ಅಭಿಪ್ರಾಯ / ಸಲಹೆಗಳು

ಪರಂಪರೆ ಕೂಟ

ನಮ್ಮ ನಾಡಿನ ಪರಂಪರೆ, ಪಾರಂಪರಿಕ ಕಟ್ಟಡಗಳು, ಕ್ಷೇತ್ರಗಳು, ದೇವಾಲಯಗಳು, ಸ್ಮಾರಕಗಳ ಇತಿಹಾಸ, ಐತಿಹಾಸಿಕ ಹಿನ್ನೆಲೆ ಹಾಗೂ ವಾಸ್ತುಶಿಲ್ಪ ಶೈಲಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳು, ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೆರಿಟೇಜ್‌ ಕ್ಲಬ್‌ (ಪರಂಪರಾ ಕೂಟ)ಗಳನ್ನು ಸ್ಥಾಪಿಸಲಾಗಿದೆ.

 

ಚಟುವಟಿಕೆಗಳು:

 

  • ಪರಂಪರೆ ಕಟ್ಟಡಗಳು, ಕ್ಷೇತ್ರಗಳ ಸಂರಕ್ಷಣೆ, ಸ್ವಚ್ಚತೆಯಲ್ಲಿ ಭಾಗಿಯಾಗುವುದು ಮತ್ತು ಇದಕ್ಕೆ ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವ ಪಡೆಯುವುದು.

  • ಕಾಲೇಜುಗಳಲ್ಲಿ ಪರಂಪರೆ ಅರಿವು ಮೂಡಿಸುವ ಸಭೆ, ಸಮಾರಂಭ, ಕ್ವಿಜ಼್ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮತ್ತು ಪಾರಂಪರಿಕ ಪ್ರದೇಶಗಳಿಗೆ ಭೇಟಿ ನೀಡುವುದು.

  • ಪರಂಪರೆ ಸ್ಮಾರಕಗಳ ಬಗ್ಗೆ ಭಿತ್ತಿಪತ್ರ, ಕರಪತ್ರಗಳನ್ನು ಮುದ್ರಿಸುವುದು. ಅವಶ್ಯಕತೆ ಇದ್ದಲ್ಲಿ ಫಲಕಗಳನ್ನು ಅಳವಡಿಸುವುದು.

  • ಪರಂಪರಾಗತ ಕಲೆ, ಕರಕುಶಲ ಕಲೆಗಳು, ಗುಡಿಕೈಗಾರಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಂಬಲಿಸುವುದು ಮತ್ತು ಹಮ್ಮಿಕೊಳ್ಳುವುದು.

  • ಐತಿಹಾಸಿಕ, ಪಾರಂಪರಿಕ ಕ್ಷೇತ್ರಗಳಿಗೆ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು.

  • ಪ್ರತಿ ವರ್ಷ ನಗರ, ಪಟ್ಟಣಗಳಲ್ಲಿ “ಹೆರಿಟೇಜ್‌ ವಾಕ್”(ಪಾರಂಪರಿಕ ಕಾಲ್ನಡಿಗೆ) ಏರ್ಪಡಿಸಿ, ಪರಂಪರೆ ಮಹತ್ವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

  • ಪರಂಪರೆ ಅರಿವು ಮೂಡಿಸಲು ವಿಚಾರ ಸಂಕಿರಣ, ಉಪನ್ಯಾಸ, ಶಿಬಿರ ಇತ್ಯಾದಿಗಳನ್ನು ಏರ್ಪಡಿಸುವುದು.

  • ಪರಂಪರಾಗತ ಪರಿಸರ, ಪ್ರದೇಶ (ನ್ಯಾಚುರಲ್‌ ಹೆರಿಟೇಜ್)‌ ಕ್ಷೇತ್ರಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು.

 

ರಾಜ್ಯದಲ್ಲಿ ಸ್ಥಾಪಿಸಿರುವ ಒಟ್ಟು ಪರಂಪರೆ ಕೂಟಗಳು

 

ಕ್ರ.ಸಂ

ಕಾಲೇಜುಗಳ ವಿವರ

ಪರಂಪರೆ ಕೂಟಗಳ ಸ್ಥಾಪನೆ

1

ಸರ್ಕಾರಿ  ಕಾಲೇಜುಗಳು

143

2

ಅನುದಾನಿತ ಕಾಲೇಜುಗಳು

101

3

ವಿಶ್ವವಿದ್ಯಾನಿಲಯಗಳು

06

     ಒಟ್ಟು

250

 

 

ವರ್ಷ 

ಪರಂಪರೆ ಕೂಟದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುದಾನ ಬಿಡುಗಡೆ ಮಾಡಿದ ಕಾಲೇಜುಗಳು ಸಂಖ್ಯೆ

2016-17

72

2017-18

83

2018-19

46

2019-20

46

2020-21

ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಿಲ್ಲ

 

 

hc hc1 hc

 

ಇತ್ತೀಚಿನ ನವೀಕರಣ​ : 07-06-2022 04:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080