ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತು ಸಂಗ್ರಹಾಲಯ ವೆಲ್ಲಿಂಗ್ಟನ್ ಭವನ ಮೈಸೂರು

ಮೈಸೂರು ಕರ್ನಾಟಕ ರಾಜ್ಯದ ಒಂದು ವಿಭಾಗ, ಪ್ರಮುಖ ಜಿಲ್ಲೆ, ತಾಲ್ಲೂಕು, ಮತ್ತು ಇವುಗಳ ಮುಖ್ಯ ಪಟ್ಟಣ. ನಾಡಿನ ಸಾಂಸ್ಕೃತಿಕ ರಾಜಧಾನಿ ಎನಿಸಿದ ಮೈಸೂರು ನಗರ ಪಾರಂಪರಿಕ ನಗರಗಳಲ್ಲಿ ಬಹುಮುಖ್ಯವಾದುದು. ರಾಜ್ಯದ ಅಂಚಿನಲ್ಲಿರುವ ಈ ಜಿಲ್ಲೆಯನ್ನು ಪೂರ್ವ, ಆಗ್ನೇಯ ಮತ್ತು ದಕ್ಷಿಣದಲ್ಲಿ ತಮಿಳುನಾಡು, ನೈರುತ್ಯದಲ್ಲಿ ಕೇರಳ ರಾಜ್ಯ, ಪಶ್ಚಿಮದಲ್ಲಿ ಹಾಸನ, ಕೊಡಗು ಜಿಲ್ಲೆ, ಉತ್ತರದಲ್ಲಿ ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳು ಸುತ್ತುವರೆದಿವೆ.

 

ಸರ್ಕಾರಿ ಕಲಾ ಗ್ಯಾಲರಿ (ವೆಲ್ಲಿಂಗ್‍ಟನ್ ಭವನ):

 

ವೆಲ್ಲಿಂಗ್‍ಟನ್ ಭವನ ಪ್ರಸ್ತುತ ರಾಜ್ಯ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಲಾ ಗ್ಯಾಲರಿಯಾದ ಈ ಕಟ್ಟಡ ಮೈಸೂರಿನ ಪ್ರಮುಖ ಐತಿಹಾಸಿಕ ಪ್ರಾಚೀನ ಸ್ಮಾರಕಗಳಲ್ಲೊಂದು. ಇದು ಪ್ರಾರಂಭದಲ್ಲಿ ಅಂದರೆ ಟಿಪ್ಪು ಸುಲ್ತಾನನ ಮರಣಾನಂತರದಲ್ಲಿ ಮೈಸೂರು ಅರಸರು ಪುನಃ ಅಧಿಕಾರದ ಚುಕ್ಕಾಣಿ ಹಿಡಿಯುವ ಸಮಯದಲ್ಲಿ ಇದ್ದ ಬ್ರಿಟೀಷ್ ಅಧಿಕಾರಿಗಳಿಗೆ ವಸತಿ ತಾಣವಾಗಿತ್ತು.

 

ಟಿಪ್ಪು ಸುಲ್ತಾನನು 4ನೇ (ಆಂಗ್ಲೋ) ಮೈಸೂರು ಯುದ್ದದಲ್ಲಿ ಮಡಿದ ನಂತರ ಕರ್ನಲ್ ಆರ್ಥರ್ ವೆಲ್ಲೆಸ್ಲಿಯವರು ಕ್ರಿ.ಶ.1799ರಿಂದ 1801ರವೆರೆಗೆ ಇಲ್ಲಿ ವಾಸವಾಗಿದ್ದರು. ಇವರು ಬ್ರಿಟೀಷರು ಶ್ರೀರಂಗಪಟ್ಟಣದ ಯುದ್ಧದಲ್ಲಿ ಜಯಗಳಿಸುವಲ್ಲಿ ಮತ್ತು ಮೈಸೂರು ಸಂಸ್ಥಾನದ ರಾಜ ಸಿಂಹಾಸನವನ್ನು ಅವರ ವಂಶಸ್ಥರಿಗೆ ಮರಳಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 

ಕರ್ನಲ್ ಆರ್ಥರ್ ವೆಲ್ಲೆಸ್ಲಿಯವರು ತದನಂತರ ವೆಲ್ಲಿಂಗ್ಟನ್‍ನ ಡ್ಯೂಕ್ ರಾಗಿ ನೇಮಕಗೊಂಡರು. ಹೀಗಾಗಿ ಇಂದಿಗೂ ಈ ಕಟ್ಟಡಕ್ಕೆ ವೆಲ್ಲಿಂಗ್ಟನ್ ಭವನವೆಂಬ ಹೆಸರು ರೂಢಿಯಲ್ಲಿ ಉಳಿದುಕೊಂಡು ಬಂದಿದೆ.

 

ವಸ್ತುಸಂಗ್ರಹಾಲಯ ಕಟ್ಟಡ:

 

ವೆಲ್ಲಿಂಗ್‍ಟನ್ ಭವನವು ಸುಮಾರು 200ಕ್ಕೂ ಅಧಿಕ ವರ್ಷಗಳಷ್ಟು ಪ್ರಾಚೀನವಾಗಿದೆ. ಇದು ಬ್ರಿಟೀಷ್ ಅಧಿಕಾರಿಗಳಿಗೋಸ್ಕರ ಮೈಸೂರಿನಲ್ಲಿ ಅಂದು ನಿರ್ಮಿಸಿದ ಪ್ರಥಮ ಕಟ್ಟಡವೂ ಹೌದು. ಈ ಪಾರಂಪರಿಕ ಕಟ್ಟಡವು ಆಯತಾಕೃತಿಯ ಒಂದು ಮಹಡಿಯುಳ್ಳ ಕಟ್ಟಡ. ವಿಶಾಲವಾದ ಈ ಕಟ್ಟಡ ಸಾಧಾರಣ ಹೊರನೋಟವನ್ನು ಹೊಂದಿದೆ. ಹೆಚ್ಚು ಅಲಂಕಾರವಿಲ್ಲದ ಮತ್ತು ಆಡಂಬರವಿಲ್ಲದ ವಾಸ್ತುಶೈಲಿ ಇದರದ್ದು. ಕಟ್ಟಡದ ಪೂರ್ವಕ್ಕಿರುವ ಮಹಡಿಯ ಜೋಡು ಮೆಟ್ಟಿಲುಗಳು ಮತ್ತು ಇದರ ವಿಶಾಲವಾದ ಆಕೃತಿಯೊಂದೇ ಕಟ್ಟಡದ ಆಕರ್ಷಣೆಯ ಕೇಂದ್ರಬಿಂದು.

 

ಪ್ರಸ್ತುತ ಕಟ್ಟಡವು ಇಲಾಖೆಯ ರಾಜ್ಯ ಸಂರಕ್ಷಿತ ಸ್ಮಾರಕವಾಗಿದ್ದು, ಮೊದಲ ಮಹಡಿ ರಾಜ್ಯ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಲಾ ಗ್ಯಾಲರಿಯಾಗಿದ್ದು, ಇಲ್ಲಿ ರಾಜ್ಯದ ವಿಭಿನ್ನ ಕಾಲಘಟ್ಟಗಳ ಪ್ರಮುಖ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

 

ಎಲ್ಲಾ ಸಂಸ್ಕೃತಿಗಳ ವಸ್ತುಗಳನ್ನು ಸಂರಕ್ಷಿಸುವ ಕಾರ್ಯಕ್ಕೆಂದೇ ಸರ್ಕಾರಿ ಆದೇಶ ಸಂಖ್ಯೆ:ಸಂಕಇ:136:ಕೆಎಂಯು:96, ದಿನಾಂಕ:19-12-1996 ರ ಸರ್ಕಾರಿ ಆದೇಶದಂತೆ ಸರ್ಕಾರಿ ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಸರ್ಕಾರಿ ವಸ್ತುಸಂಗ್ರಹಾಲಯವು ಮೈಸೂರಿನ ಪಾರಂಪರಿಕ ಕಟ್ಟಡವಾದ ವೆಲ್ಲಿಂಗ್ಟನ್ ಕಟ್ಟಡದಲ್ಲಿದೆ. 

 

ಆಧುನಿಕ ವರ್ಣ ಚಿತ್ರಗಳ ಗ್ಯಾಲರಿಗಳು:

 

ಕರ್ನಾಟಕವು ತನ್ನದೇ ಆದ ಕಲಾ ಶಾಲೆಯನ್ನು ಅಭಿವೃದ್ಧಿಪಡಿಸಿದೆ. ಚಿತ್ರಕಲೆ ಅದರ ಒಂದು ರೂಪ ಮತ್ತು ವಸ್ತುಸಂಗ್ರಹಾಲಯದ ಆಸಕ್ತಿದಾಯಕ ವಿಭಾಗವಾಗಿದೆ. ಚಿತ್ರಕಲಾವಿದರು ವಿವಿಧ ವರ್ಣಗಳಿಂದ ರಚಿಸಿರುವ ಸುಮಾರು 60 ಆಧುನಿಕ ಸಮಕಾಲೀನ ವರ್ಣಚಿತ್ರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇವುಗಳು ತೈಲ ಮತ್ತು ಜಲವರ್ಣ, ಮಿಶ್ರ ಮಾದ್ಯಮ, ಪೆನ್ಸಿಲ್ ಸ್ಕೆಚ್, ಹಾಗೂ ಎಚಿಂಗ್ ವರ್ಣಗಳಲ್ಲಿ ರಚಿತವಾಗಿವೆ. ಈ ಭಾಗದ ಕಲಾಕಾರರು ರಚಿಸಿದ ವೈವಿಧ್ಯಮಯವಾದ ವಿವಿಧ ಶೈಲಿಗಳ ಹಾಗೂ ವಿಷಯಗಳ ಸೃಜನಾತ್ಮಕ ಮತ್ತು ನೈಜವಾದ  ಆಧುನಿಕ ವರ್ಣಚಿತ್ರಗಳು ಇಲ್ಲಿ ಪ್ರದರ್ಶಿಸಲ್ಪಟ್ಟಿವೆ. ತೀಕ್ಷ್ಣವಾದ ಮತ್ತು  ವಿವಿಧ ಬಣ್ಣಗಳ ಸಾಮರಸ್ಯ ಹಾಗೂ ವೈಯಕ್ತಿಕ ಶೈಲಿ ಮತ್ತು ತಾಂತ್ರಿಕತೆಗಳೇ ಈ ವರ್ಣ ಚಿತ್ರಗಳ ವಿಶೇಷತೆಯಾಗಿದೆ.  ಅವುಗಳಲ್ಲಿ ಮುಖ್ಯವಾಗಿ ಕಲಾವಿದರಾದ ಎ.ಆರ್.ವಾಸು ರಚಿಸಿದ ಕ್ಯಾನ್ವಾಸ್ ಮೇಲಿನ ತೈಲವರ್ಣದ 25ನೇ ಮಹಾರಾಜ ಜಯಚಾಮರಾಜ ಒಡೆಯರ್ ರವರು ರಾಜ ಉಡುಗೆ ಧರಿಸಿ ನಿಂತಿರುವ ಕಲಾಕೃತಿ. ವೈ.ನಾಗರಾಜು ರಚಿಸಿದ ಪಂಡಿತ ಜವಾಹರಲಾಲ್ ನೆಹರು ಕಲಾಕೃತಿ ಹಾಗೂ ಎ.ಆರ್ ವಾಸು ರಚಿಸಿದ ತೈಲವರ್ಣದ ದಿವಾನ್ ಮಾಧರಾವ್ ಕಲಾಕೃತಿ ಕಲಾವಿದ ಎಂ.ವೀರಪ್ಪ ರಚಿಸಿದ ವಿರೂಪಾಕ್ಷ ದೇವಾಸ್ಥಾನ,ಇನ್ನಿತರೆ ಆಧುನಿಕ ಕಲಾಕೃತಿಗಳು ವಸ್ತು ಸಂಗ್ರಹಾಲಯದಲ್ಲಿ ಗಮನ ಸೆಳೆಯುತ್ತವೆ.

 

ಇತ್ತೀಚಿನ ನವೀಕರಣ​ : 24-02-2021 12:06 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080