ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತು ಸಂಗ್ರಹಾಲಯ ಕಲಬುರಗಿ

ವಸ್ತು ಸಂಗ್ರಹಾಲಯದ ಮಾದರಿ

ಪ್ರಾಚ್ಯವಸ್ತು ಸಂಗ್ರಹಾಲಯ

ಸ್ಥಾಪನೆಯಾದ ವರ್ಷ       

1964

ಒಡೆತನ / ಯಾರ ಅಧೀನದಲ್ಲಿದೆ

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ

ವಸ್ತು ಸಂಗ್ರಹಾಲಯದ ಕಟ್ಟqದÀ ಇತಿಹಾಸ ಹಾಗೂ ವಿನ್ಯಾಸ

ಸರ್ಕಾರಿ ವಸ್ತು ಸಂಗ್ರಹಾಲಯವನ್ನು 1964ರಲ್ಲಿ ನಗರದ ಸೇಡಂ ರಸ್ತೆಯಲ್ಲಿರುವ ಪುರಾತನ ಎರಡು ಜೋಡಿ ಗುಮ್ಮಟ(ಕ್ರಿ.ಶ.14-15ನೇ ಶತಮಾನ)ಗಳಲ್ಲಿ ಪ್ರಾರಂಭಿಸಲಾಗಿದೆ.  ತದನಂತರ 1997ರಲ್ಲಿ ಹೊಸದಾಗಿ ಕಛೇರಿ ಕಟ್ಟಡವನ್ನೊಳಗೊಂಡಂತೆ ಒಂದು ಗ್ಯಾಲರಿಯನ್ನು ನಿರ್ಮಿಸಲಾಗಿದೆ.  ಪ್ರಸ್ತುತ ವಸ್ತು ಸಂಗ್ರಹಾಲಯವು ಮೂರು ಗ್ಯಾಲರಿಗಳನ್ನು ಹಾಗೂ ಮುಂಭಾಗದಲ್ಲಿ ಉದ್ಯಾನವನವನ್ನು ಹೊಂದಿದೆ.  ಹಾಗೂ ಎರಡೂ ಗುಮ್ಮಟಗಳ ಸುತ್ತಲೂ ಮತ್ತು ಉದ್ಯಾನದಲ್ಲಿ ಶಿಲ್ಪಗಳನ್ನು ಪ್ರದರ್ಶಿಸಲಾಗಿದ್ದು, ಉತ್ತಮವಾದ ವಾತಾವರಣವನ್ನು ಹೊಂದಿದೆ.

ವಿಸ್ತೀರ್ಣ

114.92ಮೀ.*67.77ಮೀ.(ಗೂಗಲ್ ಉಪಗ್ರಹದ ನಕ್ಷೆಯ ಮೂಲಕ)

ಮಹತ್ವ      

ಈ ವಸ್ತು ಸಂಗ್ರಹಾಲಯವು ಕಲಬುರಗಿ ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ಐತಿಹಾಸಿಕ ಅಂಶಗಳನ್ನು ಒಳಗೊಂಡ ಪ್ರಾದೇಶಿಕ ಇತಿಹಾಸಕ್ಕೆ ಮೀಸಲಾಗಿದೆ ಮತ್ತು ವಸ್ತು ಸಂಗ್ರಹಾಲಯದಲ್ಲಿ ಸನ್ನತಿಯ ಬೌದ್ಧ ಸ್ತೂಪದ ಅಮೂಲ್ಯವಾದ ಅವಶೇಷಗಳು ಮತ್ತು ಇತರ ಅನೇಕ ಪ್ರಾಚೀನ ವಸ್ತುಗಳನ್ನು ಪ್ರದರ್ಶಿಸಲಾಗಿದೆ.  ಇದು ಜನರಿಗೆ   ಐತಿಹಾಸಿಕತೆ ಕುರಿತು ಶಿಕ್ಷಣ ನೀಡುವ ಉದ್ದೇಶವನ್ನು ಪೂರೈಸುತ್ತಿದೆ.

ಸಂಗ್ರಹಗಳು           

ಇತಿಹಾಸ ಪೂರ್ವ ಕಾಲದಿಂದ ಆರಂಭಿಕ ಇತಿಹಾಸ ಕಾಲದವರೆಗೆ: 

 

ಕಲಬುರಗಿ ಜಿಲ್ಲೆಯ ಸನ್ನತಿ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ಪ್ರದೇಶದಿಂದ ಸಂಗ್ರಹಿಸಿದ ನವಶಿಲಾಯುಗದ ಶಿಲಾ ಆಯುಧಗಳು, ಉಪಕರಣಗಳು, ಮಡಿಕೆ ಚೂರುಗಳು, ಟೆರಾಕೋಟಾ ಮಣಿಗಳು, ಶೆಲ್ ಬಳೆ ಚೂರುಗಳು, ಗಾಜಿನ ಬಳೆ ಚೂರುಗಳು, ಕೈಗೊಡಲಿಗಳು, ಮಣಿ ಹಾರಗಳು ಕುಂಬಾರಿಕೆ ವಸ್ತುಗಳ ತುಣುಕುಗಳನ್ನು ಪ್ರದರ್ಶಿಸಲಾಗಿದೆ.  ಹಾಗೂ ಕ್ರಿ.ಶ.1-2ನೇ ಶತಮಾನದ ಜೇಡಿ ಮಣ್ಣಿನಿಂದ ಮಾಡಿದ ಆಟೋಪಕರಣಗಳು ಮತ್ತು ಸನ್ನತಿ ನಿವೇಶನದಿಂದ ಸಂಗ್ರಹಿಸಿದ ಒಂದು ಇಟ್ಟಿಗೆಯನ್ನು ಪ್ರದರ್ಶನಕ್ಕೆ ಇಡಲಾಗಿದೆ.  ಹಾಗೂ ವಿಶೇಷವಾಗಿ ಸಿಂಧೂ ಕಣಿವೆ ನಾಗರೀಕತೆ ಹಾಗೂ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಂಬಂಧ ಅಲ್ಲಿ ದೊರೆತಂತಹ ವಿವಿಧ ಮುದ್ರೆಗಳು, ಆಟಿಕೆಗಳು, ಪುರೋಹಿತ, ನರ್ತಕಿ, ಮಂಗ ಇತ್ಯಾದಿ.,ಗಳ ಪ್ರತಿಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.   

ನಾಣ್ಯಗಳು:

 

ಸಂಗ್ರಹಾಲಯದಲ್ಲಿ ಒಟ್ಟು 96 ನಾಣ್ಯಗಳ ಸಂಗ್ರಹವಿದೆ. ಅವುಗಳಲ್ಲಿ ಆರು ನಾಣ್ಯಗಳು ಚಿನ್ನದ ನಾಣ್ಯಗಳಾಗಿವೆ. ಅವುಗಳಲ್ಲಿ ವಿಜಯನಗರದ;  ನಾಣ್ಯ 1 ಮತ್ತು 2 ದಿಯಾ 1 ಸೆಂ.ಮೀ. ಅಳತೆಯನ್ನು ಹೊಂದಿದ್ದು, ಮುಂಭಾಗದಲ್ಲಿ  ಕುಳಿತಿರುವ ಶಿವ-ಪಾರ್ವತಿ ಹಾಗೂ ಹಿಂಭಾಗದಲ್ಲಿ ದೇವನಾಗರಿಯಲ್ಲಿ “ಶ್ರೀ ಪ್ರ ತಾ ಪಾ ದೇರಾ” ಅಕ್ಷರಗಳನ್ನು ಹೊಂದಿವೆ.  ನಾಣ್ಯ 3 ಮತ್ತು 4 ದಿಯಾ 1 ಸೆಂ.ಮೀ. ಅಳತೆಯನ್ನು ಹೊಂದಿದ್ದು, ಮುಂಭಾಗದಲ್ಲಿ  ಕುಳಿತಿರುವ ಭಗವಾನ್ ಬಾಲ ಕೃಷ್ನ ಹಾಗೂ ಹಿಂಭಾಗದಲ್ಲಿ ದೇವನಾಗರಿಯಲ್ಲಿ “ಶ್ರೀ ಪ್ರಾ ತಾ ಪಾಕ್ರಿ  ರಾಯಾ” ಅಕ್ಷರಗಳನ್ನು ಹೊಂದಿವೆ. ಚನ್ನರಾಯಪಟ್ಟಣದ; ನಾಣ್ಯ 5 ಮತ್ತು 6 ಮುಂಭಾಗದಲ್ಲಿ ಸ್ತ್ರೀ ಆಕೃತಿ ಹಾಗೂ ಹಿಂಬಾಗದಲ್ಲಿ ದೇವನಾಗರಿಯಲ್ಲಿ “ಕಾ ತಾ” ಅಕ್ಷರಗಳನ್ನು ಹೊಂದಿವೆ. ಮತ್ತು ನಲವತ್ತನಾಲ್ಕು ಬಹಮನಿ ಅವಧಿಯ ಹಾಗೂ ನಾಲ್ಕು ಬ್ರಿಟಿಷ್ ಅವಧಿಯ ಬೆಳ್ಳಿಯ ನಾಣ್ಯಗಳು, ಉಳಿದವು ತಾಮ್ರ, ನಿಕ್ಕಲ್ ಮತ್ತು ಹಿತ್ತಾಳೆಯ ನಾಣ್ಯಗಳಾಗಿವೆ.  ಈ ನಾಣ್ಯಗಳು ಭಾರತದಲ್ಲಿನ ಕರೆನ್ಸಿ ವ್ಯವಸ್ಥೆಯನ್ನು ಮತ್ತು ಅವುಗಳನ್ನು ಎಷ್ಟು ಕಲಾತ್ಮಕವಾಗಿ ತಯಾರಿಸಲಾಗುತ್ತಿತ್ತು ಎಂಬುದನ್ನು ತೋರಿಸುತ್ತವೆ.

 

ವರ್ಣಚಿತ್ರಗಳು:

 

ವಸ್ತು ಸಂಗ್ರಹಾಲಯದಲ್ಲಿ ಒಟ್ಟು 26 ಆಧುನಿಕ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಅವುಗಳು: ಎಂ.ಟಿ.ವಿ. ಆಚಾರ್ಯ ಅವರ ಮಗುವನ್ನು ಎತ್ತಿಕೊಂಡಿರುವ ಮಹಿಳೆ ಮತ್ತು ಕಬ್ಬನ್ ಪಾರ್ಕ್, ರಾಮ ಪಟ್ಟಾಭಿಷೇಕದ    ದೃಷ್ಯ-ಮೈಸೂರು ಶೈಲಿ, ರುಮಾಲೆ ಚನ್ನಬಸವಯ್ಯನವರ ಕೋಟೆ ಗೋಡೆ, ತಿಪ್ಪೇಸ್ವಾಮಿಯವರ ಮುಸುಕಿನ ಹೊಂಡ, ವೈ.ಸುಬ್ರಮಣ್ಯ ರಾಜು ಅವರ ಸಯ್ಯಾಜಿರಾವ್ ರಸ್ತೆ, ಮೈಸೂರು, ಎಂ.ಎಸ್.ಜೋಷಿ ಅವರ ಉದಯಪುರದ ಕೋಟೆ ಅರಮನೆ, ವ್ಹಿ.ಜಿ.ಅಂದಾನಿಯವರ ಗಿಳಿಯ ಜೊತೆ ಮಹಿಳೆ, ಜಮಖಂಡಿ ಸಿಂಧೂರವರ ಪುರುಷನ ಚಿತ್ರ, ಎಂ.ಡಿ.ನಜೀರ್ ಹುಸೇನ್ ಸಿದ್ದಿಖಿ ಅವರ ಸುರಪುರದ ಟೇಲರ್ ಮಂಜಿಲ್, ಅರ್ಪಣ ಕೌರ್ ರವರ ಗ್ರ್ಯಾಂಡ್ ಪಾ, ವ್ಹಿ.ಜಿ.ಆಂಡ್ರೋವ್ ರವರ ಇಂಕ್ ವರ್ಕ, ಬಿ.ವಿ.ರಾಮಮೂರ್ತಿ ರವರ ಬುಡಕಟ್ಟು ಜನರ ಜಾನಪದ ನೃತ್ಯ, ಹೆಡ್ ಆಫ್ ಕ್ರಿಸ್ಟ್ ಮತ್ತು ಎ ಗರ್ಲ್ ಇತ್ಯಾದಿ.

 

ಶಿಲ್ಪಗಳು:

 

ಜಿಲ್ಲೆಯ ಹೆಸರಾಂತ ಸನ್ನತಿ ಬೌದ್ಧ ನೆಲೆಯ ಅನ್ವೇಷಣೆ ಹಾಗೂ ಉತ್ಖನನ ಸಮಯದಲ್ಲಿ ಸಂಗ್ರಹಿಸಲಾದ     ಕ್ರಿ.ಶ.1-2ನೇ ಶತಮಾನದ ಬುದ್ಧ ಪಾದ, ಸಿಂಹ, ರಾಜ-ದಂಪತಿ, ಸಂಗೀತಗಾರರು, ಕುದುರೆ, ಐದು ಹೆಡೆಯ ನಾಗ,    ಶಿಲಾ ಫಲಕಗಳು, ಜಾತಕ ಕಥೆಗಳ ಶಿಲ್ಪಗಳು ಇತ್ಯಾದಿ., ಇವುಗಳನ್ನು ಗ್ಯಾಲರಿ ಸಂಖ್ಯೆ. 2 ಮತ್ತು 3ರಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಸಂಗ್ರಹಾಲಯದ ಒಟ್ಟು ಸಂಗ್ರಹದ ಶೇ.70% ಸದರಿ ಸನ್ನತಿ ನೆಲೆ/ನಿವೇಶನದಿಂದÀ ಸಂಗ್ರಹಿಸಲಾದ ಅವಶೇಷಗಳಾಗಿವೆ. 

 

ಕ್ರಿ.ಶ. 11-18ನೇ ಶತಮಾನದ ಶಿಲ್ಪಗಳನ್ನು ಗ್ಯಾಲರಿ ಸಂಖ್ಯೆ. 1 ಮತ್ತು ಗ್ಯಾಲರಿ ಸಂಖ್ಯೇ. 1 ಮತ್ತು 2ರ ಸುತ್ತಲೂ ಹಾಗೂ ಉದ್ಯಾನವನದಲ್ಲಿ ಕೂಡ ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳಲ್ಲಿ ಮುಖ್ಯವಾದವು: ದುರ್ಗಾ, ನಾಟ್ಯ ಶಿವ, ಜಲಶಯನ ವಿಷ್ಣು, ಉಮಾ-ಮಹೇಶ್ವರ, ಶಿವ-ಪಾರ್ವತಿ, ನಂದಿ, ಶಿವಲಿಂಗ, ಭೈರವ, ಗಣೇಶ, ಪ್ರಾಣಿಗಳ ಸಾಲು, ಆದಿನಾಥ, ಪಾರ್ಶ್ವನಾಥ, ನಿಷಿಧಿ ಕಲ್ಲು, ಜೈನ ತೀರ್ಥಾಂಕರರು, ವಿಷ್ಣು, ಪುರುಷ ದೇಹ, ನಾಗ-ನಾಗಿಣಿ ಕಲ್ಲುಗಳು, ಮಾಸ್ತಿಗಲ್ಲು, ವೀರಗಲ್ಲು, ಕುಬೇರ, ಉಷಾ, ಅಂಬಿಕ, ಸರಸ್ವತಿ, ದ್ವಾರಪಾಲಕ, ದೇವಸ್ಥಾನದ ಕಂಬಗಳು ಮತ್ತು ಫಿರಂಗಿ ತೋಪಿನ ಶಿಲಾ ಗುಂಡುಗಳು.  ಹಾಗೂ   ಕನ್ನಡ ಮತ್ತು ದೇವನಾಗರಿ ಲಿಪಿಯ ಶಾಸನಗಳನ್ನು ಕೂಡ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.  ಈ ಎಲ್ಲಾ ಶಿಲ್ಪಗಳನ್ನು ಸ್ಥಳೀಯ ಸೇಡಂ, ಹರಸೂರು, ಮೇಡಕ್, ಮಳಖೇಡ, ಚಿತ್ತಾಪುರ ಹಾಗೂ ಕಲಬುರಗಿಯ ಸುತ್ತ-ಮುತ್ತ ಗ್ರಾಮಗಳಿಂದ ಸಂಗ್ರಹಿಸಲಾಗಿದೆ.

 

ಫಿರಂಗಿಗಳು:

 

ಜಿಲ್ಲೆಯ ದಂಡೋತಿ ಹಾಗೂ ಮಳಖೇಡ ಪ್ರದೇಶಗಳಿಂದ ಸಂಗ್ರಹಿಸಲಾದ 18ನೇ ಶತಮಾನದ ಫಿರಂಗಿ ತೋಪುಗಳನ್ನು ಗ್ಯಾಲರಿ ಸಂಖ್ಯೆ. 1 ಹಾಗೂ ಅದರ ಮುಂಭಾಗದ ಪ್ರವೇಶ ದ್ವಾರದಲ್ಲಿ ಪ್ರದರ್ಶಿಸಲಾಗಿದೆ.  ಇವುಗಳು ಆಗಿನ ಕಾಲದ ಮಿಲಿಟರಿ ವ್ಯವಸ್ಥೆಯನ್ನು ತೋರಿಸುತ್ತವೆ.

 

ಆಯುಧೋಪಕರಣಗಳು:

 

18ನೇ ಶತಮಾನದ ಖಡ್ಗಗಳು, ಡ್ರ್ಯಾಗರ್‍ಗಳು ಹಾಗೂ 17ನೇ ಶತಮಾನದ ಬಸವಕಲ್ಯಾಣ ಕೋಟೆಯ ಕಬ್ಬಿಣದ ಬೀಗವನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. 

 

ಹಸ್ತಪ್ರತಿಗಳು:

 

ತಾಳೆ ಗರಿ ಹಸ್ತಪ್ರತಿಗಳು ಹಾಗೂ ಫಿರ್ದೋಸಿಯ ಶಹನಾಮದ ಪ್ರತಿಯನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

 

ಇನ್ನಿತರೆ ವಸ್ತುಗಳು:

 

ಬ್ರಿಟಿಷ್ ಅಧಿಕಾರಿ ಫಿಲಿಪ್ ಮೀಡಸ್ ಟೇಲರ್ ರವರು ಉಪಯೋಗಿಸುತ್ತಿದ್ದ ಕುರ್ಚಿ, ಪಾತ್ರೆಗಳು ಹಾಗೂ 20ನೇ ಶತಮಾನದ ಪಲ್ಲಕ್ಕಿ ಹಾಗೂ 18ನೇ ಶತಮಾನದ ಪಾತ್ರೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಸಮಯ

ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಮುಂಜಾನೆ: 10:00ಗಂಟೆಯಿಂದ ಸಾಯಂಕಾಲ 05:30ರವರೆಗೆ      ವಸ್ತು ಸಂಗ್ರಹಾಲಯವು ತೆರೆದಿರುತ್ತದೆ.

ಭೇಟಿಗೆ ಸೂಕ್ತಕಾಲ        

ಎಲ್ಲಾ ಕಾಲದಲ್ಲೂ ಭೇಟಿ ನೀಡಬಹುದು

ವಿಮಾನ ಪ್ರಯಾಣದ ಮೂಲಕ

ಕಲಬುರಗಿ, ಹೈದರಾಬಾದ್

ರೈಲ್ವೆ ಪ್ರಯಾಣದ ಮೂಲಕ

ಕಲಬುರಗಿ

ಸ್ಥಳೀಯ ಸಾರಿಗೆ ವ್ಯವಸ್ಥೆ   

 ಬಸ್, ಆಟೋರಿಕ್ಷಾ, ಟ್ಯಾಕ್ಸಿ ಇತ್ಯಾದಿ.,

ಸಂಪರ್ಕಿಸಿ       

 

ಉಪ ನಿರ್ದೇಶಕರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರ್ಕಾರಿ ವಸ್ತು ಸಂಗ್ರಹಾಲಯ, ಸೇಡಂ ರಸ್ತೆ,       ಕಲಬುರಗಿ-585 105.

ದೂರವಾಣಿ ಸಂಖ್ಯೆ.: 08472-295813

ಇ-ಅಂಚೆ : ddgulbargamuseum@gmail.com

 

ಇತ್ತೀಚಿನ ನವೀಕರಣ​ : 14-10-2020 04:05 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080