ಅಭಿಪ್ರಾಯ / ಸಲಹೆಗಳು

ಇಲಾಖಾ ಪರಿಚಯ

  • 1885ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯವನ್ನು 2004 ರಲ್ಲಿ ಅಸ್ತಿತ್ವಕ್ಕೆ ಬಂದ ಪರಂಪರೆ ಇಲಾಖೆಯನ್ನು 2012ರಲ್ಲಿ (ಸರ್ಕಾರಿ ಆದೇಶದ ಸಂಖ್ಯೆ: ಕಸಂವಾಪ್ರ 10 ಕೆಎಂಯು 2012 ದಿನಾಂಕ:23.02.2012) ವಿಲೀನಗೊಳಿಸಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯನ್ನು ಪುನರ್‌ ರಚಿಸಿ ಆಯುಕ್ತರನ್ನು ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

  • ಸರ್ಕಾರದ ಆದೇಶದ ಸಂಖ್ಯೆ: ಕಸಂವಾ 234 ಕೆಎಂಯು 2014 ದಿನಾಂಕ:13.03.2015 ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯನ್ನು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ (Archaeology, Museums and Heritage Department) ಎಂದು ಮರು ನಾಮಕರಣ ಮಾಡಿ ಆದೇಶಿಸಿದೆ.

  • ಪ್ರಸ್ತುತ ಇಲಾಖೆಯ ಕೇಂದ್ರ ಕಛೇರಿಯು ಮೈಸೂರಿನಲ್ಲಿದ್ದು, ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಯೋಜನೆ ಶೀರ್ಷಿಕೆ ಅಡಿಯಲ್ಲಿ ಇಲಾಖೆಯ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬರುತ್ತಿದೆ.

  • ಈ ಇಲಾಖೆಯ ಮೂಲಭೂತ ಕಾರ್ಯಚಟುವಟಿಕೆಗಳೆಂದರೆ ಅನ್ವೇಷಣೆ, ಉತ್ಖನನ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಶಾಸನಗಳ ಸರ್ವೇಕ್ಷಣೆ, ಪ್ರಾಚೀನ ನಾಣ್ಯಗಳ ಅಧ್ಯಯನ, ಸಂಶೋಧನಾ ಗ್ರಂಥಗಳ ಪ್ರಕಟಣೆ, ವಸ್ತುಸಂಗ್ರಹಾಲಯಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಮತ್ತು ಪರಂಪರೆ ಕಾರ್ಯಚಟುವಟಿಕೆಗಳು, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಹಾಗೂ ಅವಜ್ಞತೆಗೆ ತುತ್ತಾಗಿರುವ ಅಮೂಲ್ಯವಾದ ಪುರಾತನ ಶಿಲ್ಪಗಳು, ಪ್ರಾಚೀನ ಶಿಲಾಶಾಸನಗಳು, ನಾಣ್ಯಗಳು, ತಾಮ್ರ ಪಟಗಳು ಮುಂತಾದವುಗಳನ್ನು ಇಲಾಖೆಯ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಹಾಗೂ ಸಾರ್ವಜನಿಕ ವೀಕ್ಷಣೆಗೆ ತೆರೆದಿಡುವ ಜವಾಬ್ದಾರಿಯನ್ನು ಸಹ ಇಲಾಖೆಯ ನಿರ್ವಹಿಸುತ್ತಿದೆ.

  • ಐತಿಹಾಸಿಕ ಹಿನ್ನೆಲೆಯುಳ್ಳ ಮೈಸೂರು, ಶ್ರೀರಂಗಪಟ್ಟಣ, ಬೀದರ್‌, ಗುಲ್ಬರ್ಗಾ, ಬಿಜಾಪುರ ಹಾಗೂ ಕಿತ್ತೂರು ಸೇರಿದಂತೆ ಒಟ್ಟು ಆರು ಪ್ರದೇಶಗಳನ್ನು 2004ರಲ್ಲಿ ಮತ್ತು 2012-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಸನ್ನತಿ, ನಾಗಾವಿ, ಕಮ್ಮಟಗಿ, ಬಾದಾಮಿ, ಐಹೊಳೆ, ಬೆಂಗಳೂರು, ಲಕ್ಕುಂಡಿ, ಬನವಾಸಿ, ತಲಕಾಡು, ಬಳ್ಳಿಗಾವಿ, ಬೇಲೂರು, ಹಳೇಬೀಡು, ಮಳಖೇಡ, ಮೇಲುಕೋಟೆ ಸೇರಿದಂತೆ ಹದಿನಾಲ್ಕು ಪ್ರದೇಶಗಳನ್ನು ಪಾರಂಪರಿಕ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಪ್ರಸ್ತುತ 20 ಪಾರಂಪರಿಕ ಪ್ರದೇಶಗಳಿದ್ದು ಅವುಗಳಲ್ಲಿರುವ ಸ್ಮಾರಕಗಳ, ಕಟ್ಟಡಗಳ ಇನ್‌ವೆಂಟರಿ ತಯಾರಿಸಿ, ಸಮಗ್ರ ಅಭಿವೃದ್ಧಿ ಯೋಜನೆಯಂತೆ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತಿದೆ.

  • ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ 5 ಉಪನಿರ್ದೇಶಕರ ಕಛೇರಿಗಳಿದ್ದು ಇವುಗಳು ಮೈಸೂರು, (ಪರಂಪರೆ), ಗುಲ್ಬರ್ಗಾ, ಬೆಂಗಳೂರು, ಧಾರವಾಡ ಹಾಗೂ ಕಮಲಾಪುರ(ಹಂಪಿ)ಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಶ್ರೀರಂಗಪಟ್ಟಣ, ಯಳಂದೂರು, ಹಾಸನ, ಮಡಿಕೇರಿ, ಮಂಗಳೂರು, ಕಿತ್ತೂರು, ಗದಗ, ಗುಲ್ಬರ್ಗಾ ರಾಯಚೂರು, ಹೂವಿನಹಡಗಲಿ, ಬಸವಕಲ್ಯಾಣ ಮತ್ತು ಅಥಣಿ (ಶಿಲ್ಪಕಲಾ ಗ್ಯಾಲರಿ) ಸೇರಿದಂತೆ ಒಟ್ಟು ಹದಿನಾರು ಸರ್ಕಾರಿ ವಸ್ತುಸಂಗ್ರಹಾಲಯಗಳು ಮತ್ತು ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆ ಕಲಾ ಗ್ಯಾಲರಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇತ್ತೀಚಿನ ನವೀಕರಣ​ : 30-05-2022 05:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080