ಅಭಿಪ್ರಾಯ / ಸಲಹೆಗಳು

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

ಉದ್ದೇಶ ‍ ‍‍&  ವ್ಯಾಪ್ತಿ

 

 

  • ಲೊಕ್ಕಿಗುಂಡಿ ಎಂದು ಶಾಸನದಲ್ಲಿ ಉಲ್ಲೇಖಗೊಂಡಿರುವ ಲಕ್ಕುಂಡಿಯು ಧರ್ಮ ಸಮಯನ್ವಯದ ನೆಲೆಯಾಗಿದೆ. ಚಾಲುಕ್ಯ ಸಾಮ್ರಾಜ್ಯ ರಾಜಧಾನಿಯಾಗಿದ್ದ ಹಾಗೂ ಕನ್ನಡ ಸಾಹಿತ್ಯ ಪೋಷಕಿಯಾಗಿದ್ದ ಅತಿಮಬ್ಬೆಯವರ ಹುಟ್ಟೂರು. ಚಾಲುಕ್ಯರು, ಕಲಚೂರಿಗಳು, ಸೆವುಣರು ಹಾಗೂ ಹೊಯ್ಸಳರು ತಮ್ಮ ಆಡಳಿತದ ಅವಧಿಯಲ್ಲಿ ಸಾಂಸ್ಕೃತಿಕ ಪರಂಪರೆಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಐತಿಹಾಸಿಕ ಪರಂಪರೆ ಹಿನ್ನೆಲೆ ಹೊಂದಿರುವ ಲಕ್ಕುಂಡಿ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಚಾರಿತ್ರಿಕ ಸ್ಮಾರಕಗಳ ಅವಶೇಷಗಳು, ಪ್ರಾಚೀನ ದೇವಸ್ಥಾನಗಳಾದ ಸೋಮೇಶ್ವರ ದೇವಸ್ಥಾನ, ಜೈನ ಬಸದಿ, ಬ್ರಹ್ಮ ಜಿನಾಲಯ, ಕುಂಬಾರೇಶ್ವರ ದೇವಸ್ಥಾನ, ಮಣಿಕೇಶ್ವರ ದೇವಾಲಯ, ಮಸ್ಕೀನ್‌ ಬಾವಿ, ನಾಗನಾಥ ದೇವಾಲಯ, ನಾಗೇರ್ಶವರ ದೇವಾಲಯ, ಕಾಶಿ ವಿಶ್ವೇಶ್ವರ ದೇವಾಲಯ, ಶಮಕರಲಿಂಗ, ಲಕ್ಷ್ಮೀನಾರಾಯಣ, ಗಣಪತಿ, ಲಕ್ಕದ ವೀರಣ್ಣ, ಈಶ್ವರ, ಕಲ್ಮೇಶ್ವರ, ಹಾಲಗುಂಡಿ ಬಸವಣ್ಣ, ವಿರೂಪಾಕ್ಷ, ಮಲ್ಲಿಕಾರ್ಜುನ, ವೀರಭದ್ರ, ಚಂದ್ರಮೌಳೇಶ್ವರ ದೇವಾಲಯಗಳು, ಫಕೀರಸ್ವಾಮಿ ಮಠ, ಶಿವಪ್ಪ ಮಠ, ಕೋಟೆ ಬಾಗಿಲು, ಕೋಟೆ ಒಳಾಂಗಣಗೋಡೆ, ಪತ್ರಿಬಾವಿ, ಮಲ್ಲೆಬಾವಿ, ಚಬ್ಬರ್‌ ಆವಿ, ಕನ್ನಿಯಾರ್‌ ಬಾವಿ, ಕುನ್ನಿವಾವಿ, ಮಧ್ಯಾಣ್ಣ ಬಾವಿ, ಕೊರಗೇರೆ ಬಾವಿ, ಚೌಕಿವಾವಿ ಕೋಟೆ ಹೊರಗೋಡೆ ಕೋಟೇರ್ಶವರ ದೇವಾಲಯ ಮುಂತಾದ 40ಕ್ಕೂ ಹೆಚ್ಚು ಮೂರ್ತ ಪಾರಂಪರಿಕ ಸ್ಮಾರಕ ಸಮುಚ್ಚಯಗಳನ್ನು 16ಕ್ಕೂ ಹೆಚ್ಚು ಪುಷ್ಕರಣಿಗಳನ್ನು ಒಳಗೊಂಡಿದೆ.

 

 

  • ಮೂರ್ತ ಪರಂಪರೆಯ ಕುರುಹುಗಳಾದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳಾದ ರಥಯಾತ್ರೆ, ವೀರಭದ್ರ ದೇವರ ಜಾತ್ರೆ, ಸಂತೆ, ಕ್ರಾಫ್ಟ್‌ ಮೇಳ ಮುಂತಾದ ನಂಬಿಕೆ ಆಚರಣೆಗಳು ಜನರ ಸಾಮಾಜಿಕ ಮತ್ತು ಧಾರ್ಮಿಕ ಸಮನ್ವಯತೆಯಿಂದ ಆಚರಣೆಗೊಳ್ಳುತ್ತಿರುವುದನ್ನು ಕಾಣಬಹುದು. ಹೂಮಾಲೆ ನೇಯ್ಗೆ, ಹೂವಿನ ಅಲಂಕಾರವನ್ನು ಮತ್ತು ರಂಗೋಲಿ ಚಿತ್ರಣ ಬಿಡಿಸುವುದು ಸಹ ಪ್ರಚಲಿತದಲ್ಲಿದೆ. ಗೃಹ ಕೈಗಾರಿಕೆಗಳಾದ ಮಡಿಕೆ ತಯಾರಿಸುವುದು, ಸೀರೆ ನೇಯ್ಗೆ, ಅಂಬಾಸಿ ಪಂಚೆ ನೇಯ್ಗೆ ಮತ್ತು ಚಾಪೆ ಎಣೆಯುವುದು, ಜಾನಪದ ಕಲೆ ಸಾಂಪ್ರದಾಯಿಕ ಕೃಷಿ ಆಚರಣೆ ಪದ್ದತಿ, ತೋಟಗಾರಿಕೆ ಮತ್ತು ಸ್ಥಳೀಯ ಊಟೋಪಚಾರಗಳು ಹಿಂದಿನಿಂದ ನಡೆದು ಬಂದಿದ್ದು, ಪರಂಪರೆ ಅವಿಭಾಜ್ಯ ಭಾಗವಾಗಿದೆ. ಇಂತಹ ಐತಿಹಾಸಿಕ ಘಟನೆಗಳನ್ನು ಸಾಂಪ್ರದಾಯಿಕ ಕುರುಹುಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಅವುಗಳು ನಾಶವಾಗದಂತೆ ಸಂರಕ್ಷಿಸಿ ಮುಂದಿನ ತಲೆಮಾರಿಗೆ ಜೋಪಾನ ಮಾಡುವುದು ಈ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉದ್ದೇಶವಾಗಿದೆ.

 

 

  • ಗದಗ ಜಿಲ್ಲೆಯಲ್ಲಿ ಒಟ್ಟು 44 ರಾಜ್ಯ ಸಂರಕ್ಷಿತ ಸ್ಮಾರಕಗಳು ಹಾಗೂ 14 ಕೇಂದ್ರ ಸಂರಕ್ಷಿತ ಸ್ಮಾರಕಗಳಿವೆ. ಅಲ್ಲದೆ ಅಘೋಷಿತ ಸ್ಮಾರಕಗಳು ಸಾವಿರಾರು ಸಂಖ್ಯೆಯಲ್ಲಿವೆ.

 

 

  • 2017-18ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ “ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ”ವನ್ನು ರಚಿಸಿ ಆದೇಶಿಸಲಾಗಿದೆ.

 

 

  • ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 68 ಶಾಸನ 2020, ಬೆಂಗಳೂರು, ದಿನಾಂಕ:22.10.2020ರಂದು ಅಧಿನಿಯಮ ಅನುಮೋದನೆಗೊಂಡಿರುತ್ತದೆ. ಹಾಗೂ ಸರ್ಕಾರಿ ಆದೇಶ ಸಂಖ್ಯೆ: TOR/91/TDA/2020, ಬೆಂಗಳೂರು ದಿನಾಂಕ: 22.12.2020 ರಿಂದ ಜಾರಿಗೆ ಬರುವಂತೆ ಅಧಿಸೂಚನೆಯನ್ನು ಹೊರಡಿಸಿದೆ.

 

 

ವಿಧೇಯಕ

ಡೌನ್ಲೋಡ್

ಅಧಿಸೂಚನೆ

ಡೌನ್ಲೋಡ್

ನಿಯಮಗಳು

ಡೌನ್ಲೋಡ್

 

ಇತ್ತೀಚಿನ ನವೀಕರಣ​ : 16-09-2022 03:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080