ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತುಸಂಗ್ರಹಾಲಯ ಬೆಂಗಳೂರು

ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯವು ದೇಶದ ಹಳೆಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. 1860ರಲ್ಲಿ ಡಾ.ಎಡ್ವರ್ಡ್ ಗ್ರೀನ್ ಬೆರ್ಲ್‍ಫೋರ್ ಎಂಬ ಬ್ರಿಟಿಷ್ ಅಧಿಕಾರಿ ಬೆಂಗಳೂರಿನಲ್ಲಿ ಒಂದು ಸಂಗ್ರಹಾಲಯವನ್ನು ಪ್ರಾರಂಭಿಸಲು ತೀರ್ಮಾನಿಸಿ ಮೈಸೂರಿನ ಎಲ್ಲಾ ಪ್ರಾಂತ್ಯಗಳಿಂದಲೂ ಅಪರೂಪದ ವಸ್ತುಗಳನ್ನು ಶೇಖರಣೆ ಮಾಡತೊಡಗಿದರು. 1865ರ ಹೊತ್ತಿಗೆ ಈ ಕಲಾಕೃತಿಗಳು ಸು.3000ಕ್ಕೂ ಹೆಚ್ಚು ಸಂಗ್ರಹವಾದ ಕಾರಣ 1865ರಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ವಸ್ತು ಸಂಗ್ರಹಾಲಯವನ್ನು ಹಳೆಯ ಜೈಲಿನ ಕಟ್ಟಡವೊಂದರಲ್ಲಿ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಮೈಸೂರು ಕಮಿಷನರ್ ಆಡಳಿತವಿದ್ದ ಕಾರಣ ಸಂಗ್ರಹಾಲಯಕ್ಕೆ “ಮೈಸೂರು ಮ್ಯೂಸಿಯಂ” ಎಂದು ಹೆಸರಿಡಲಾಯಿತು ಹಾಗೂ ಈ ಸಂಗ್ರಹಾಲಯವನ್ನು ಸಾರ್ವಜನಿಕರಿಗೆ ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆಯವೆರೆಗೂ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿತ್ತು.

 

ಕ್ರಮೇಣವಾಗಿ ಸಂಗ್ರಹಾಲಯದ ಕಲಾಕೃತಿಗಳ ಶೇಖರಣೆ ಹಾಗೂ ಅದನ್ನು ವೀಕ್ಷಿಸುವ ಪ್ರವಾಸಿಗರು ಎರಡೂ ಹೆಚ್ಚಳವಾದ ಕಾರಣ ಸಂಗ್ರಹಾಲಯಕ್ಕಾಗಿಯೇ ಒಂದು ವ್ಯವಸ್ಥಿತ ಕಟ್ಟಡ ನಿರ್ಮಿಸಬೇಕೆಂಬ ಆಲೋಚನೆಯ ಫಲವೇ ಇಂದು ಬೆಂಗಳೂರಿನ ಪಾರಂಪರಿಕ ಕಟ್ಟಡಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವುಳ್ಳ ಸರ್ಕಾರಿ ವಸ್ತು ಸಂಗ್ರಹಾಲಯದ ನಿರ್ಮಾಣ ಕಾರ್ಯ 1875ರಲ್ಲಿ ಪ್ರಾರಂಭವಾಗಿ 1877ರಲ್ಲಿ ಸಂಗ್ರಹಾಲಯದ ಪೂರ್ಣ ಕಟ್ಟಡವನ್ನು ಸಾರ್ವಜನಿಕರಿಗಾಗಿ ತೆರೆದು “ ಮೈಸೂರು ಗವರ್ನಮೆಂಟ್ ಮ್ಯೂಸಿಯಂ” ಎಂದು ಹೆಸರಿಸಲಾಯಿತು.

 

ಸಂಗ್ರಹಾಲಯ ಪ್ರಾರಂಭವಾದ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಪಡುವ ವಸ್ತುಗಳು ಸಂಗ್ರಹಾಲಯದಲ್ಲಿ ಲಭ್ಯವಿದ್ದು, ಮನರಂಜನೆ ಮುದ ನೀಡುತ್ತಿದ್ದ ಕಾರಣ ಆ ಕಾಲದಲ್ಲಿ ಸಂಗ್ರಹಾಲಯವನ್ನು “ತಮಾಷೆ ಬಂಗಲೆ” ಎಂದೂ ಸಹ ಕರೆಯಲಾಗುತ್ತಿತ್ತು. ಕಾಲಾಂತರದಲ್ಲಿ ಇಲ್ಲಿ ಲಭ್ಯವಿದ್ದ ಕೆಲವು ಸಂಗ್ರಹಗಳನ್ನು ಬೇರೆ ಸಂಗ್ರಹಾಲಯಗಳಿಗೆ ಸ್ಥಳಾಂತರಿಸಲಾಯಿತು.  ಪ್ರಸ್ತುತ    ಪ್ರಾಚ್ಯವಸ್ತುಗಳು, ಹೊಯ್ಸಳ, ವಿಜಯನಗರ, ಗಾಂಧಾರ, ನೊಳಂಬ. ಮುಂತಾದ ಕಾಲಕ್ಕೆ ಸೇರಿದ ಶಿಲಾಶಿಲ್ಪಗಳು, ಕಂಚಿನಶಿಲ್ಪಗಳು, ಶಾಸನಗಳು, ವೀರಗಲ್ಲು, ಸತಿಗಲ್ಲುಗಳು, ಸಾಂಪ್ರದಾಯಿಕ ವರ್ಣಚಿತ್ರಗಳು, ಮರದ ಕೆತ್ತನೆಯ ಕಲಾಕೃತಿಗಳು, ಸಂಗೀತ ಉಪಕರಣಗಳು, ಆಯುಧಗಳ ವಿಭಾಗ, ಮುಂತಾದವು ಸಂಗ್ರಹಾಲಯದಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಲಭ್ಯವಿದೆ. ಹಾಗೂ ಕನ್ನಡದ ಮೊಟ್ಟ ಮೊದಲ ಶಾಸನವಾದ ಹಲ್ಮಿಡಿ ಶಾಸನವು ಈ ಸಂಗ್ರಹಾಲಯದಲ್ಲಿರುವುದು ಮತ್ತೊಂದು ವಿಶೇಷವಾಗಿದೆ. ಬೇಗೂರು, ಅಟಕೂರು ಮತ್ತು ದೊಡ್ಡಹುಂಡಿ ಶಾಸನಗಳು ಇದರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ.

 

ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ವೆಂಕಟಪ್ಪ ಚಿತ್ರಶಾಲೆಯ ಸಂರರಕ್ಷಣೆ ಮತ್ತು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಂರಕ್ಷಣೆ ಕಾಮಗಾರಿಗಳ ಸಮಯದಲ್ಲಿ ಸಾರ್ವಜನಿಕರು ಗ್ಯಾಲರಿಗೆ ಭೇಟಿ ನೀಡುವುದು ಸುರಕ್ಷಿತವಲ್ಲವಾದ್ದರಿಂದ ವಸ್ತುಸಂಗ್ರಹಾಲಯವನ್ನು ಹಾಗೂ ವೆಂಕಟಪ್ಪ ಚಿತ್ರಶಾಲೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಚ್ಚಲ್ಪಟ್ಟಿರುತ್ತದೆ.

 

ಇತ್ತೀಚಿನ ನವೀಕರಣ​ : 16-01-2024 03:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080