಕಲ್ ಮತ್ತು ಎರಡು ನಾಣ್ಯಗಳು ಅಲ್ಯೂಮಿನಿಯಂನಿಂದ ಕೂಡಿದೆ.  ಈ ನಾಣ್ಯಗಳು 19 ರಿಂದ 20ನೇ ಶತಮಾನದವುಗಳಾಗಿವೆ.  ಇವುಗಳು ಹೆಚ್ಚು ಪ್ರಾಚೀನ ಮೌಲ್ಯವಿಲ್ಲದಿದ್ದರೂ, ಈ ನಾಣ್ಯಗಳು ಭಾರತದಲ್ಲಿನ ಕರೆನ್ಸಿ ವ್ಯವಸ್ಥೆಯನ್ನು  ಮತ್ತು ಅವುಗಳನ್ನು ಎಷ್ಟು ಕಲಾತ್ಮಕವಾಗಿ ತಯಾರಿಸಲಾಗುತ್ತಿತ್ತು ಎಂಬುದು ವ್ಯಕ್ತವಾಗುತ್ತದೆ.

 

ಅವುಗಳೆಂದರೆ: ಜಾರ್ಜ್-VI, V, VI, ಕ್ವಾರ್ಟರ್ ಅನ್ನಾ, ಹಾಫ್ ಅನ್ನಾ ಇತ್ಯಾದಿ.,

 

 

 

 

 

 

 

 

ವರ್ಣಚಿತ್ರಗಳು:

 

 ಕರ್ನಾಟಕವು ತನ್ನದೇ ಆದ ಕಲಾ ಶಾಲೆಯನ್ನು ಅಭಿವೃದ್ಧಿಪಡಿಸಿತ್ತು. ಚಿತ್ರಕಲೆ ಅದರ ಒಂದು ರೂಪ ಮತ್ತು ವಸ್ತು ಸಂಗ್ರಹಾಲಯದ ಆಸಕ್ತಿದಾಯಕ ವಿಭಾಗವಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾದ ವರ್ಣಚಿತ್ರಗಳು ವಿಭಿನ್ನ ಪ್ರಭೇದಗಳ ವಿಶಿಷ್ಟ ಉದಾಹರ ಣೆಗಳಾಗಿವೆ. ಅವುಗಳು ರುಮಲೆ ಚನ್ನಬಸವಯ್ಯನವರ ಕುಸುಮ್ ರೋಹ್ನಾ, ಹನುಮಯ್ಯನವರ ರಾತ್ರಿ ಸಮಯದಲ್ಲಿ ಮೈಸೂರು, ಎಂ.ನರೇಂದ್ರ ಕುಮಾರ್ ರವರ ಮಹಿಳಾ ಶೋಷಣೆ ಮತ್ತು ರಾಮಾಯಣ, ವಿಠಲ್ ಭಂಡಾರಿಯವರ    ಲವ್ ಹಾರ್ಟ್ಸ, ಹೆಚ್. ನಾಗರಾಜು ರವರ ಒಂದು ದೇವಸ್ಥಾನದ ಚಿತ್ರ, ಜೆ.ಎಮ್.ಎಸ್.ಮಣಿ ಅವರ ಪೌಂಟ್ ಟಾಗ್ ಚಿತ್ರಕಲೆ, ಕಾಳಿದಾಸ ಪತ್ತಾರ ಅವರ ಸಿಟಿ ಆಫ್ ಲವ್, ಕಾಳಪ್ಪನವರ ಲ್ಯಾಂಡ್ ಸ್ಕೇಪ್ ಚಿತ್ರಕಲೆ, ಪಿ.ಎನ್. ಚಾಯಲ್ ಅವರ ಬಫೆಲೊ ದೃಶ್ಯದ ಚಿತ್ರಕಲೆ, ಗೋವಿಂದನ್ ಅವರ ದೋಣಿ ಚಿತ್ರಕಲೆ, ಕಮಲಾ ರಾಜ್ ಗೋಪಾಲನ್ ಅವರ ಗೋವರ್ಧನ ಗಿರಿಧರ ಮತ್ತು ಎ ಫಾರೆಸ್ಟ್ ಸೀನ್ ಇತ್ಯಾದಿ., ವರ್ಣಚಿತ್ರಗಳನ್ನು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.

ಶಿಲ್ಪಗಳು:

 

ಕ್ರಿ.ಶ.12-17ನೇ ಶತಮಾನದ ಶಿಲಾ ಶಿಲ್ಪಗಳನ್ನು ವಸ್ತು ಸಂಗ್ರಹಾಲಯದ ಅಂಕಣಗಳು ಹಾಗೂ ಸಭಾಂಗಣಗಳಲ್ಲಿ ಪ್ರದರ್ಶಿಸಲಾಗಿದೆ. ಅವುಗಳೆಂದರೆ: ಭಗವಾನ್ ಗಣೇಶ್, ಉಮಾ-ಮಹೇಶ್ವರ, ನಂದಿ, ನೃತ್ಯ ಭಂಗಿಯ ಸ್ತ್ರೀ ಶಿಲ್ಪಗಳು, ಪ್ರಾಣಿಗಳ ಸಾಲುಗಳು, ಪಾರ್ಶ್ವನಾಥ, ಜೈನ ವಿಗ್ರಹಗಳು, ವಿಷ್ಣು, ಪುರುಷ ವಿಗ್ರಹಗಳು, ಗೂಳಿಯ ಕಾಲು, ನಾಗ ಶಿಲ್ಪಗಳು, ನಿಂತಿರುವ ದಂಪತಿಗಳ ಶಿಲ್ಪ, ಸರಸ್ವತಿ, ಷಣ್ಮುಖ, ಆನೆ ಫಲಕಗಳು, ವೇಣು ಗೋಪಾಲ, ರಾಮಾನುಜಾಚಾರ್ಯ, ದ್ವಾರಪಾಲಕ, ವೀರಗಲ್ಲುಗಳು, ದೇವಾಲಯದ ಕಂಬಗಳು ಮತ್ತು ಫಿರಂಗಿ ತೋಪುಗಳಲ್ಲಿ ಬಳಸುತ್ತಿದ್ದ ಕಲ್ಲಿನ ಗುಂಡುಗಳು ಹಾಗೂ 16ನೇ ಶತಮಾನದ ಒಂದು ಶಾಸನವನ್ನು ಸಹ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

 

ಈ ಶಿಲ್ಪಗಳನ್ನು ಜಿಲ್ಲೆಯ ಆನೆಗುಂದಿ, ಗಬ್ಬೂರು, ಗಂಗಾವತಿ, ಗುಡಿ ಜಾವೂರು, ಕರಡಿ ಗ್ರಾಮ, ರಾಯಚೂರು ಮುಂತಾದ ಪ್ರದೇಶಗಳಿಂದ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.

ಸಮಯ

ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಮುಂಜಾನೆ: 10:00ಗಂಟೆಯಿಂದ ಸಾಯಂಕಾಲ 05:30 ರವರೆಗೆ ವಸ್ತು ಸಂಗ್ರಹಾಲಯವು ತೆರೆದಿರುತ್ತದೆ.

ಭೇಟಿಗೆ ಸೂಕ್ತಕಾಲ

ಎಲ್ಲಾ ಕಾಲದಲ್ಲೂ ಭೇಟಿ ನೀಡಬಹುದು

ವಿಮಾನ ಪ್ರಯಾಣದ ಮೂಲಕ

ಕಲಬುರಗಿ, ಹೈದರಾಬಾದ್

ರೈಲ್ವೆ ಪ್ರಯಾಣದ ಮೂಲಕ

ರಾಯಚೂರು

ಸ್ಥಳೀಯ ಸಾರಿಗೆ ವ್ಯವಸ್ಥೆ

ಬಸ್, ಆಟೋರಿಕ್ಷಾ, ಟ್ಯಾಕ್ಸಿ ಇತ್ಯಾದಿ.,

ಸಂಪರ್ಕಿಸಿ

ಕ್ಯೂರೇಟರ್, ಸರ್ಕಾರಿ ವಸ್ತು ಸಂಗ್ರಹಾಲಯ, ನವರಂಗ ದರವಾಜ, ರಾಯಚೂರು-584101.

ದೂರವಾಣಿ ಸಂಖ್ಯೆ.: 08532-231428

ಇ-ಅಂಚೆ : curatorgmraichur@gmail.com

 

ಇತ್ತೀಚಿನ ನವೀಕರಣ​ : 14-10-2020 05:09 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080