ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತುಸಂಗ್ರಹಾಲಯ ಹಾಸನ

ಹಾಸನ ಮಲೆನಾಡಿನ ಸುಂದರ ಪ್ರಾಕೃತಿಕ ಸೊಬಗಿನ ತಾಣ. ಪಶ್ಚಿಮ ಘಟ್ಟದ ಕೊನೆಯ ಭಾಗದಲ್ಲಿರುವ ಜಿಲ್ಲೆ. ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಮತ್ತು ಪರಂಪರೆಗೆ ಹೆಸರುವಾಸಿಯಾಗಿದ್ದು, ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಸಂಪದ್ಭರಿತವಾದ ಜಿಲ್ಲೆ ಇದಾಗಿದೆ. ಬೆಂಗಳೂರಿನಿಂದ ಪಶ್ಚಿಮಕ್ಕೆ 156 ಕಿ.ಮೀ. ಮೈಸೂರಿನಿಂದ ವಾಯುವ್ಯಕ್ಕೆ 121 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಹಾಸನಾಂಭ ದೇವಾಲಯದಿಂದ ಈ ಪಟ್ಟಣಕ್ಕೆ ಹಾಸನವೆಂಬ ಹೆಸರು ಬಂದಿತೆಂದು ಪ್ರತೀತಿ. ಹಾಸನ ಎಂದರೆ ಹಸನ್ಮುಖಿ ಎಂದು ಅರ್ಥ. ಪುರಾಣದದಲ್ಲಿ ಸಿಂಹಾಸನಪುರಿ ಎಂಬ ಹೆಸರು ಪಡೆದಿತ್ತು. ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ ಕಾಲದಿಂದ ಜಿಲ್ಲೆಯಲ್ಲಿ ಇತಿಹಾಸ ಮತ್ತು ಸಂಸ್ಕೃತಿಗಳ ಬೆಳವಣಿಗೆಗಳನ್ನು ಗುರುತಿಸಬಹುದು. ಇತಿಹಾಸ ಕಾಲದಲ್ಲಿ ಮೌರ್ಯ, ಶಾತವಾಹನ, ಪಲ್ಲವರು, ಕದಂಬರು, ಗಂಗರು, ಚೋಳ, ಹೊಯ್ಸಳ, ವಿಜಯನಗರ ಮುಂತಾದ ಅರಸರು ರಾಜ್ಯವನ್ನಾಳಿದ್ದಾರೆ.

 

ಹಾಸನದ ಮಹಾರಾಜಾ ಪಾರ್ಕ್ ಆವರಣದಲ್ಲಿ ಈ ವಸ್ತುಸಂಗ್ರಹಾಲಯ ಇದ್ದು, 1976ರಲ್ಲಿ ಸ್ಥಾಪನೆಗೊಂಡಿದೆ. ಉತ್ಖನನ ಕಾಲದಲ್ಲಿ ಲಭ್ಯವಾದ ವಸ್ತುಗಳು ಗತಕಾಲದ ವಸ್ತುಗಳು ಸಂಗ್ರಹಿಸಿಡುವ ಗುರಿ ಹಾಗೂ ಹಾಸನ ಮತ್ತು ಇತರ ಭಾಗಗಳಲ್ಲಿ ದೊರೆತ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಪ್ರಮುಖವಾಗಿ 11 ನೇ ಶತಮಾನದಿಂದ 15ನೇ ಶತಮಾನದವರೆಗಿನ ಶಿಲ್ಪಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಮುಖ್ಯವಾಗಿ ದುರ್ಗಾ, ಹೊಯ್ಸಳ ಲಾಂಛನ, ವಿಷ್ಣು, ಪಾರ್ಶ್ವನಾಥ, 15ನೇ ಶತಮಾನದ ವಿಜಯನಗರ ಕಾಲದ ವಾಮನ, ಮಹಿಷಾಸುರ ಮರ್ದಿನಿ, ಷಣ್ಮುಖ, ವೀರಗಲ್ಲುಗಳು, ಮಹಾಸತಿಕಲ್ಲುಗಳು, ಮುಂತಾದವುಗಳನ್ನು ಪ್ರದರ್ಶಿಸಲಾಗಿದೆ. ಹೊಯ್ಸಳರ ಕನ್ನಡ ಶಾಸನಗಳು ಇಲ್ಲಿವೆ. ಮರದ ಪಟ್ಟಿಕೆಗಳಿದ್ದು ಅವುಗಳಲ್ಲಿ ನೃತ್ಯಗಾರ್ತಿಯರು, ಆನೆಸಾಲು, ಕುದುರೆ ಸಾಲು, ಪಂಚತಂತ್ರಗಳನ್ನು ಪ್ರದರ್ಶಿಸಿದ್ದಾರೆ.

 

ಆಯುಧಗಳಲ್ಲಿ 18ನೇ ಶತಮಾನದ ಕತ್ತಿಗಳು, ಪಿಸ್ತೂಲು, ಭರ್ಚಿ, ಬಿಲ್ಲು, ಬಾಣ, ಗುರಾಣಿ, ಕೈಕೊಡಲಿ, ಕಠಾರಿ ಮುಂತಾದವುಗಳನ್ನು ಕಾಣುತ್ತೇವೆ. ವರ್ಣಚಿತ್ರಗಳಲ್ಲಿ ಮುಖ್ಯವಾಗಿ ಎಸ್.ಎಸ್. ಕುಕ್ಕೆ ರಚಿಸಿದ ಬೇಲೂರು ದೇವಸ್ಥಾನದ ಚಿತ್ರ,  ಸುಮಂತ್ ಅಕನಸಾಲಿ ರಚಿಸಿದ ಯಕ್ಷಗಾನ, ರಾತ್ರಿಯಲ್ಲಿ ಮೈಸೂರು, ನಿರ್ಲಿಪ್ತ ಹೆಂಗಸು, ವಿಶ್ವಾಮಿತ್ರ ಮೇನಕೆ, ಪ್ರಕೃತಿ ಚಿತ್ರಣಗಳು ಮನಮೋಹಕವಾಗಿವೆ. ಈ ವಸ್ತುಸಂಗ್ರಹಾಲಯವು ವಾರದ ಎಲ್ಲಾ ದಿನಗಳಲ್ಲಿ ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 5:30 ರ ವರಗೆ ತೆರೆದಿರುತ್ತದೆ.

ಇತ್ತೀಚಿನ ನವೀಕರಣ​ : 23-02-2021 11:40 AM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080