ಅಭಿಪ್ರಾಯ / ಸಲಹೆಗಳು

ಇಲಾಖೆಯ ಚಟುವಟಿಕೆಗಳು

ಪ್ರಮುಖ ಚಟುವಟಿಕೆಗಳು:

 

  • ಉತ್ಖನನ

  • ಅನ್ವೇಷಣೆ

  • ನಾಣ್ಯಶಾಸ್ತ್ರ

  • ಸಂರಕ್ಷಣೆ

  • ಸಾಖಾಸ(ಪಿಪಿಪಿ)

  • ಶಾಸನಶಾಸ್ತ್ರ

  • ಪ್ರಕಟಣೆಗಳು

  • ಸಂಗ್ರಹಾಲಯಗಳು

  • ವಿಚಾರ ಸಂಕಿರಣ

  • ವಸ್ತು ಪ್ರದರ್ಶನ

  • ಕಾರ್ಯಗಾರ

 

ಉತ್ಖನನ:

 

  • ಉತ್ಖನನವೆಂದರೆ, ಪುರಾತನ ಅವಶೇಷಗಳನ್ನು ಬಹಿರಂಗಗೊಳಿಸುವುದು, ಸಂಸ್ಕರಿಸುವುದು ಮತ್ತು ದಾಖಲೀಕರಣಗೊಳಿಸುವುದು.

  • ಒಂದು ಉತ್ಖನನ ಸ್ಥಳವನ್ನು ಅಥವಾ “ಖನನ”ವು ಅಧ್ಯಯನಕ್ಕೆ ಒಳಪಡುವ ನಿವೇಶನವಾಗಿರುತ್ತದೆ. ಅಂತಹ ಒಂದು ನಿವೇಶನ ಉತ್ಖನನವು ಒಂದು ನಿರ್ದಿಷ್ಟ ಪುರಾತತ್ವ ನಿವೇಶನ ಅಥವಾ ಒಂದು ಸಂಬಂಧಿತ ನಿವೇಶನ ಶ್ರೇಣಿಗಳಿಗೆ ಸಂಬಂಧಪಟ್ಟಿರುತ್ತದೆ ಮತ್ತು ಇಂತಹ ಉತ್ಖನನವನ್ನು ಕೆಲವು ವಾರಗಳಿಂದ ಹಿಡಿದು ಅನೇಕ ವರ್ಷಗಳವರೆಗೆ ಮುಂದುವರಿಸಬಹುದಾಗಿದೆ.

 

ಅನ್ವೇಷಣೆ:

 

  • ಅನ್ವೇಷಣೆಯೆಂದರೆ ಅರಸುವಿಕೆಯ ಕ್ರಿಯೆಯಾಗಿದ್ದು ಇದರ ಉದ್ದೇಶ ಮಾಹಿತಿ ಅಥವಾ ಸಂಪನ್ಮೂಲಗಳ ಶೋಧನೆ. ಅನ್ವೇಷಣೆಯು ಮಾನವರೂ ಸೇರಿದಂತೆ ಮೂಲಕ್ಕೆ ಸೇರಿಕೊಂಡಿದ್ದ ಪ್ರಾಣಿ ಸಂಕುಲದಲ್ಲಿ ಸಂಭವಿಸುತ್ತದೆ. ಮಾನವನ ಇತಿಹಾಸದಲ್ಲಿ ಇದರ ಅತ್ಯಂತ ಕೌತುಕ ಬೆಳವಣಿಗೆಯು ಶೋಧನೆಯ ಯುಗದಲ್ಲಿ ಕಾಣಬಹುದಾಗಿದ್ದು ತಾರ್ಕಿಕವೆನಿಸಿದೆ. ಇದು ಯಾವಾಗ ಎಂದರೆ ಯುರೋಪಿಯನ್ ನಾವಿಕರು ಸಮುದ್ರಯಾನದ ಮೂಲಕ ಐಹಿಕ ಸಂಪತ್ತನ್ನು ಅರಸಿ ವಿಶ್ವದ ಅನೇಕ ಭಾಗಗಳನ್ನು ಹುಡುಕಿ ಹೊರಟ ಸನ್ನಿವೇಶದಲ್ಲಿ ಕಾಣಬರುತ್ತದೆ. ಇದರ ನಂತರ ಶೋಧನೆಯ ಯುಗದೋತ್ತರ ಪ್ರಮುಖ ಅನ್ವೇಷಣೆಗಳು ಮಾಹಿತಿಯ ಮೂಲ ಕಾರಣಕ್ಕಾಗಿ ಸಂಭವಿಸಿವೆ.

  • ವೈಜ್ಞಾನಿಕ ಸಂಶೋಧನೆಯಲ್ಲಿ ಅನ್ವೇಷಣೆಯು ಪ್ರಾಯೋಗಿಕ ಸಂಶೋಧನೆ ಮೂರು ಉದ್ದೇಶಗಳಲ್ಲಿ ಒಂದಾಗಿರುತ್ತದೆ. (ಮತ್ತಿರೆಡು ವಿವರಣೆ ಮತ್ತು ವ್ಯಾಖ್ಯಾನ) ಸಾಮಾನ್ಯವಾಗಿ ಈ ಪದವನ್ನು ರೂಪಕವಾಗಿ ಬಳಸಲಾಗುತ್ತದೆ.

 

ನಾಣ್ಯಶಾಸ್ತ್ರ:

 

  • ನಾಣ್ಯಶಾಸ್ತ್ರವೆಂದರೆ ನಾಣ್ಯಗಳು, ಬಿಲ್ಲೆಗಳು ಪೇಪರ್‍ಹಾಣೆ ಮತ್ತು ಸಂಬಂಧಿತ ವಸ್ತುಗಳು ಇವುಗಳು ಸೇರಿದಂತೆ ಚಲಾವಣೆಯ ಸಂಗ್ರಹ ಅಥವಾ ಅಧ್ಯಯನ. ಸಾಮಾನ್ಯವಾಗಿ ನಾಣ್ಯಶಾಸ್ತ್ರಜ್ಞರನ್ನು ನಾಣ್ಯಗಳ ಸಂಗ್ರಹಕಾರರು ಅಥವಾ ವಿದ್ಯಾರ್ಥಿಗಳೆಂದು ವರ್ಗೀಕರಿಸಲಾಗುತ್ತದೆ. ಈ ವಿಭಾಗವು ಹಣದ ವಿಸ್ತೃತ ಅಧ್ಯಯನವನ್ನು ಮತ್ತು ಸಾಲವನ್ನು ತೀರಿಸಲು ಬಳಸುವ ಇತರೆ ಪಾವತಿ ಮಾಧ್ಯಮ ಮತ್ತು ಸರಕುಗಳ ವಿನಿಮಯ ಇವುಗಳನ್ನು ಒಳಗೊಂಡಿದೆ. ಬಹಳ ಹಿಂದೆ ಜನರಿಂದ ಉಪಯೋಗಿಸುತ್ತಿದ್ದ ಹಣವನ್ನು “ವಿಲಕ್ಷಣ ಮತ್ತು ಕುತೂಹಲಕಾರಿ” ಎಂದು ಉಲ್ಲೇಖಿಸಲಾಗುತ್ತಿದೆ. ಚಲಾವಣಾ ಹಣವನ್ನಾಗಿ ಉಪಯೋಗಿಸಲಾಗುತ್ತಿದ್ದ ಸಂಧರ್ಭದಲ್ಲಿಯೂ ಸಹ (ಉದಾಹರಣೆಗೆ ಸೆರೆಮನೆಯಲ್ಲಿನ ಸಿಗರೇಟು) ಸಮಾನ ಬೆಲೆಯ ಒಂದು ಪದಾರ್ಥವನ್ನು ಖರೀದಿಸಲು ಉಪಯೋಗಿಸುತ್ತಿದ್ದ ಮತ್ತೊಂದು ಪದಾರ್ಥದ ವಿನಿಮಯವನ್ನು ಈ ಪದ್ಧತಿಯಿಂದ ಹೊರಗಿಡಲಾಗಿತ್ತು. ಕಿರ್‍ಗಿಜ್ ಜನರು ಕುದುರೆಗಳನ್ನು ಪ್ರಮುಖ ಚಲಾವಣಾ ಹಣ ಘಟಕವನ್ನಾಗಿ ಮತ್ತು ಕುರಿ ಚರ್ಮದ ರೂಪದಲ್ಲಿ ಸಣ್ಣ ಚಿಲ್ಲರೆಗಳನ್ನು ನೀಡುತ್ತಿದ್ದರು. 1. ನಾಣ್ಯಶಾಸ್ತ್ರದ ಅಧ್ಯಯನಕ್ಕಾಗಿ ಕುರಿ ಚರ್ಮವು ಸೂಕ್ತವಾಗಿದೆಯಾದರೂ ಸಹ ಕುದುರೆಯಲ್ಲ. ಅನೇಕ ಶತಮಾನಗಳವರೆಗೆ ಅನೇಕ ವಸ್ತುಗಳನ್ನು ನಾಣ್ಯದ ರೂಪದಲ್ಲಿ ಉಪಯೋಗಿಸಲಾಗುತ್ತಿತ್ತು. ಉದಾಹರಣೆಗೆ: ಕವಡೆಗಳು, ಬೆಲೆಬಾಳುವ ಲೋಹಗಳು ಮತ್ತು ಮುತ್ತುಗಳು.

 

ಸಂರಕ್ಷಣೆ:

 

  • ಐತಿಹಾಸಿಕ ಮತ್ತು ವಾಸ್ತುಶಿಲ್ಪ ಮಹತ್ವದ ಪುರಾತನ ಕಟ್ಟಡಗಳನ್ನು ಸುಸ್ಥಿತಿಯಲ್ಲಿ ಸಂರಕ್ಷಿಸುವುದರಿಂದ ನಮ್ಮ ಇತಿಹಾಸ ಮತ್ತು ಸಂಸ್ಕೃತಿಗೆ ಸೇರಿದ ಒಂದು ಪ್ರಬಲ ಭಾವನೆ ಅಥವಾ ಮನೋಭಾವ ಚಿರಸ್ಮರಣಿಯವಾಗಿರುವುದು ಏಕೆಂದರೆ ಇದು ನಮ್ಮ ಅರಸುಗಳು ಮತ್ತು ನಿರ್ಮಾಣದಾರರು ಬಿಟ್ಟು ಹೋಗಿರುವ ಐತಿಹಾಸಿಕ ಸಂಪತ್ತಾಗಿರುತ್ತದೆ. ಈ ಕಾರಣಕ್ಕಾಗಿ ನಮ್ಮ ಮುಂದಿನ ಪೀಳಿಗೆಗಾಗಿ ರಕ್ಷಿಸುವ ಮತ್ತು ಸಂರಕ್ಷಿಸುವ ಇರಾದೆಯಿದೆ.

  • ಸಂರಕ್ಷಣೆಯ ಅರ್ಥವೆಂದರೆ ಯಾವ ವಿಧಾನಗಳಿಂದ ಸಾಮಾಗ್ರಿಗಳು, ವಿನ್ಯಾಸ ಮತ್ತು ಸ್ಮಾರಕದ ಅವಿಭಾಜ್ಯತೆಯನ್ನು ಅದರ ಪುರಾತತ್ವ ಮತ್ತು ವಾಸ್ತುಶಿಲ್ಪ ಮೌಲ್ಯದ, ಐತಿಹಾಸಿಕ ಮಹತ್ವದ ಮತ್ತು ಅದರ ಸಾಂಸ್ಕೃತಿಕ ಅಥವಾ ಅಮೂರ್ತ ಸೇರ್ಪಡೆಗಳ ಅಂಶಗಳನ್ನು ರಕ್ಷಿಸುವುದು.

  • ರಚನೆಯೆಂದರೆ ಯಾವುದೇ ಕಟ್ಟಡ, ಉಪಕರಣ ಅಥವಾ ಸಲಕರಣೆ ಅಥವಾ ಇತರೆ ಸೌಲಭ್ಯಗಳು ಸ್ಮಾರಕಗಳ, ನೆಲೆ ಮತ್ತು/ಅಥವಾ ಪುರಾತತ್ವ ಅವಶೇಷಗಳ ಭಾಗವಾಗಿದ್ದು ಭೂಮಿಯಲ್ಲಿ ನಾಟಿ ನೆಲೆಗೊಳಿಸಿರುವುದು.

  • ಮಧ್ಯಪ್ರವೇಶದ ಅರ್ಥವೆಂದರೆ ಉಪ-ಅನುಚ್ಛೇಧಗಳು 204 ರಿಂದ 217ಗಳಲ್ಲಿ ಸ್ಮಾರಕದ ಮತ್ತು ಅದರ ಅವಿಭಾಜ್ಯತೆಯ ಸಂರಕ್ಷಣೆಯನ್ನು ವಿವರಿಸಿರುವಂತೆ ಸಂರಕ್ಷಣೆಗಾಗಿ ಕೈಗೊಂಡ ಕ್ರಮಗಳು.

  • ಮೂಲರಚನೆ ಅರ್ಥವೆಂದರೆ ಎಲ್ಲಾ ಚರ ಮತ್ತು ಚಿರ ಒಳಾಂಶಗಳು ಅಥವಾ ಸ್ಮಾರಕದ ರಚನೆಯೂ ಸೇರಿದಂತೆ ಅದರ ಒಳಾಂಶಗಳು.

  • ನಿರ್ವಹಣೆ ಅಥವಾ ಮುಂಜಾಗರೂಕತ ಸಂರಕ್ಷಣೆಯ ಅರ್ಥವೆಂದರೆ ಸ್ಮಾರಕದ ಪಾಲನೆಗಾಗಿ ಅದರ ಧಕ್ಕೆ ಮತ್ತು ಕ್ಷೀಣಿಸುವಿಕೆಯನ್ನು ತಡೆಗಟ್ಟಲು ತೆಗೆದುಕೊಳ್ಳುವ ಕ್ರಮಗಳು ಮತ್ತು ಸಾಧ್ಯವಾದ ಮಟ್ಟಿಗೆ ಮಧ್ಯ ಪ್ರವೇಶವನ್ನು ತಪ್ಪಿಸುವುದಾಗಿದೆ. ಎಲ್ಲಾ ಸ್ಮಾರಕಗಳನ್ನು ಸಮರ್ಪಕವಾಗಿ ಅವುಗಳ ಮಹತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಕ್ರಮಬದ್ಧವಾಗಿ ಉಳಿಸುವಿಕೆಗಾಗಿ ಚಾಚೂತಪ್ಪದೆ ಗಮನಹರಿಸಿ ಯಾವುದೇ ಪ್ರಮುಖ ಅನವಶ್ಯಕ ಮಧ್ಯ ಪ್ರವೇಶವನ್ನು ತಡೆಗಟ್ಟಬೇಕು.

  • ರಕ್ಷಣೆಯೆಂದರೆ ಸ್ಮಾರಕದ ಅಸ್ತಿತ್ವವನ್ನು ಅದು ಇರುವ ಸ್ಥಿತಿಯಲ್ಲಿಯೇ ಯಾವುದೇ ಬದಲಾವಣೆಗೆ ಉದ್ದೇಶ ಪೂರ್ವಕವಾಗಿ ಮಾನವ ಮಧ್ಯಪ್ರವೇಶದ ಮೂಲಕವಾಗಿಯಾಗಲೀ ಅಥವಾ ಅದರ ಒಳರಚನೆಗಳ ವಿನಾಸವು ನೈಸರ್ಗಿಕ ಕಾರಣದಿಂದ ಅಥವಾ ಅದರ ಸಮೀಪದ ಪರಿಸರ ಕಾರಣಕ್ಕೆ ಅವಕಾಶ ನೀಡದೆಯೇ ನಿರ್ವಹಿಸುವುದಾಗಿದೆ.

  • ದುರಸ್ಥಿಯೆಂದರೆ ಧಕ್ಕೆಯಾಗಿರುವ ಅಥವಾ ಜೀರ್ಣಾವಸ್ಥೆಯಲ್ಲಿರುವ ವಸ್ತುಗಳನ್ನು ಅಥವಾ ಸ್ಮಾರಕದ ಒಂದು ಭಾಗವನ್ನು ತೆಗೆದು ಸಮರ್ಪಕವಾಗಿ ಸೇರಿಸುವುದರ ಮೂಲಕ ಸ್ಮಾರಕಕ್ಕೆ ಭದ್ರತೆ ಒದಗಿಸುವುದು ಮತ್ತು ಮೂಲ ವಸ್ತುಗಳು ನಷ್ಟವಾಗುವುದನ್ನು ತಡೆಗಟ್ಟುವುದು.

 

ಸರ್ಕಾರ-ಖಾಸಗಿ-ಸಾರ್ವಜನಿಕ ಸಹಭಾಗಿತ್ವ:

 

  • ಇದೊಂದು ಬಹು ವಿಶಿಷ್ಟವಾದ ಉಪಕ್ರಮಣವಾಗಿದೆ. ಆಸಕ್ತ ಖಾಸಗಿ ಸಂಸ್ಥೆಗಳು ಸ್ಮಾರಕಗಳ ಸಂರಕ್ಷಣೆಗಾಗಿ ಸ್ಥಳೀಯ ಜನರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ತೊಡಗಬಹುದಾಗಿರುತ್ತದೆ.

  • 2002-03ನೇ ಸಾಲಿನಿಂದ ಆರಂಭಗೊಂಡು ಈ ಇಲಾಖೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‍ನೊಡನೆ ಸಹಭಾಗಿಯಾಗಿ ಆಯ್ದಾ ಸ್ಮಾರಕಗಳ ಸಂರಕ್ಷಣೆಗಾಗಿ ಕೈಗೂಡಿಸಿದೆ. ಈ ಯತ್ನವು ಫಲಪ್ರದವಾಗಿ ಸಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು 40:40:20 ಪ್ರಮಾಣದಲ್ಲಿ ನಿರ್ವಹಿಸಲಾಗುತ್ತಿದೆ (ಸರ್ಕಾರ:ಖಾಸಗಿ:ಸಾರ್ವಜನಿಕ).

 

ಶಾಸನ ಶಾಸ್ತ್ರ:

 

  • ಶಾಸನಶಾಸ್ತ್ರ (ಗ್ರೀಕ್ ಎಫಿಗ್ರಪಿ, ಅಕ್ಷರಶಃ “ಬರಹದಲ್ಲಿರುವ” “ಶಾಸನ” ಶಾಸನದ ಅಧ್ಯಯನ ಅಥವಾ ಬರಹದ ಶಿಲಾಶಾಸ್ತ್ರ ಬರವಣಿಗೆಯ ಸಂಕೇತಗಳನ್ನು ಗುರುತಿಸುವ ವಿಜ್ಞಾನ, ಅವುಗಳ ಅರ್ಧವನ್ನು ವರ್ಗೀಕರಿಸುವುದು, ಕಾಲಮಾನ ಮತ್ತು ಸಾಂದರ್ಭಿಕ ಸಂದರ್ಭಕ್ಕನುಗುಣವಾಗಿ ಅವುಗಳ ಉಪಯೋಗವನ್ನು ವರ್ಗೀಕರಿಸುವುದು ಮತ್ತು ಬರವಣಿಗೆ ಮತ್ತು ಬರಹಗಾರರ ಬಗ್ಗೆ ನಿರ್ದಿಷ್ಟ ತೀರ್ಮಾನಕ್ಕೆ ಬರುವಿಕೆ.

  • ಶಾಸನ ಶಾಸ್ತ್ರದಿಂದ ನಿರ್ದಿಷ್ಟವಾಗಿ ತೆಗೆದು ಹಾಕಿರುವ ವಿಷಯವೆಂದರೆ ದಾಖಲೆಯಾಗಿ ಐತಿಹಾಸಿಕ ಮಹತ್ವದ ಒಂದು ಶಾಸನ ಮತ್ತು ಸಾಹಿತ್ಯ ಬೆಳವಣಿಗೆಯ ಕಲಾತ್ಮಕ ಮೌಲ್ಯ.

  • “ಹಲ್ಮಿಡಿ ಶಾಸನ” ಕರ್ನಾಟಕದಲ್ಲಿ ಅಶೋಕನ ಶಿಲಾಶಾಸನ.

 

ಪ್ರಕಟಣೆಗಳು:

 

  • ಇಲಾಖಾವತಿಯಿಂದ 140 ಪ್ರಕಟಣೆಗಳು ಹೊರಬಂದಿದೆ.

  • ಸರ್ಕಾರಿ ಆದೇಶದ ಪ್ರಕಾರ ಈ ಪ್ರಕಟಣೆಗಳನ್ನು ಶೇ15 ರಿಂದ ಶೇ50ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

 

ವಸ್ತು ಸಂಗ್ರಹಾಲಯಗಳು:

 

  • ಕಟ್ಟಡದಲ್ಲಿ ಐತಿಹಾಸಿಕ, ವೈಜ್ಞಾನಿಕ, ಕಲಾತ್ಮಕ ಅಥವಾ ಸಾಂಸ್ಕೃತಿಕ ಆಸಕ್ತಿಯ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶಿಸುವ ಕಲೆಯ ಕಟ್ಟಡವೇ “ವಸ್ತುಸಂಗ್ರಹಾಲಯ”.

  • ವಸ್ತುಸಂಗ್ರಹಾಲಯವು ಲಾಭೋದ್ದೇಶವಿಲ್ಲದ, ಸಮಾಜದ ಸೇವೆಯಲ್ಲಿ ಮತ್ತು ಅದರ ಅಭಿವೃದ್ಧಿಯಲ್ಲಿ ಶಾಶ್ವತ ಸಂಸ್ಥೆಯಾಗಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ, ಇದು ಮಾನವೀಯತೆ ಮತ್ತು ಅದರ ಪರಿಸರದ ಮೂರ್ತ ಪರಂಪರೆ, ಅಮೂರ್ತ ಪರಂಪರೆಯ  ಪ್ರತೀಕವಾಗಿದೆ.ಇದು ಶಿಕ್ಷಣ ಅಧ್ಯಯನ ಹಾಗೂ ಸಂಶೋಧನೆಗೆ ಅತ್ಯಂತ ಉಪಯುಕ್ತವಾಗಿದೆ.  

 

ಪುರಾತತ್ವ ಸ್ಮಾರಕ:

 

  • ಕರ್ನಾಟಕ ಪುರಾತನ ಅಥವಾ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ನೆಲೆಗಳು ಮತ್ತು ಅವಶೇಷಗಳು ಅಧಿನಿಯಮ, 1961 ಕಲಂ 2 (1) “ಪ್ರಾಚೀನ ಸ್ಮಾರಕ” ಎಂದರೆ ಐತಿಹಾಸಿಕ, ಪುರಾತತ್ವ ಅಥವಾ ಕಲಾತ್ಮಕ ಆಸ್ಥೆಯುಳ್ಳಂಥ ಮತ್ತು ಒಂದು ನೂರು ವರ್ಷಗಳಿಗಿಂತಲೂ ಕಡಿಮೆಯಿಲ್ಲದೆ ಅಸ್ತಿತ್ವದಲ್ಲಿರುವಂಥ ಯಾವುದೇ ರಚನೆ, ನಿರ್ಮಿತಿ ಅಥವಾ ಸ್ಮಾರಕ ಅಥವಾ ಯಾವುದೇ ಸಮಾಧಿ, ದಿಬ್ಬ ಅಥವಾ ಹೂಳುವ ಸ್ಥಳ ಅಥವಾ ಯಾವುದೇ ಗುಹೆ, ಶಿಲಾಶಿಲ್ಪ, ಶಾಸನ. ಇತ್ಯಾದಿ ಪ್ಪ್ರಾಚ್ಯ ಕುರುಹುಗಳು.

                   ಒಟ್ಟು ರಾಜ್ಯ ಸಂರಕ್ಷಿತ ಸ್ಮಾರಕಗಳು ಮತ್ತು ಕೇಂದ್ರ ಸಂರಕ್ಷಿತ ಸ್ಮಾರಕಗಳು (A.S.I)

 

ಸಂಖ್ಯೆ

ವಿಭಾಗ

ರಾಜ್ಯ ಸಂಕ್ಷಿತ

ಕೇಂದ್ರ ಸಂರಕ್ಷಿತ (ಭಾಪುಸ)

ಒಟ್ಟು

1.

ಬೆಂಗಳೂರು

105

63

168

2.

ಮೈಸೂರು

125

71

196

3.

ಬೆಳಗಾವಿ

365

311

676

4.

ಕಲಬುರಗಿ

249

163

412

                          ಒಟ್ಟು

844

608

1452

 

ಬಹು ಹೆಚ್ಚಿನ ಪುರಾತನ ಸ್ಮಾರಕಗಳು ಅಸಂರಕ್ಷಿತ ಸ್ಮಾರಕಗಳಾಗಿರುತ್ತವೆ.

 

ಸಂರಕ್ಷಣಾ ತತ್ವ:

 

  • ನಾವು ವರ್ತಮಾನದ ಮಾನವರು ಮತ್ತು ಯಾವುದೇ ಬೇರೆ ತರಹದ ವಾರಸುದಾರತ್ವದ ರೀತಿಯ ವಾರಸುದಾರತನ ಹೊಂದಿದ್ದೇವೆ. ಅನುಭೋಗಿಸುವ ಹಕ್ಕನ್ನು ಹೊಂದಿದ್ದೇವೆಯೇ ಹೊರತು ವಿನಾಶಕರ ಹಕ್ಕನ್ನು ಪಡೆದಿರುವುದಿಲ್ಲ. ಅತ್ಯಮೂಲ್ಯವಾದ ಸಂಪತ್ತನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ಯಾವ ರೂಪದಲ್ಲಿ ಮತ್ತು ಸಂದರ್ಭದಲ್ಲಿ ನಾವು ಅದನ್ನು ಹೇಗೆ ಸ್ವೀಕರಿಸಿದೆವೋ ಹಾಗೆಯೇ ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ಬಿಟ್ಟು ಕೊಡುವುದು.

 

ನಾಗರೀಕರ ಪಾತ್ರ:

 

  • ಭಾರತ ಸಂವಿಧಾನದ ಅನುಚ್ಛೇದ 51ಎ (ಎಫ್) ನಮ್ಮ ಮಿಶ್ರ ಸಂಸ್ಕೃತಿಯ ಪರಂಪರೆ ಸಂಪತ್ತನ್ನು ಗೌರವಿಸಿ ಉಳಿಸುವ ಮೂಲಭೂತ ಕರ್ತವ್ಯಗಳು ಪ್ರತಿಯೊಬ್ಬ ನಾಗರೀಕನಿಗೆ ಸೇರಿವೆ ಎಂದು ವಿವರಿಸಿದೆ ಮತ್ತು ಈ ಕರ್ತವ್ಯವನ್ನು ನೆರವೇರಿಸಲು ಮತ್ತು ಜವಾಬ್ದಾರಿಯುತವಾಗಿರಲು ಈ ಕೆಳಕಂಡ ಮಾರ್ಗಗಳಲ್ಲಿ ನೆರವಾಗಲಿದೆ.

  • ಹಾದಿಯಲ್ಲಿ ಸೇರಲು ಅರ್ಹವಾಗಿರುವ ಕಟ್ಟಡಗಳು ಮತ್ತು ಸನಿಹದ ಪ್ರದೇಶಗಳನ್ನು ಗುರುತಿಸುವ ಹಾದಿಯಲ್ಲಿ ಸೇರಿಸುವ ಮತ್ತು ದಾಖಲೀಕರಣ ಮಾಡಲು ನೆರವಾಗುವ ಮೇಧಾವಿ ಮತ್ತು ಕರ್ತವ್ಯ ಬದ್ಧ ವ್ಯಕ್ತಿಗಳನ್ನು ಗುರುತಿಸುವಿಕೆ.

  • ಅಂತಹ ವ್ಯಕ್ತಿಗಳನ್ನು ಸಮರ್ಥ ಯೋಜನೆ ತಯಾರಿಸಿ ಯಾದಿಯಲ್ಲಿನ ಕಟ್ಟಡ ಪರಂಪರೆಯನ್ನು ಉಳಿಸಿ ಮತ್ತು ಸಂರಕ್ಷಿಸುವ ಕಡೆಗೆ ಅರಿವು ಮೂಡಿಸುವ ಕ್ರಿಯೆಯ ಕಡೆಗೆ ತೊಡಗಿಸಿಕೊಳ್ಳಬಹುದಾಗಿದೆ.

  • ಅಂತಹ ವ್ಯಕ್ತಿಗಳ ಜ್ಞಾನವನ್ನು ಬಳಸಿ ಕೆಲವು ಪ್ರಮುಖ ಪಾರಂಪರಿಕ ತಾಣಗಳಲ್ಲಿ ಪಾರಂಪರಿಕ ತುಣುಕು ಪ್ರಯೋಗಗಳು ಮತ್ತು ನಡಿಗೆಗಳನ್ನು ಯೋಜಿಸಬಹುದಾಗಿದೆ. ಇದರಿಂದ ಇಂತಹ ಚಟುವಟಿಕೆಗಳಿಗೆ ಅವರ ಸೇವೆಯನ್ನು ಮುಡಿಪಾಗಿಡಬೇಕೆಂಬ ಮನೋಭಾವವನ್ನು ಅದರಲ್ಲಿ ಉಂಡುಮಾಡುವುದು. ಶಾಲಾ ಉಪಾಧ್ಯಾಯರು ಅವರ ವಿದ್ಯಾರ್ಥಿಗಳನ್ನು ಇಂತಹ ಕ್ರಿಯಾ ಚಟುವಟಿಕೆಗಳಿಗಾಗಿ ಹೊರಗೆ ಕರೆದೊಯ್ಯುವ ಮುಖೇನ ತರಗತಿಯೊಳಗೆ ಅವರ ಬೋದನೆಯಲ್ಲಿ ಹೆಚ್ಚು ಸತ್ಯಯುತಗೊಳಿಸಲು ಅವರಿಗೆ ತರಬೇತಿ ನೀಡುವುದು.

 

ಪರಂಪರೆಯನ್ನು ಮೂರು ವಿಧಗಳಾಗಿ  ವರ್ಗೀಕರಣ ಮಾಡಲಾಗಿದೆ :

 

  1. ಮೂರ್ತ ಪರಂಪರೆ

  2. ಅಮೂರ್ತ ಪರಂಪರೆ

  3. ನೈಸರ್ಗಿಕ ಪರಂಪರೆ

  • ಮೂರ್ತ ಪರಂಪರೆ: ಪ್ರಾಚೀನ ಸ್ಮಾರಕಗಳ ಸ್ವರೂಪಗಳಾದ ದೇವಾಲಯಗಳು, ಮಸೀದಿಗಳು, ಇಗರ್ಜಿಗಳು, ಕೋಟೆ ಕೊತ್ತಲಗಳು, ಕಟ್ಟಡಗಳು, ವಾಸ್ತುಶಿಲ್ಪ ಮತ್ತಿತರ ಸಂಪತ್ತುಗಳು ಮೂರ್ತ ಪರಂಪರೆಯ ಅವಿಭಾಜ್ಯ ಅಂಗಗಳಾಗಿವೆ.

  • ಅಮೂರ್ತ ಪರಂಪರೆ: ಹಬ್ಬಗಳು, ಉತ್ಸವಗಳು, ಆಚರಣೆಗಳು, ಜಾನಪದ ಹಾಡುಗಳು, ಬುಡಕಟ್ಟು ಸಂಸ್ಕೃತಿ ಸಾಂಪ್ರದಾಯಿಕ ಆಟಗಳು, ನೃತ್ಯವೈವಿದ್ಯಗಳು, ಕುಣಿತ ಇವುಗಳೆಲ್ಲವು ಅಮೂರ್ತ ಪರಂಪರೆಯ ದ್ಯೋತಕ ಅಂಗಗಳಾಗಿವೆ.

  • ನೈಸರ್ಗಿಕ ಪರಂಪರೆ: ಕಾಡು-ಮೇಡುಗಳು, ಘಟ್ಟಗಳು, ಕೆರೆಕುಂಟೆಗಳು, ನದಿ ಪ್ರದೇಶ, ಸಾಗರ ತೀರ, ಬೆಟ್ಟಗುಡ್ಡಗಳು, ಗಿರಿ ಕಾನನಗಳು ಇವುಗಳೆಲ್ಲವು ನೈಸರ್ಗಿಕ ಪರಂಪರೆಗಳಾಗಿವೆ.

 

ವಿಚಾರ ಸಂಕಿರಣ

 

  • ಪುರಾತತ್ವ ಮತ್ತು ಇತಿಹಾಸ ವಿಷಯಗಳ ಅರಿವು ನಿಂತ ನೀರಲ್ಲ. ಅನೇಕ ನೂತನ ಸಂಶೋಧನೆಗಳು, ಹಳೆಯ ಸಿದ್ದಾಂತಗಳ ನಿರ್ಧಾರಗಳನ್ನು ನಿರಂತರವಾಗಿ ಪುನರ್‌ ವಿರ್ಮಶೆಗೆ ಒಳಪಡಿಸುತ್ತಿವೆ. ಹಾಗಾಗಿ ಕರ್ನಾಟಕವು ಅಗಾಧವಾದ ಐತಿಹಾಸಿಕ ಸಂಶೋಧನೆಗೆ ಒಳಪಡುತ್ತಿದೆ. ಅನೇಕ ಪ್ರಾಚೀನ ಸಂದಿಗ್ಧಗಳನ್ನು ರಾಜವಂಶಗಳ ಬಗ್ಗೆ ಅದರ ಮೂಲದ ಬಗ್ಗೆ ಇದ್ದ ಸಂದಿಗ್ಧಗಳನ್ನು ರಾಜರ ಅಧಿಕಾರವಧಿಗೆ ಬಂದ ವಿಷಯಗಳನ್ನು, ಅವರು ನಿರ್ವಹಿಸಿದಂತಹ ಕರ್ತವ್ಯಗಳನ್ನು, ನೀಡಿದ ಕೊಡುಗೆಗಳನ್ನು ಗೊಂದಲಮಯವಾಗಿ ಚರ್ಚಿಸುವ ಪದ್ಧತಿಯನ್ನು ತೊಡೆದ ಆ ಚರ್ಚೆಯ ಮುಖಾಂತರ ನೈಜವಾದ, ಸತ್ಯಕ್ಕೆ ಹತ್ತಿರವಾದ ಮತ್ತು ಐತಿಹಾಸಿಕ ದಾಖಲೆಗಳನ್ನು ಸಮಷ್ಠಿಯಾಗಿ ಸಂಗ್ರಹಿಸಿ ನೂತನ ಬೆಳವಣಿಗೆಗಳನ್ನು ಮತ್ತು ಈ ಸಂದಿಗ್ಧ ಗೊಂದಲಗಳನ್ನು ನಿವಾರಿಸಿ, ಚಿಂತನ-ಮಂಥನಗಳನ್ನು ನಡೆಸುವುದು ಅನಿವಾರ್ಯವಾಗಿದೆ. ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆಯಲ್ಲಿ ಅಲ್ಲಲ್ಲಿ ಕಂಡುಬರುವ ಸಂದಿಗ್ಧ, ಗೊಂದಲ, ನೂತನ ಸಂಶೋಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅವುಗಳನ್ನು ಪ್ರಚಾರಕ್ಕೆ ತರಲು ಸ್ಥಾನೀಯ ಇತಿಹಾಸವನ್ನು ಪುನರ್‌ ನಿರ್ಮಿಸಲು ಬೃಹತ್‌ ರಾಜ್ಯಗಳ ನೆರಳಿನಲ್ಲಿ ಮುನ್ನೆಲೆಗೆ ಬಾರದವರ ಇತಿಹಾಸವನ್ನು ರಚಿಸಲು ಇಲಾಖೆಯು ವಿಚಾರ ಮಂಥನಕ್ಕಾಗಿ ಮತ್ತು ಅದರಲ್ಲಿ ಹೊರಹೊಮ್ಮಿದ ನೂತನ ಅಂಶಗಳನ್ನು ಪ್ರಚಾರ ಪಡಿಸಲು ಹಾಗೂ ದಾಖಲಿಸಲು ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದೆ.

 

ವಸ್ತು ಪ್ರದರ್ಶನ

 

  • ಸಾಮಾನ್ಯ ಅರ್ಥದಲ್ಲಿ ವಸ್ತು ಪ್ರದರ್ಶನವೆಂದರೆ ವಿಷಯಾಧಾರಿತವಾಗಿ ವಿಷಯ ಪ್ರಸ್ತುತಿಗೆ ರೂಪಿಸಿದ ಅನುಕ್ರಮಣಿಕೆಯ ಅಧ್ಯಯನ ವಿಷಯದ ಮುಖ್ಯಾಂಶಗಳ ಅಥವಾ ವಸ್ತುಗಳ ಆಯೋಜಿತ ಪ್ರದರ್ಶನ. ಕರ್ನಾಟಕದ ಉದ್ದಗಲಕ್ಕು ಪುರಾತತ್ವ, ಐತಿಹಾಸಿಕ, ಸಾಂಸ್ಕೃತಿಕ ಮಹತ್ವವುಳ್ಳ ಸಹಸ್ರಾರು ಸ್ಮಾರಕಗಳಿರುವಂತೆ ಅನೇಕ ಸಾಂಸ್ಕೃತಿಕ ಕುರುಹುಗಳು ನಗರೀಕರಣಿದ ಪ್ರಕ್ರಿಯೆಯಿಂದ ಸ್ಥಾನ ಪಲ್ಲಟವಾಗುತ್ತಿರುವ ಅಥವಾ ನಾಶವಾಗುತ್ತಿರುವ ಹಂತದಲ್ಲಿದೆ. ಅವುಗಳನ್ನು ಉಳಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಅವಶ್ಯಕತೆ ಇಂದಿನ ಅನಿರ್ವಾಯ. ನಮ್ಮ ನೆಲದ ಭಾಷೆ, ಸಂಸ್ಕೃತಿ, ಇತಿಹಾಸ, ಮಾನವನ ಬೆಳವಣಿಗೆ, ರಾಜ ವಂಶಗಳು, ಅವುಗಳ ಕೊಡುಗೆಗಳು, ಶಾಸನಗಳು, ನಾಣ್ಯಗಳು, ನಾಶವಾದ ಸ್ಮಾರಕಗಳ ಅವಶೇಷಗಳು ಸಂಗ್ರಹಾಲಯಗಳಲ್ಲಿ ಸಂಗ್ರಹಿಸಿ, ಅವುಗಳಲ್ಲಿ ಅತೀ ಮುಖ್ಯವಾದವುಗಳನ್ನು ಪ್ರದರ್ಶಿಸಲಾಗುತ್ತದೆ. ಕೆಲವೊಮ್ಮೆ ಅಂತಹ ಸಂಗ್ರಹಗಳನ್ನು ವಿಷಯಾಧಾರಿತವಾಗಿ ವರ್ಗಿಕರಿಸಿ, ಅವುಗಳಲ್ಲಿನ ಶ್ರೇಷ್ಠತೆಯನ್ನು ಜನರಿಗೆ ಪರಿಚಯಿಸುವ ಸಲುವಾಗಿ ವಿಶೇಷ ಸಂದರ್ಭಗಳಲ್ಲಿ ಅವುಗಳ ಪ್ರತಿಕೃತಿಯನ್ನಾಗಲಿ, ಛಾಯಾಚಿತ್ರಗಳನ್ನಾಗಲಿ ಅಥವಾ ಸಾಧ್ಯವಿದ್ದಲ್ಲಿ ಮೂಲ ವಸ್ತುಗಳನ್ನು ಯೋಚಿತ ಸ್ಥಳದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದನ್ನು ವಸ್ತುಪ್ರದರ್ಶನವೆನ್ನುತ್ತಾರೆ.

     

ಕಾರ್ಯಗಾರ

 

  • ಪುರಾತತ್ವ ಮತ್ತು ಇತಿಹಾಸ ಸಂಶೋಧನೆ ಹಾಗೂ ಅಧ್ಯಯನ ಹಲವಾರು ವಿಷಯಗಳ ಅನ್ವಯಿಕ ಶಾಸ್ತ್ರವಾಗಿ ಬೆಳೆದು ಬಂದಿದೆ. ಹಾಗಾಗಿ ದಿನೆ-ದಿನೆ ಸಂಶೋಧನೆಯಲ್ಲಿ ಕೌಶಲಗಳ ವೃದ್ಧಿ, ಪ್ರೌಢಿಮೆ ಮತ್ತು ಮರು ಓದಿನ ಅವಶ್ಯಕತೆಯನ್ನು ಎದುರು ನೋಡುತ್ತಿರುವ ಶಾಸ್ತ್ರವಾಗಿ ಪುರಾತತ್ವ ಬೆಳವಣಿಗೆ ಹೊಂದಿದೆ. ಇದನ್ನೆ ಅರ್ಥೈಸಿ ಅವನ್ನು ಇಲಾಖೆಯ ಅಧಿಕಾರಿಗಳಿಗೆ ಅಂದರೆ ಪುರಾತತ್ವದ ಹಲವಾರು ಮಜಲುಗಳನ್ನು ಅವುಗಳಲ್ಲಿ ಅವಶ್ಯಕವಿರುವ ಕೌಶಲಗಳನ್ನು, ಪ್ರೌಢಿಮೆಗಳನ್ನು ಮತ್ತು ಶಾಸ್ತ್ರೀಯ ‍ಅಧ್ಯಯನಗಳನ್ನು ಸಂಶೋಧಕರಿಗೆ, ಜನಸಾಮಾನ್ಯರಿಗೆ ಆಸಕ್ತರಿಗೆ ಹಂಚುವ ಸಲುವಾಗಿ ಕಾರ್ಯಾಗಾರಗಳನ್ನು ನೆರವೇರಿಸಲಾಗುತ್ತದೆ.


                                                    

ಇತ್ತೀಚಿನ ನವೀಕರಣ​ : 08-03-2021 03:27 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080