ಅಭಿಪ್ರಾಯ / ಸಲಹೆಗಳು

ಸರ್ಕಾರಿ ವಸ್ತು ಸಂಗ್ರಹಾಲಯ ಮಡಿಕೇರಿ

ಸರ್ಕಾರಿ ವಸ್ತುಸಂಗ್ರಹಾಲಯ ಮಡಿಕೇರಿ

 

 

ವಸ್ತುಸಂಗ್ರಹಾಲಯ ಸ್ವರೂಪ

ಪುರಾತತ್ವ

ಪ್ರಾರಂಭವಾದ ವರ್ಷ

1971

ಆಡಳಿತ

ಪುರಾತತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು

ಕಟ್ಟಡದ ವಿನ್ಯಾಸ

ಸಂಗ್ರಹಾಲಯದ ಕಟ್ಟಡವೂ ಕಟ್ಟಡವೂ ಕೂಡ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸುಮಾರು 150 ವರ್ಷಗಳ ಹಿಂದಿನ ರೋಮನ್ ಗೋಥಿಕ್ ಶೈಲಿಯ ಚರ್ಚ್ ಇದಾಗಿದೆ. ಪ್ರವೇಶ ದ್ವಾರದ ಮೇಲೆ ಎತ್ತರದ ಕಮಾನು, ವಿಶಾಲ ಸಭಾಂಗಣ ಹಾಗೂ ಪಾರದರ್ಶಕ ಗಾಜಿನ ಕಿಟಕಿಗಳು ಇದರ ಆಕರ್ಷಣೆಯಾಗಿವೆ

ವಿಸ್ತೀರ್ಣ

25ಮೀ. * 14ಮೀ

ಪ್ರಾಮುಖ್ಯತೆ

ಕರ್ನಾಟಕದ ಒಂದು ಜಿಲ್ಲೆÉ ಕೊಡಗು, ಸೃಷ್ಟಿ ಸೌಂದರ್ಯಕ್ಕೆ, ಕಾಫಿ, ಏಲಕ್ಕಿ, ಕಿತ್ತಲೆಗಳಿಗೆ ಜೊತೆಗೆ ಇಲ್ಲಿನ ಸಂಸ್ಕೃತಿ ಆಚಾರ-ವಿಚಾರಗಳು ಹಾಗೂ ವೇಶ-ಭೂಷಣಗಳು ಮತ್ತು ಭಾಷೆ, ವಿಶೇಷವಾದುದು. ಕೊಡವರು ಇಂದಿಗೂ ಕೂಡ ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿz್ದÁರೆ. ಕೊಡಗಿನ ಐತಿಹಾಸಿಕ, ಸಾಂಸ್ಕೃತಿಗಳ ವಸ್ತುಗಳನ್ನು ಸಂರಕ್ಷಿಸಲು 1971ರಲ್ಲಿ ಕೋಟೆ ಪ್ರದೇಶದಲ್ಲಿರುವ ಚರ್ಚ್ ಕಟ್ಟಡದಲ್ಲಿ ಈ ಸರ್ಕಾರಿ ವಸ್ತುಸಂಗ್ರಹಾಲಯ ಪ್ರಾರಂಭಿಸಲಾಯಿತು. ರೋಮನ್ ಗೋಥಿಕ್ ಶೈಲಿಯ ಈ ಚರ್ಚ್‍ನ್ನು 1855ರಲ್ಲಿ ನಿರ್ಮಿಸಲಾಗಿದೆ.

ಈ ವಸ್ತುಸಂಗ್ರಹಾಲಯದಲ್ಲಿ ಕೊಡಗಿನ ಪರಂಪರೆಯನ್ನು ಪ್ರತಿನಿಧಿಸುವ ವಸ್ತುಗಳು, ಕಲೆ, ಪ್ರಾಚೀನ ಶಿಲ್ಪಗಳು, ಸ್ಮಾರಕಗಳು, ಶಾಸನಗಳು, ಉನ್ನತ ವಿನ್ಯಾಸದ ಆಯುಧಗಳು ಪ್ರದರ್ಶಿಸಲ್ಪಟ್ಟಿವೆ. ಇವು ಕೊಡಗು ಪ್ರದೇಶವನ್ನು ಆಳಿದ ಗಂಗ, ಕೊಂಗಾಳ್ವ, ಚೆಂಗಾಳ್ವ, ಹೊಯ್ಸಳ, ವಿಜಯನಗರ, ಬೇಲೂರು ನಾಯಕರು, ನಂತರ ಕೊಡಗಿನ ರಾಜರ ಇತಿಹಾಸದ ಪ್ರತೀಕಗಳನ್ನು ಸಂಗ್ರಹಿಸಲಾಗಿದೆ.

ಇಲ್ಲಿ ಹಿಂದೂ ಮತ್ತು ಜೈನತೀರ್ಥಂಕರರ ವಿಗ್ರಹಗಳು, ವೀರರಾಜೇಂದ್ರರ ಕಾಲದ ಒಡಿ ಕತ್ತಿಗಳು ಮತ್ತು ಬ್ರಿಟೀಷ್ ಕಾಲದ ಕೋವಿಗಳು, ಯುದ್ಧ ಕತ್ತಿಗಳು, ಜಾನಪದ ಕಂಚಿನ ವಿಗ್ರಹಗಳು ಮತ್ತು ವೀರಗಲ್ಲುಗಳು ಹಾಗೂ ದಿವಂಗತ ಫೀಲ್ಡï ಮಾರ್ಷಲ್ ಕಾರ್ಯಪ್ಪ ಅವರ ಕೆಲವು ಪ್ರಮುಖ ವಸ್ತುಗಳು ಇಲ್ಲಿ ಪ್ರದರ್ಶಿತವಾಗಿವೆ.

ವೀಕ್ಷಣೆಯ ಸಮಯ

ವಾರದ ಎಲ್ಲಾ ದಿನಗಳೂ ಬೆಳಿಗ್ಗೆ 10:00 ರಿಂದ ಸಂಜೆ 5:30ರವರಗೆ (ಸಾರ್ವತ್ರಿಕ ರಜಾ ದಿನಗಳನ್ನು ಹೊರತು ಪಡಿಸಿ)

ಸಂಪರ್ಕಿಸುವ ವಿಳಾಸ

ಕ್ಯುರೇಟರ್, ಕ್ಯುರೇಟರ್ರವರ ಕಛೇರಿ,   ಸರ್ಕಾರಿ  ವಸ್ತುಸಂಗ್ರಹಾಲಯ, ಕೋಟೆ ಆವರಣ, ಮಡಿಕೇರಿ – ಕೊಡಗು ಜಿಲ್ಲೆ-577201

ದೂ: 0827-225674, ಇಮೇಲ್- rekhabaasoor@yahoo.in

 

ಇತ್ತೀಚಿನ ನವೀಕರಣ​ : 28-09-2022 12:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080