ಅಭಿಪ್ರಾಯ / ಸಲಹೆಗಳು

ಇತ್ತೀಚಿನ ಕಾರ್ಯಕ್ರಮಗಳು

 

ಪಾರಂಪರಿಕ ನಡಿಗೆ

 

ದಿನಾಂಕ:16.08.2023 ರಂದು ಪೋಸ್ಟಲ್ ಟ್ರೈನಿಂಗ್ ಸೆಂಟರ್, ಮೈಸೂರು ಇಲ್ಲಿನ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳಿಗೆ ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿತ್ತು.

 

 

HW HW HW
HW HW HW

 

 

ಆಗಸ್ಟ್‌ 15, 2023 ರಂದು 77ನೇ ಸ್ವಾತಂತ್ರ್ಯ ದಿನಾಚರಣೆ

 

 

 77ನೇ ಸ್ವಾತಂತ್ರ್ಯ ಮಹೋತ್ಸವ ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಇಲಾಖೆಯ ಆವರಣದಲ್ಲಿ ಧ್ವಜಾರೋಹಣ ಮಾಡಿ, ಮಹಾತ್ಮರಿಗೆ ಗೌರವ ಸಲ್ಲಿಸಲಾಯಿತು.

 

  

 HW  In
 ID  ID
ID

 

 

 

 

ಪಾರಂಪರಿಕನಡಿಗೆ

 

ಅರಮನೆಗಳ ನಗರಿ ಎಂದೇ ಪ್ರಸಿದ್ದವಾಗಿರುವ ಮೈಸೂರು ನಗರವು ಸಾಂಸ್ಕೃತಿಕ ರಾಜಧಾನಿಯಾಗಿದೆ .ಮೈಸೂರಿನ ಅರಸರು ವಿದ್ಯಾಭ್ಯಾಸಕ್ಕಾಗಿ ಶಾಲಾ-ಕಾಲೇಜುಗಳು ಹಾಗೂ ಆಡಳಿತ ವ್ಯವಹಾರಕ್ಕಾಗಿ ಅನೇಕ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಕಟ್ಟಡಗಳು ಈಗ ಪಾರಂಪರಿಕ ಕಟ್ಟಡಗಳಾಗಿ ಗುರುತಿಸಿಕೊಂಡಿವೆ. ಇಂತಹ ಪಾರಂಪರಿಕ ಕಟ್ಟಡಗಳ ಮಹತ್ವ, ಐತಿಹಾಸಿಕ ಹಿನ್ನೆಲೆ, ವಾಸ್ತುಶಿಲ್ಪಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಜನಸಾಮಾನ್ಯರು ಹಾಗೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ವರ್ಷವಿಡೀ ಪ್ರತೀತಿಂಗಳ ಮೊದಲನೇ ಶನಿವಾರದಂದು ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗುತ್ತಿದೆ. ದಿನಾಂಕ:05.08.2023 ರಂದು ಆಯೋಜಿಸಿದ್ದ ಪಾರಂಪರಿಕ ನಡಿಗೆಯಲ್ಲಿ ಆರು ಜನ ಆಸಕ್ತರು ಭಾಗವಹಿಸಿದರು. ನಡಿಗೆಯು ಬೆಳಗ್ಗೆ 6.45 ಗಂಟೆಗೆ ಪುರಭವನದಿಂದ ಪ್ರಾರಂಭವಾಗಿ, ಸಿಲ್ವರ್ಜೂಬಿಲಿ ಕ್ಲಾಕ್ಟವರ್ (ದೊಡ್ಡಗಡಿಯಾರ), ಫ್ರಿಮೇಸನ್ಸ್‌ ಕ್ಲಬ್, ಹತ್ತನೆ ಚಾಮರಾಜ ಒಡೆಯ ರ್ವೃತ್ತ, ಅರಮನೆ, ನಾಲ್ಕನೇಕೃಷ್ಣರಾಜಒಡೆಯರ್ವೃತ್ತ, ಚಿಕ್ಕಗಡಿಯಾರಹಾಗೂ ದೇವರಾಜ ಮಾರುಕಟ್ಟೆ ಹತ್ತಿರ ಮುಕ್ತಾಯಗೊಳಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ರಂಗರಾಜುಎನ್‌.ಎಸ್‌ ರವರು ಪಾರಂಪರಿಕ ಕಟ್ಟಡಗಳ ಮಹತ್ವದ ಕುರಿತು ವಿವರಣೆ ನೀಡಿದರು.

 

 

 

 

HWS HWS1 HWS3

 

 

9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 

 

9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತವಾಗಿ ದಿನಾಂಕ: 19.06.2023 ರಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿ.ಐ.ಎಸ್.ಎಫ್) ಘಟಕ, ಆರ್.ಟಿ.ಪಿ.ಎಸ್., ರಾಯಚೂರು ವತಿಯಿಂದ ಇಲಾಖೆಯ ರಾಯಚೂರು ವಸ್ತು ಸಂಗ್ರಹಾಲಯದ ಆವರಣದಲ್ಲಿ ಯೋಗಾಸನ ನಡೆಸಲಾಯಿತು.

 

 

 

YD3 YD1 YD

 

 

 

 

ದಿನಾಂಕ:30.11.2022 ರಂದು ಪೋಸ್ಟಲ್ ಟ್ರೈನಿಂಗ್ ಸೆಂಟರ್, ಮೈಸೂರು ಇಲ್ಲಿನ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಪ್ರಶಿಕ್ಷಣಾರ್ಥಿಗಳಿಗೆ ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿತ್ತು.

 

HW HW
HW HW

 

 

ದಿನಾಂಕ:26.11.2022 ರಂದು ಬೆಳಗ್ಗೆ 7.00ಗಂಟೆಗೆ ಇಲಾಖಾವತಿಯಿಂದ ನ್ಯಾಷನಲ್ ಕೆಡೆಟ್ ಕಾರ್ಪ್ಸ್, ಮೈಸೂರು ರವರುಗಳಿಗೆ ಪಾರಂಪರಿಕ ಸೈಕಲ್‌ ಜಾಥಾ ಸವಾರಿಯನ್ನು ಆಯೋಜಿಸಲಾಗಿತ್ತು.

 

 

HC HC HC

 

 

"ವಿಶ್ವ ಪರಂಪರೆ ಸಪ್ತಾಹ" 2022 ರ ಕಾರ್ಯಕ್ರಮಗಳು

ಮೈಸೂರು

 

“ವಿಶ್ವ ಪರಂಪರೆ ಸಪ್ತಾಹ”2022ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ವತಿಯಿಂದ ದಿನಾಂಕ:24.11.2022 ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇಲಾಖೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಡಾ.ಸಿ.ಎನ್‌.ಮಂಜುಳ, ಉಪ ನಿರ್ದೇಶಕರು(ಪರಂಪರೆ)(ಪ್ರ), ಡಾ.ಹೆಚ್.ಎಮ್ ಸಿದ್ದನಗೌಡರ್‌, ನಿರ್ದೇಶಕರು(ನಿವೃತ್ತ), ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಹಾಗೂ ಶ್ರೀಯುತ ಸಿ.ಟಿ.ಮಹೇಶ, ಪುರಾತತ್ವ ಸಂರಕ್ಷಣಾ ಇಂಜಿನಿಯರ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ರವರುಗಳು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

ಕಾರ್ಯಕ್ರಮದಲ್ಲಿ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್, ಮುಖ್ಯಸ್ಥರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು ಹಾಗೂ ಡಾ.ವಿ.ಶೋಭಾ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ಮಾನಸಗಂಗೋತ್ರಿ, ಮೈಸೂರು ಮತ್ತು ಮೈಸೂರು ನಗರದ ಮಹಾರಾಣಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಮಹಾರಾಜ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಟೆರೆಷೀಯನ್‌ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ ವಿದ್ಯಾರ್ಥಿಗಳು, ಮೈಸೂರು ಸ್ಕೂಲ್‌ ಆಫ್‌ ಆರ್ಟ್‌ ಅಂಡ್ ಆರ್ಕಿಟೆಕ್ಚರ್‌ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಇಲಾಖೆ ಅಧಿಕಾರಿ/ ಸಿಬ್ಬಂದಿ ವರ್ಗದವರು ಹಾಜರಿದ್ದರು.

 

 

HS HS HS
 HS HS  HS

 

 

 

ಯಳಂದೂರು

 

 

HSY HSY HSY
HSY HSY HSY

 

ಕರ್ನಾಟಕ ರಾಜ್ಯೋತ್ಸವ - 2022

 

 

ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನದನ್ವಯ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ಕೋಟಿಕಂಠ ಗಾಯನʼ ಕಾರ್ಯಕ್ರಮವನ್ನು ಇಲಾಖಾವತಿಯಿಂದ ದಿನಾಂಕ:28.10.2022 ರಂದು ಬೆಳಗ್ಗೆ 11.00 ಗಂಟೆಗೆ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿರುವ ಶ್ರೀ ಭುವನೇಶ್ವರಿ ಅಮ್ಮನವರ ದೇವಸ್ಥಾನದ ಆವರಣದಲ್ಲಿ ಮಾನ್ಯ ಆಯುಕ್ತರಾದ ದೇವರಾಜು ಎ ಕ.ಆ.ಸೇ ಇವರ ನೇತೃತ್ವದಲ್ಲಿ “ನನ್ನ ನಾಡು – ನನ್ನ ಹಾಡು” ಸಮೂಹ ಗೀತಗಾಯನವನ್ನು ಇಲಾಖೆಯ ಅಧಿಕಾರಿ/ಸಿಬ್ಬಂದಿಯವರು ಹಾಡುವುದರ ಮೂಲಕ ಕನ್ನಡ ನಾಡು-ನುಡಿಯ ಹಿರಿಮೆಯನ್ನು ಸಾರಲಾಯಿತು.

 

 

KR KR

 

 

ದಿನಾಂಕ:09.10.2022 ರಂದು 'ಸೈಕಲ್‌ ಜಾಥಾ' 

 

ದಿನಾಂಕ:09.10.2022 ರಂದು ರೋಟರಿ ಮೈಸೂರು ಉತ್ತರ ಇವರ ಸಹಯೋಗದೊಂದಿಗೆ ಇಲಾಖಾವತಿಯಿಂದ ಹಮ್ಮಿಕೊಂಡಿದ್ದ ಸೈಕಲ್‌ ಜಾಥಾ ಕಾರ್ಯಕ್ರಮವನ್ನು ಶ್ರೀಯುತ ದೇವರಾಜು ಎ, ಆಯುಕ್ತರು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ರೊ.ಜಗದೀಶ್‌ ಎಸ್‌.ಎಸ್‌ ಹಾಗೂ ರೊ.ಪಿಡಿಜಿ ಲಕ್ಷ್ಮಿನಾರಾಯಣ್‌, ಮಾಜಿ ಜಿಲ್ಲಾ ಗವರ್ನರ್‌, ರೊ.ಶ್ರೀಧರ್‌, ಎಫ್‌ಸಿಎಸ್‌ ಪ್ರತಿನಿಧಿ, ರೊ.ಎಂ.ಎಸ್‌.ಪ್ರದೀಪ್‌ರಾವ್‌ ಮತ್ತು ಡಾ||ಸಿ.ಎನ್.ಮಂಜುಳ, ಉಪ ನಿರ್ದೇಶಕರು(ಪರಂಪರೆ) ರವರು ಉಪಸ್ಥಿತರಿದ್ದರು.

 

ಸೈಕಲ್‌ ಜಾಥಾ ಸೈಕಲ್‌ ಜಾಥಾ

 

 

ದಿನಾಂಕ:02.10.2022 ರಂದು ಮೋಹನದಾಸ್ ಕರಮ‍ಚಂದ್ ಗಾಂಧಿಜೀ ಅವರ ಜನ್ಮ ದಿನಾಚರಣೆಯನ್ನು, ಮಹಾತ್ಮರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.

 

 ಗಾಂಧಿ ಜಯಂತಿ ಗಾಂಧಿ ಜಯಂತಿ

 

 ಮೈಸೂರು ದಸರಾ ಮಹೋತ್ಸವ 2022ರ ಕಾರ್ಯಕ್ರಮಗಳು

 

ದಿನಾಂಕ:01.10.2022 ರಂದು “ಪಾರಂಪರಿಕ ನಡಿಗೆ”

 

 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖಾವತಿಯಿಂದ ದಿನಾಂಕ:01.10.2022 ರಂದು ಹಮ್ಮಿಕೊಂಡಿದ್ದ “ಪಾರಂಪರಿಕ ನಡಿಗೆ” ಕಾರ್ಯಕ್ರಮವನ್ನು ಶ್ರೀ ಎಲ್‌.ನಾಗೇಂದ್ರ, ಮಾನ್ಯ ವಿಧಾನಸಭಾ ಸದಸ್ಯರು, ಚಾಮರಾಜ ಕ್ಷೇತ್ರ, ಮೈಸೂರು ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭರತನಾಟ್ಯದಲ್ಲಿ ಅಂತರಾಷ್ಟ್ರೀಯ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿರುವ ಡಾ.ವಸುಂದರ ದೊರೆಸ್ವಾಮಿ, Vasundhara Performing Arts Centre, Mysuru ನ ಸಂಸ್ಥಾಪಕರು ಹಾಗೂ ನಿರ್ದೇಶಕರು, ಮೈಸೂರು ರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ದೇವರಾಜು ಎ, ಆಯುಕ್ತರು- ಪುರಾತತ್ವ ಇಲಾಖೆ, ಡಾ.ಸಿ.ಎನ್‌.ಮಂಜುಳ, ಉಪ ನಿರ್ದೇಶಕರು(ಪರಂಪರೆ), ಶ್ರೀ ಮಿರ್ಲೆ ಶ್ರೀನಿವಾಸ ಗೌಡ, ಅಧ್ಯಕ್ಷರು, ಕರ್ನಾಟಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು, ಪಾರಂಪರಿಕ ದಸರಾ ಉಪ ಸಮಿತಿಯ ಅಧ್ಯಕ್ಷರಾದ ಶ್ರೀ ಗೋಪಾಲ್‌ ರಾವ್‌, ಉಪಾ‍ಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

 

     
Heritage Walk    

 

 

ದಿನಾಂಕ:30.09.2022 ರಂದು “ಪಾರಂಪರಿಕ ಉಡುಗೆಯಲ್ಲಿ, ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿ” 

 

 

ಮೈಸೂರು ದಸರಾ ಮಹೋತ್ಸವ-2022ರ ಅಂಗವಾಗಿ ದಿನಾಂಕ:30.09.2022 ರಂದು ಆಯೋಜಿಸಿದ್ದ “ಪಾರಂಪರಿಕ ಉಡುಗೆಯಲ್ಲಿ, ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿ” ಕಾರ್ಯಕ್ರಮವನ್ನು ಡಾ.ಮಂಜುಳಾ.ಸಿ.ಎನ್- ಉಪ ನಿರ್ದೇಶಕರು(ಪರಂಪರೆ)(ಪ್ರ) ಪುರಾತತ್ವ ಇಲಾಖೆ, ಮೈಸೂರು ರವರು ದಂಪತಿಗಳಿಗೆ ಬಾಗಿನ ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪ ಸಮಿತಿ ಅಧ್ಯಕ್ಷರು- ಗೋಪಾಲ್‌ ರಾವ್ ಹಾಗೂ ಸದಸ್ಯರುಗಳು ಹಾಗೂ ಇತರರು ಉಪಸ್ಥಿತರಿದ್ದರು.

 

 

 

Tonga Savari Tonga Savari  
Tonga Savari  Tonga Savari  Tonga Savari

 

 

 

 

ದಿನಾಂಕ:29.09.2022 ‘ಪಾರಂಪರಿಕ ಸೈಕಲ್ ಸವಾರಿ(ಟ್ರಿನ್-ಟ್ರಿನ್)’

 

ಮೈಸೂರು ದಸರಾ ಮಹೋತ್ಸವ 2022ರ ಅಂಗವಾಗಿ ದಿನಾಂಕ:29.09.2022 ರಂದು ಆಯೋಜಿಸಲಾದ ‘ಪಾರಂಪರಿಕ ಸೈಕಲ್ ಸವಾರಿ(ಟ್ರಿನ್-ಟ್ರಿನ್)’ ಕಾರ್ಯಕ್ರಮವನ್ನು ಶ್ರೀ ಎಸ್.ಟಿ.ಸೋಮಶೇಖರ್, ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಎಲ್‌.ನಾಗೇಂದ್ರ, ಮಾನ್ಯ ವಿಧಾನಸಭಾ ಸದಸ್ಯರು, ಚಾಮರಾಜ ಕ್ಷೇತ್ರ, ಡಾ.ಸಿ.ಎನ್.ಮಂಜುಳ- ಉಪ ನಿರ್ದೇಶಕರು(ಪರಂಪರೆ) ಹಾಗೂ ಉಪ ಸಮಿತಿ ಅಧ್ಯಕ್ಷರು- ಗೋಪಾಲ್‌ ರಾವ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

 

     
Cycle Savari Cycle Savari Cycle Savari

 

ಛಾಯಾಚಿತ್ರ ಪ್ರದರ್ಶನ

 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ರ ಅಂಗವಾಗಿ ಇಲಾಖಾವತಿಯಿಂದ ಸಂರಕ್ಷಣೆಗೊಂಡಿರುವ ದೇವಾಲಯಗಳು/ ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನವನ್ನು ದಿನಾಂಕ:26.09.2022 ರಂದು ಶ್ರೀಯುತ ಎಸ್‌.ಟಿ.ಸೋಮಶೇಖರ್‌, ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ರವರು ಉದ್ಘಾಟನೆ ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

 

ಈ ಛಾಯಾಚಿತ್ರ ಪ್ರದರ್ಶನವು ದಿನಾಂಕ:26.09.2022 ರಿಂದ ದಸರಾ ವಸ್ತುಪ್ರದರ್ಶನ ಮುಗಿಯುವವರೆಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣ, ಇಂದಿರಾನಗರ, ಮೈಸೂರು ಇಲ್ಲಿ ಬೆಳಗ್ಗೆ 10 ರಿಂದ ರಾತ್ರಿ 8.00 ಗಂಟೆ ಯವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು/ ಸಾರ್ವಜನಿಕರು/ ಪ್ರವಾಸಿಗರು/ ಆಸಕ್ತರುಗಳು ಬಂದು ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.

 

 

Photo Exhibition    
Photo Exhibition  Photo Exhibition Photo Exhibition

 

 

ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಮೈಸೂರು ಇಲ್ಲಿಗೆ ತರಬೇತಿ ಪಡೆಯಲು ಬಂದಿದ್ದ, ನಗರ ಮತ್ತು ಗ್ರಾಮಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ಇಲ್ಲಿಗೆ ಹೊಸದಾಗಿ ನೇಮಕಗೊಂಡ 17 ಸಹಾಯಕ ನಿರ್ದೇಶಕರು, ರವರುಗಳು  ದಿನಾಂಕ:27.09.2022 ರಂದು ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಣೆ ಮಾಡಿದರು.

 

 

Visitors

 

 

“ಆಜ಼ಾದಿ ಕಾ ಅಮೃತ್ ಮಹೋತ್ಸವ್” ಅಂಗವಾಗಿ ಇಲಾಖೆಯ ಅಧೀನ ಕಛೇರಿಗಳಲ್ಲಿ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಛಾಯಾಚಿತ್ರಗಳು

 

 

ಸರ್ಕಾರಿ ವಸ್ತು ಸಂಗ್ರಹಾಲಯ, ವೆಲ್ಲಿಂಗ್ಟನ್ ಭವನ, ಮೈಸೂರು.

 

AAM Photo Mys AMM Photo Mys AAM

 

 

ದಿವಾನ್ ಪೂಣ್ಯಯ್ಯ ಸರ್ಕಾರಿವಸ್ತು ಸಂಗ್ರಹಾಲಯ, ಯಳಂದೂರು.

 

 

 

 

 

ಸರ್ಕಾರಿ ವಸ್ತುಸಂಗ್ರಹಾಲಯ, ಹಾಸನ.

 

 

 

 

 

ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ ಬಿಜೈ ಮಂಗಳೂರು.

 

 

 

 

 

 

ಉಪ ನಿರ್ದೇಶಕರ ಕಛೇರಿ ಕಮಲಾಪುರ-ಹಂಪಿ, ಹೊಸಪೇಟೆ ತಾಲ್ಲೂಕು, ವಿಜಯನಗರ

 

 

AAM Photo Hampi AAM Photo Hampi AAM Photo Hampi
AAM Photo Hampi AAM Photo Hampi  

ಇತ್ತೀಚಿನ ನವೀಕರಣ​ : 16-08-2023 11:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080