ಅಭಿಪ್ರಾಯ / ಸಲಹೆಗಳು

ನಿರ್ದೇಶಕರುಗಳ ಕಿರು ಪರಿಚಯ ಹಾಗೂ ಆಯುಕ್ತರ ಪಟ್ಟಿ

 

 
 

ಬಿ ಎಲ್ ರೈಸ್ (ಜನನ: ೧೮೩೬ ಜುಲೈ ೧೭- ಮರಣ: ೧೯೨೭ ಜುಲೈ ೧೦) ಮೂಲತಃ ವಿದೇಶೀಯರಾಗಿದ್ದರೂ ಕನ್ನಡ ಭಾಷೆ, ನಾಡಿನ ಬಗ್ಗೆ ಅಪಾರ ಪ್ರೇಮವನ್ನಿಟ್ಟುಕೊಂಡಿದ್ದ ವ್ಯಕ್ತಿ. ಕನ್ನಡ ಶಾಸನಗಳ ಬಗ್ಗೆ ಅವರು ಮಾಡಿದ ಅಗಾಧ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬಿ.ಎಲ್‌. ರೈಸ್‌ ಅವರದು. ಇವರು ನಮ್ಮ ನಾಡಿನ ಹಳೆಯ ಮೈಸೂರು ಪ್ರಾಂತ್ಯದ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು. ಶಾಸನಗಳ ಸಂಶೋಧನೆಯನ್ನು ಮೂಲಾಧಾರವಾಗಿಸಿಕೊಂಡು ಸಾಹಿತ್ಯ ಮತ್ತು ಇತಿಹಾಸಗಳಿಗೆ ನಿಖರರೂಪ ನೀಡಿದವರಲ್ಲಿ ಇವರು ಪ್ರಮುಖರು.

 

ಅಂದಿನ ಮಹಾರಾಜರ ಸಚಿವಾಲಯದಲ್ಲಿ ಕ್ರಿ.ಶ.೧೮೯೦ರಲ್ಲಿ ಪುರಾತತ್ವ ಅಧ್ಯಯನಕ್ಕೆಂದೇ ಹೊಸ ಇಲಾಖೆಯು ರೂಪುಗೊಂಡು ವಿಶೇಷ ಅನುದಾನ ಲಭ್ಯವಾಯಿತು. ರೈಸರನ್ನೇ ಈ ಇಲಾಖೆಯ ಮುಖ್ಯಸ್ಥರನ್ನಾಗಿಯೂ ನೇಮಿಸಲಾಯಿತು. ಮೊಟ್ಟಮೊದಲಿಗೆ ಅವರು ಕನ್ನಡ ನಾಡಿನಲ್ಲಿ ಅದುವರೆಗೆ ಆಗಿದ್ದ ಸಾಹಿತ್ಯ ಪ್ರಾಕಾರಗಳನ್ನು ಗುರುತಿಸಿ ತಾಳೆಯೋಲೆಯ ರೂಪದಲ್ಲಿದ್ದ ಅವುಗಳನ್ನು ಮುದ್ರಣ ಮಾಧ್ಯಮಕ್ಕೆ ಪರಿವರ್ತಿಸುವ ಕೆಲಸವನ್ನು ಹಮ್ಮಿಕೊಂಡರು. ಬಿಬ್ಲಿಯಾಥಿಕಾ ಕರ್ನಾಟಿಕಾ  ಎಂಬ ಯೋಜನೆಯಡಿಯಲ್ಲಿ  ಪಂಪ ಭಾರತ, ಪಂಪರಾಮಾಯಣ, ಕರ್ನಾಟಕ ಶಬ್ದಾನು ಶಾಸನ, ಕರ್ನಾಟಕ ಭಾಷಾ ಭೂಷಣಕವಿರಾಜ ಮಾರ್ಗಅಮರಕೋಶಕಾವ್ಯಾಲೋಕನ  ಮೊದಲಾದ ಕೃತಿಗಳು ಅಪೂರ್ವವಾದ ರೀತಿಯಲ್ಲಿ ಗ್ರಂಥ ಪೀಠಿಕೆ ಟಿಪ್ಪಣಿಗಳೊಂದಿಗೆ ಪ್ರಕಟವಾದವು. ಈ ಕೆಲಸದಲ್ಲಿ ಇವರಿಗೆ ನೆರವಾದ ಆರ್ .ನರಸಿಂಹಾಚಾರ್ಯರು ಇವರ ನಂತರವೂ ಅದನ್ನು ಅಚ್ಚುಕಟ್ಟಾಗಿ ಮುಂದುವರಿಸಿದರು.

 

ಆ ನಂತರ ರೈಸ್ ಅವರು ಎಪಿಗ್ರಾಫಿಯ ಕರ್ನಾಟಿಕ ಎಂಬ ಯೋಜನೆಯಡಿ ಶಾಸನಾಧ್ಯಯನ ಕಾರ್ಯವನ್ನು ಕೈಗೊಂಡು ಕ್ರಿ.ಶ.೧೯೧೬ರವರೆಗೆ ಸಂಗ್ರಹಿಸಿದ ೮೮೬೯ ಶಾಸನಗಳು ೧೨ ಸಂಪುಟಗಳಲ್ಲಿ ದಾಖಲೆಯಾಗಿವೆ.  ಕ್ರಿ.ಪೂ. ೨೫೦ರಷ್ಟು ಹಳೆಯದಾದ ಸಾಮ್ರಾಟ್ ಅಶೋಕನ ಶಾಸನವನ್ನು ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ ಅವರದ್ದು.  ಚಂದ್ರಗುಪ್ತ ಮೌರ್ಯನು ಶ್ರವಣಬೆಳಗೊಳಕ್ಕೆ ಬಂದಿದ್ದನ್ನು ಸಂಶೋಧಿಸಿದವರು ಇವರೇ. ಇವರು ಈಗಾಗಲೇ "ಮೈಸೂರು ಇನ್ಸ್ಕ್ರಿಪ್ಷನ್” ಎಂಬ ಶಾಸನ ಕುರಿತಾದ ಕೃತಿ ಪ್ರಕಟಿಸಿದ್ದರು.  ಮೈಸೂರು ಮತ್ತು ಕೊಡಗು ಪ್ರಾಂತ್ಯದ ಗೆಜೆಟಿಯರ್‌ಗಳನ್ನು ಮೂರು ಸಂಪುಟಗಳಲ್ಲಿ ೧೮೮೭ರಲ್ಲಿಯೇ ಸಿದ್ಧಪಡಿಸಿ ಪ್ರಕಟಿಸಿದ್ದರು.  

 

ಸರ್ಕಾರವು ಜನಗಣತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದ ಸಂದರ್ಭದಲ್ಲಿ ಅದನ್ನು ಸಿದ್ದಪಡಿಸುವ ಕಾರ್ಯವನ್ನು ಕೈಗೊಂಡು   ರೈಸ್‌ರು  ಪ್ರಥಮ ಜನಗಣತಿ ವರದಿಯನ್ನು ಸಿದ್ಧಪಡಿಸಿದರು. ನಂತರ ಇವರ ಸೇವೆಯನ್ನು ಗೆಜೆಟಿಯರ್‌ಗಳ ಪ್ರಕಟನೆಗೆ ಬಳಸಲಾಯಿತು.  ಇವರು ಸಿದ್ಧಪಡಿಸಿದ ಗೆಜೆಟಿಯರ್‌ಗಳು ಬರಿ ಅಂಕೆ ಸಂಖ್ಯೆಗಳ ದಾಖಲೆಗಳಾಗಿರದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನೂ ಒಳಗೊಂಡು ಓದುಗರ ಆಸಕ್ತಿ ಕೆರಳಿಸುವಂತಿವೆ.  ಆದ್ದರಿಂದ ಅವು ಇಂದಿಗೂ ಆಡಳಿತ ಸಂಶೋಧನೆಯ ಉತ್ತಮ ಮಾದರಿಗಳಾಗಿವೆ ಎನ್ನಬಹುದು.

 

೧೮೭೯ರಲ್ಲಿ ಮೈಸೂರು ಶಾಸನಗಳು ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯದ ಮೊದಲ ಪ್ರಕಟಣೆಯನ್ನು ಹೊರತರಲಾಯಿತು.  ಈ ಪ್ರಕಟಣೆಯು ಪ್ರದೇಶದ ಶಿಲಾಶಾಸನಗಳಿಗೆ ಸಂಬಂಧಿಸಿರುತ್ತದೆ.  ಶ್ರೀ ಬಿ.ಲೂಯಿಸ್ ರೈಸ್ ಮುಖ್ಯವಾಗಿ ಶಾಸನ ಶಾಸ್ತ್ರ ಅಧ್ಯಯನಗಳಿಗೆ ತಮ್ಮನ್ನು ತೊಡಗಿಸಿಕೊಂಡರು.  ಅವರು ಮೈಸೂರು ರಾಜ್ಯ ಮತ್ತು ಕೂರ್ಗ್ ಪ್ರಾಂತ್ಯದ ಎಂಟು ಜಿಲ್ಲೆಗಳಿಂದ ಸಂಗ್ರಹಿಸಿದ ೯೦೦೦ ಶಾಸನಗಳನ್ನು ಅಧ್ಯಯನ ಮಾಡಿ ಪ್ರಕಟಿಸಿದರು.  ಅವುಗಳನ್ನು ಎಪಿಗ್ರಾಫಿಯಾ ಕಾರ್ನಾಟಿಕಾ ಎಂಬ ಶೀರ್ಷಿಕೆಯಡಿಯಲ್ಲಿ ೧೨ ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.  

 

 

 

 

 

ಶ್ರೀ ಆರ್.ನರಸಿಂಹಾಚಾರ್ (೧೮೬೧ ಏಪ್ರಿಲ್  -  ೧೯೩೬ ಡಿಸೆಂಬರ್ ೬)ರವರು ಕನ್ನಡ ಸಾಹಿತ್ಯ ಲೋಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಅಪ್ರತಿಮ ಕೊಡುಗೆದಾರರೆನಿಸಿದ್ದಾರೆ. 

 

ಅವರ ಕಾರ್ಯ ವೈಖರಿಗೆ ಬಿ ಎಲ್. ರೈಸ್ ರವರೂ ಸಹ ಮಾರು ಹೋಗಿದ್ದರು,  ಹಾಗಾಗಿ ತಮ್ಮ ಉತ್ತರಾಧಿಕಾರಿಗೆ ಸೂಕ್ತ ತರಬೇತಿ ನೀಡಿದರು. ಏಳು ವರ್ಷಗಳಲ್ಲಿ ರೈಸ್ ನಿವೃತ್ತರಾದರು.  ಆ ಅವಧಿಯಲ್ಲಿ ರೈಸ್ ರವರ ಎಲ್ಲಾ ಪ್ರಾಚ್ಯವಸ್ತು ಸಂಗ್ರಹಣೆ ಮತ್ತು ಸಂಪಾದನೆಯಲ್ಲಿ ಇವರದು ಸಿಂಹಪಾಲು. ರೈಸ್ ಅವರ ನಿವೃತ್ತಿಯಾದ ನಂತರ ನಿರ್ದೇಶಕರ ಹುದ್ದೆಗೆ ಬೇರೊಬ್ಬರನ್ನು ಹುಡುಕುವ ಅಗತ್ಯವೇ ಇರಲಿಲ್ಲ ಅವರ ಉತ್ತರಾಧಿಕಾರಿಯಾದ ಆಚಾರ್ಯರೇ ಸೂಕ್ತ ವ್ಯಕ್ತಿಯಾಗಿದ್ದರು. ನರಸಿಂಹಾಚಾರ್ಯರನ್ನೇ ನಿರ್ದೇಶಕರಾಗಿ ನೇಮಕಾತಿ ಮಾಡಲಾಯಿತು. ಅವರು ನಿರ್ದೇಶಕರಾದ ಮೇಲೆ ಶಾಸನಗಳ ಸಂಶೋಧನೆ ಭರದಿಂದ ಸಾಗಿತು. ಹಳ್ಳಿಹಳ್ಳಿಗಳಿಗೆ ಸಂಚರಿಸಿ ಸರಿ ಸುಮಾರು ೪೦೦೦ ಶಾಸನಗಳ ಸಂಗ್ರಹಮಾಡಿದರು. ಹಿಂದೆ ಸಂಗ್ರಹಿಸಿದ್ದ ನೂರಾರು ಶಾಸನಗಳನ್ನು ಪರಿಷ್ಕರಿಸಿದರು. ಅವರು ಸಂಗ್ರಹಿಸಿದ ವಸ್ತುಗಳನ್ನು ಕುರಿತು ಸಿದ್ಧಪಡಿಸಿದ ವಾರ್ಷಿಕ ವರದಿಗಳು ಸಮಗ್ರವಾಗಿರುತ್ತಿದ್ದವು. ಹೊಸದಾಗಿ ಸಂಗ್ರಹಿಸಿದ ಶಾಸನಗಳನ್ನು ಎಪಿಗ್ರಾಫಿಯಾ ಕರ್ನಾಟಿಕದ ಪುರವಣಿಗಳಾಗಿ ಪ್ರಕಟಿಸಿಸಲು ಸಿದ್ಧ ಮಾಡಿದರು. ಎಪಿಗ್ರಾಫಿಯಾ ಕರ್ನಾಟಿಕ ಮತ್ತು ಎಂ.ಎ.ಆರ್ (Mysore Archaoelogical Report)ಗಳ ಅಕಾರಾದಿ ಶಬ್ದ ಸೂಚಿಯನ್ನು ಸಿದ್ಧಪಡಿಸಿದರು. ಶ್ರವಣಬೆಳಗೊಳದ ಶಾಸನ ಸಂಪುಟವನ್ನು ಆಮೂಲಾಗ್ರವಾಗಿ ಪರಿಷ್ಕರಿಸಿದರು.

 

ಬಿ. ಎಲ್ ರೈಸ್ ರವರು ಸಿದ್ಧಪಡಿಸಿದ ೨ನೇ ಸಂಪುಟದಲ್ಲಿ ಶ್ರವಣಬೆಳಗೊಳದ ೧೪೪ ಶಾಸನಗಳು ಮಾತ್ರ ಇದ್ದವು. ಆಚಾರ್ಯರ ಪರಿಷ್ಕರಣೆಯಲ್ಲಿ ಅವುಗಳ ಸಂಖ್ಯೆ ೫೦೦ಕ್ಕೆ ಏರಿತ್ತು. ಶ್ರವಣಬೆಳಗೊಳದ ಬಸದಿಗಳ ವಾಸ್ತುಶಿಲ್ಪ ಕುರಿತಾದ ಅವರ ಬರಹಗಳು ಇತ್ತೀಚಿನ ಹೊಸ ಪರಿಷ್ಕೃತ ಸಂಪುಟಗಳು ಬಂದ ಮೇಲೂ ಅತೀ ಮುಖ್ಯ ಆಕರ ಸಾಮಾಗ್ರಿಯಾಗಿ ಉಳಿದಿವೆ.

 

 

 


 

ಶ್ರೀ ಆರ್ ಶ್ಯಾಮಾ ಶಾಸ್ತ್ರಿ (೧೮೬೮-೧೯೪೪)ಯವರು ನಿರ್ದೇಶಕರಾಗಿ ಬಂದರು. ಅವರು ಕೌಟಿಲ್ಯರ ಅರ್ಥಶಾಸ್ತ್ರದ ಅನುವಾದಗಳನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹೊರತಂದರು.  ಇದಲ್ಲದೆ ಅವರು ಗೋವಿಂದ ವೈದ್ಯರ “ದಿ ಕಾಂತರಾಜ ವಿಜಯ”ವನ್ನು ಸಂಪಾದಿಸಿ ಪ್ರಕಟಿಸಿದರು.  ಅವರ ಸೇವೆಯ ಸಮಯದಲ್ಲಿ ಹಿಂದಿನ ಮೈಸೂರು ರಾಜ್ಯದ ಸ್ಮಾರಕಗಳ ಸಮೀಕ್ಷೆಯು ಇಲಾಖೆಯ ಪ್ರಮುಖ ಚಟುವಟಿಕೆಯಾಯಿತು.  ಮೈಸೂರು ಪುರಾತತ್ವ ವರದಿಗಳು (ಎಂ.ಎ.ಆರ್) ಎಂದು ಕರೆಯಲ್ಪಡುವ ಇಲಾಖೆಯ ವಾರ್ಷಿಕ ವರದಿಗಳಲ್ಲಿ ಅವರು ಸ್ಮಾರಕಗಳ ವಿವರಣೆಯನ್ನು ಪ್ರಕಟಿಸಿದರು.  

 

 

 

 

 

ಡಾ.ಎಂ.ಎಚ್.ಕೃಷ್ಣ (೧೯-೦೮-೧೮೯೨ರಿಂದ ೨೩-೧೨-೧೯೪೭)ರವರು ೧೯೨೮ರಲ್ಲಿ ನಿರ್ದೇಶಕರಾದರು.  ಅವರು ಮೈಸೂರು ರಾಜ್ಯದ ಸ್ಮಾರಕಗಳ ಸಮೀಕ್ಷೆ ಮತ್ತು ಸ್ಮಾರಕಗಳು ಮತ್ತು ಚಿತ್ರಗಳ ಕುರಿತಾದ ವರದಿಯು ವಾರ್ಷಿಕ ಯೋಜನೆ ವರದಿಯೊಡನೆ ಪ್ರಕಟಿಸಿದ್ದರಿಂದ ಅವುಗಳ ಗುಣಮಟ್ಟ ಮತ್ತು ವಿಷಯಗಳಿಗಾಗಿ ವಿಶ್ವದಾದ್ಯಂತ ಮೆಚ್ಚುಗೆ ಪಡೆದವು.  ಡಾ.ಎಂ.ಹೆಚ್.ಕೃಷ್ಣ ಅವರು ೧೯೪೭ರಲ್ಲಿ ಸೇವೆಯಿಂದ ನಿವೃತ್ತರಾದರು.  ಡಾ.ಕೃಷ್ಣ ರವರ ಕೊಡುಗೆಗಳು ಪ್ರಾಚೀನ ಸ್ಮಾರಕಗಳ ಸಮೀಕ್ಷೆಗೆ ಮಾತ್ರ ಸೀಮಿತವಾಗಿಲ್ಲ. ಪುರಾತನ ನಗರಗಳಾದ ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ ನಗರಗಳು ಅನ್ವೇಷಣೆ ಮತ್ತು ಉತ್ಖನನಗಳಿಗೆ ವಿಸ್ತರಿಸಲ್ಪಟ್ಟಿವೆ.  ಈ ಸ್ಥಳಗಳಲ್ಲಿನ ಉತ್ಖನನಗಳಲ್ಲಿ ದೊರೆತಿರುವ ಪ್ರಾಚ್ಯಾವಶೇಷಗಳು ನವಶಿಲಾಯುಗದಿಂದ ಆರಂಭಿಕ ಐತಿಹಾಸಿಕ ಅವಧಿಯವರೆಗೆ ದೊರೆತಿವೆ.  ಈ ಸ್ಥಳಗಳು ಕರ್ನಾಟಕ ಪುರಾತತ್ವ ಸ್ಥಳಗಳ ಪರಿಶೋಧನೆ ಮತ್ತು ಉತ್ಖನನಗಳಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದವು.  ಹಸ್ತಪ್ರತಿಗಳ ಪ್ರಕಟಣೆಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಶ್ಲಾಘನೀಯವಾಗಿದೆ.  ಅವರು ಹೈದರ್ ನಾಮ, ಶಕ್ತಿ ಸುದರ್ಶನ, ಮೈಸೂರು ಸಂಸ್ಥಾನದ ದೊರೆಗಳ ಕೈಫಿಯತ್ತು ಮುಂತಾದ ಹಸ್ತಪ್ರತಿಗಳನ್ನು ಬೆಳಕಿಗೆ ತಂದರು ಮತ್ತು ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು.  

 

ಶ್ರೀ ಎಲ್.ನರಸಿಂಹಾಚಾರ್ (೧೯೪೭-೧೯೫೧) ಶ್ರೀ.ನಾರಾಯಣ ಅಯ್ಯಂಗಾರ್ (೧೯೫೧-೧೯೫೪) ಮತ್ತು ಪ್ರೊ.ಕೆ.ಎ.ನೀಲಕಂಠ ಶಾಸ್ತ್ರಿ (೧೯೫೪-೧೯೫೬) ನಂತರ ಡಾ. ಎಂ.ಹೆಚ್.ಕೃಷ್ಣರವರು ಪುರಾತತ್ವ ಇಲಾಖೆಯಲ್ಲಿ ತಮ್ಮ ಕಾರ್ಯಚಟುವಟಿಕೆಗಳೊಂದಿಗೆ ಎಂ.ಎ.ಆರ್ ಮತ್ತು ಎಪಿಗ್ರಾಫಿಯಾ ಕಾರ್ನಾಟಿಕ ತಯಾರಿಕೆ ಮತ್ತು ಪ್ರಕಟಣೆಯನ್ನು ತಮ್ಮನ್ನು ತೊಡಗಿಸಿಕೊಂಡಿದ್ದರು.

 

ಡಾ.ಎಂ.ಶೇಷಾದ್ರಿ (೧೯೫೬-೧೯೭೨)ರವರು ಪುರಾತತ್ವ ಶಾಸ್ತ್ರದ ಅಧ್ಯಯನಗಳಿಗೆ ಸಮರ್ಪಿತರಾಗಿದ್ದು, ಬೆಂಗಳೂರು ಜಿಲ್ಲೆಯ ಜಡಿಗೇನ ಹಳ್ಳಿ ಮತ್ತು ಮೈಸೂರು ಜಿಲ್ಲೆಯ ಟಿ.ನರಸೀಪುರ ಬೃಹತ್ ಶಿಲಾಯುಗದ ಎರಡು ಪುರಾತತ್ವ ನೆಲೆಗಳನ್ನು ಉತ್ಖನನ ಮಾಡಿದರು.  ಟಿ.ನರಸೀಪುರದ ಕಾವೇರಿ ಕಣಿವೆಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ನವಶಿಲಾಯುಗದ ಸಂಸ್ಕೃತಿಯನ್ನು ತಿಳಿಯಲು ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು.

 

ಡಾ.ಎಂ.ಎಸ್.ನಾಗರಾಜ ರಾವ್ (೧೯೭೨-೮೪ ಮತ್ತು (೧೯೮೭-೧೯೯೦) ಸಹ ನಿರ್ದೇಶನಾಲಯದಲ್ಲಿ ಪುರಾತತ್ವ ಶಾಸ್ತ್ರದ ಅಧ್ಯಯನವನ್ನು ಮುಂದುವರೆಸಿದರು ಮತ್ತು ಧಾರವಾಡ ಜಿಲ್ಲೆಯ ಹಳ್ಳೂರು, ತೆಕ್ಕಲಕೋಟ, ಸಂಗನಕಲ್ಲು, ತಡಕನಹಳ್ಳಿ ಮತ್ತು ಕೊಮರನಹಳ್ಳಿಯಲ್ಲಿರುವ ಬೃಹತ್ ಶಿಲಾಯುಗದ ನೆಲೆಗಳಲ್ಲಿ ನವಶಿಲಾಯುಗದ ಸ್ಥಳಗಳನ್ನು ಉತ್ಖನನ ಮಾಡಿದರು.  ಹಳ್ಳೂರು ಉತ್ಖನನವು ದಕ್ಷಿಣ ಭಾರತದಲ್ಲಿ ಕಬ್ಬಿಣದ ಬಳಕೆಗೆ ಆರಂಭಿಕ ದಿನಾಂಕವನ್ನು ತಿಳಿಸಿತು. ಉತ್ಖನನಗಳಿಂದ ಹಂಪಿಯಲ್ಲಿನ ಸ್ಮಾರಕಗಳನ್ನು ಜಗತ್ತಿಗೆ ಪರಿಚಯಿಸಿದ್ದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುತ್ತದೆ.  ಅವರ ಅಧಿಕಾರಾವಧಿಯಲ್ಲಿ ಅವರು ಹಿಂದಿನ M.A.R ವರದಿಗಳ ಬದಲಿಗೆ ಕರ್ನಾಟಕ ೧೯೫೬-೧೯೭೨ರಲ್ಲಿ ಪುರಾತತ್ವ ಶಾಸ್ತ್ರದ ಪ್ರಗತಿಯ ಬಗ್ಗೆ ಸಂಕ್ಷಿಪ್ತ ವರದಿಯನ್ನು ಪ್ರಕಟಿಸಿದರು.  ನಿರ್ದೇಶನಾಲಯದ ಪ್ರಕಟಣೆಗಳಲ್ಲಿ ಅತ್ಯಂತ ಗಮನಾರ್ಹವಾದುದು ೧೯೭೯ರಿಂದ ೧೯೮೪ರ ಅವಧಿಯಲ್ಲಿ ವಿಜಯನಗರ-ಪ್ರಗತಿಯ ಸಂಶೋಧನೆಯ ಶೀರ್ಷಿಕೆಯ ಮೊದಲ ಎರಡು ವರದಿಗಳು.  

 

ಡಾ.ಎ.ಸುಂದರ ಅವರ ಅಧಿಕಾರಾವಧಿಯು ಮುಖ್ಯವಾಗಿ ನಿರ್ದೇಶನಾಲಯದ ಶತಮಾನೋತ್ಸವಗಳಿಗೆ ಹೆಸರುವಾಸಿಯಾಗಿದೆ,  ಅವರು ಕರ್ನಾಟಕದ ಬಗ್ಗೆ ವಿಶೇಷ ಉಲ್ಲೇಖದೊಂದಿಗೆ ಭಾರತದಲ್ಲಿ ಪುರಾತತ್ವ ಶಾಸ್ತ್ರದ ಪ್ರಗತಿಯ ಬಗ್ಗೆ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸಿ ನುರಿತ ಇತಿಹಾಸ ತಜ್ಞರಿಂದ ಮಂಡಿಸಲ್ಪಟ್ಟ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ನಿರ್ದೇಶನಾಲಯದಿಂದ ಪ್ರಕಟಿಸಲಾಯಿತು, 

 

ಡಾ.ಡಿ.ವಿ.ದೇವರಾಜ್ (೧೯೯೦-೯೧ ಮತ್ತು ೧೯೯೨-೯೭), ಶ್ರೀ ಚಿರಂಜೀವ್ ಸಿಂಗ್, ಐ.ಎ.ಎಸ್., ಶ್ರೀ ಎಂ. ಎಲ್. ಶಿವಶಂಕರ್ (೧೯೯೭-೧೯೯೯), ಡಾ.ಎಂ.ವಿ.ಕೃಷ್ಣಪ್ಪ (೧೯೯೧-೨೦೦೨), ಶ್ರೀ ಕೆ.ಆರ್. ರಾಮಕೃಷ್ಣ (೨೦೦೨-೨೦೦೪), ಡಾ.ಆರ್.ಗೋಪಾಲ್, (೨೦೦೪-೨೦೦೬), ಶ್ರೀ ಎಚ್.ಎಸ್. ರತ್ನಾಕರ್ (೨೦೦೬-೨೦೦೭), ಡಾ. ಆರ್. ಗೋಪಾಲ್, (೨೦೦೭-೨೦೧೨) ಇವರುಗಳು ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಮುಂದುವರೆಸಿ ನಿರ್ದೇಶನಾಲಯದ ಬೆಳವಣೆಗೆಗೆ ಅಪಾರ ಕೊಡುಗೆ ನೀಡಿದರು.

 

 

ಕ್ರ ಸಂ

ನಿರ್ದೇಶಕರ ಹೆಸರು

ಕಾಲಾವಧಿ

1

ಶ್ರೀ ಬಿ. ಲೂಯಿಸ್ ರೈಸ್, CIE, MRAS

1885 - 1906

2

ಶ್ರೀ ಆರ್.ನರಸಿಂಹಾಚಾರ್, ಎಂ.ಎ.

1906 - 1922

3

ಶ್ರೀ ಆರ್.ಶಾಮಾಶಾಸ್ತ್ರಿ, ಎಂ.ಎ.

1922 - 1928

4

ಡಾ. ಎಂ. ಎಚ್. ಕೃಷ್ಣ, ಎಂ.ಎ., ಡಿಲಿಟ್ (ಲಂಡನ್)

1928 - 1947

5

ಶ್ರೀ. ಎಲ್.ನರಸಿಂಹಾಚಾರ್, ಎಂ.ಎ.

1947 - 1951

6

ಶ್ರೀ. ನಾರಾಯಣ ಅಯ್ಯಂಗಾರ್, ಎಂ.ಎ.

1951 - 1954

7

ಪ್ರೊ. ಕೆ.ಎ. ನೀಲಕಂಠ ಶಾಸ್ತ್ರಿ, ಎಂ.ಎ.

1954 - 1956

8

ಡಾ.ಎಂ.ಶೇಷಾದ್ರಿ, ಎಂ.ಎ., ಪಿಎಚ್‌ಡಿ (ಲಂಡನ್)

1956 - 1972

9

ಡಾ.ಎಂ.ಎಸ್.ನಾಗರಾಜ ರಾವ್ ಎಂ.ಎ. ಪಿಎಚ್.ಡಿ (ಲಂಡನ್) ಡಿಪ್ಲೋಮ ಇನ್ ಮ್ಯೂಸಿಯಾಲಜಿ (ಯುಎಸ್ಎ)

1972 - 1984

10

ಡಾ.ಅ.ಸುಂದರಾ ಎಂ.ಎ, ಪಿಎಚ್‌ಡಿ, ಡಿಪ್ಲೋಮ ಇನ್ ಎಪಿಗ್ರಫಿ

1984 - 1987

11

ಡಾ.ಎಂ.ಎಸ್. ನಾಗರಾಜ ರಾವ್

ಎಂ.ಎ, ಪಿಎಚ್‌ಡಿ (ಲಂಡನ್), ಡಿಪ್ಲೋಮ ಇನ್ ಮ್ಯೂಸಿಯಾಲಜಿ (ಯುಎಸ್ಎ)

1987 - 1990

12

ಡಾ.ವಿ.ವಿ.ದೇವರಾಜ, ಎಂ.ಎ., ಪಿಎಚ್.ಡಿ

1990 - 1991

13

ಶ್ರೀ ಚಿರಂಜೀವಿ ಸಿಂಗ್, ಐ.ಎ.ಎಸ್

1991 - 1992

14

ಡಾ.ಡಿ.ವಿ.ದೇವರಾಜ್, ಎಂ.ಎ. ಪಿಎಚ್.ಡಿ

1992 - 1997

15

ಶ್ರೀ ಎಂ. ಎಲ್. ಶಿವಶಂಕರ್ ಎಂ.ಎ. ಡಿಪ್ಲೋಮ ಇನ್ ಆರ್ಕಿಯಾಲಜಿ

1997 - 1999

16

ಡಾ.ಎಂ.ವಿ.ಕೃಷ್ಣಪ್ಪ ಎಂ.ಎ. ಪಿಎಚ್‌ಡಿ, ಡಿಪ್ಲೋಮ ಇನ್ ಎಪಿಗ್ರಫಿ

04.02.1991-22.7.2002

17

ಶ್ರೀ ಕೆ.ಆರ್. ರಾಮಕೃಷ್ಣ, ಕೆ.ಎ.ಎಸ್

22.7.2002-24.11.2004

18

ಡಾ. ಆರ್. ಗೋಪಾಲ್ ಎಂ.ಎ (ಎ.ಎಚ್&ಎ), ಎಂ.ಎ (ಹಿಸ್), ಪಿಎಚ್‌ಡಿ,  ಡಿಪ್ಲೋಮ ಇನ್ ಎಪಿಗ್ರಫಿ

24.11.2004-29.5.2006

19

ಶ್ರೀ ಎಚ್.ಎಸ್. ರತ್ನಾಕರ್, ಕೆ.ಎ.ಎಸ್

29.5.2006-9.3.2007

20

ಡಾ. ಆರ್. ಗೋಪಾಲ್ ಎಂ.ಎ (ಎ.ಎಚ್ & ಎ), ಎಂ.ಎ (ಹಿಸ್), ಪಿಎಚ್‌ಡಿ,  ಡಿಪ್ಲೋಮ ಇನ್ ಎಪಿಗ್ರಫಿ

9.3.2007-06.09.2011

21

ಶ್ರೀ ಎಚ್.ಎಂ ಸಿದ್ದನಗೌಡರ್ ಎಂ.ಎ (ಎ.ಎಚ್ & ಎ), ಪಿಎಚ್‌ಡಿ ಇನ್ ಹಿಸ್ಟರಿ & ಆರ್ಕಿಯಾಲಜಿ,  ಡಿಪ್ಲೋಮ ಇನ್ ಮ್ಯೂಸಿಯಾಲಜಿ

07.09.2011-16.10.2011

22

ಡಾ. ಆರ್. ಗೋಪಾಲ್ ಎಂ.ಎ (ಎ.ಎಚ್ & ಎ), ಎಂ.ಎ (ಹಿಸ್ಟರಿ), ಪಿಎಚ್‌ಡಿ,  ಡಿಪ್ಲೋಮ ಇನ್ ಎಪಿಗ್ರಫಿ

17.10.2011-03.12.2011

23

ಶ್ರೀ ಎಚ್.ಎಂ.ಸಿದ್ದನಗೌಡರ್ ಎಂ.ಎ (ಎ.ಎಚ್ & ಎ), ಪಿಎಚ್‌ಡಿ ಇನ್ ಹಿಸ್ಟರಿ & ಆರ್ಕಿಯಾಲಜಿ,  ಡಿಪ್ಲೋಮ ಇನ್ ಮ್ಯೂಸಿಯಾಲಜಿ

04.12.2011-14.12.2011

24

ಡಾ. ಆರ್. ಗೋಪಾಲ್ಎಂ.ಎ (ಎ.ಎಚ್ & ಎ), ಎಂ.ಎ (ಹಿಸ್ಟರಿ), ಪಿಎಚ್‌ಡಿ,  ಡಿಪ್ಲೋಮ ಇನ್ ಎಪಿಗ್ರಫಿ

15.12.2011-04.03.2012

 

ಪರಂಪರೆ ಕಛೇರಿಯ ಸ್ಥಾಪನೆ

 

 

ಮೈಸೂರು, ಶ್ರೀರಂಗಪಟ್ಟಣ, ಗುಲ್ಬರ್ಗ, ಬೀದರ್, ಬಿಜಾಪುರ ಮತ್ತು ಕಿತ್ತೂರು ಈ ಸ್ಥಳಗಳನ್ನು ಪಾರಂಪರಿಕ ಪ್ರದೇಶಗಳಾಗಿ ಅಭಿವೃದ್ಧಿಪಡಿಸಿ ಪಾರಂಪರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಯುಕ್ತರು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ವಿಭಾಗದ ಕಚೇರಿಯನ್ನು ಮೈಸೂರಿನಲ್ಲಿ ಸ್ಥಾಪಿಸಿ ಆಯುಕ್ತರ ಹುದ್ದೆಯೆದುರಿಗೆ ದಿನಾಂಕ ೧೧-೦೨-೨೦೦೪ರಂದು ಶ್ರೀ ಟಿ.ಎಂ.ವಿಜಯ್ ಭಾಸ್ಕರ್, ಐ.ಎ.ಎಸ್. ಅಧಿಕಾರ ವಹಿಸಿಕೊಂಡರು.

 

  • ೧೮೮೫ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯವನ್ನು 2004ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯೊಂದಿಗೆ ಸರ್ಕಾರಿ ಆದೇಶದ ಸಂಖ್ಯೆ: ಕಸಂವಾಪ್ರ ೧೦ ಕೆಎಂಯು ೨೦೧೨ ದಿನಾಂಕ ೨೩-೨-೨೦೧೨ರಲ್ಲಿ ವಿಲೀನಗೊಂಡು, ಇಲಾಖೆಯನ್ನು ಪುನರ್ ರಚಿಸಿ ಇಲಾಖೆಯ ಮುಖ್ಯಸ್ಥರನ್ನಾಗಿ ಆಯುಕ್ತರನ್ನು ನೇಮಿಸಲಾಯಿತು.

  • ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸೇವಾ ನಿಯಮಗಳು-), ಬೆಂಗಳೂರು ಇವರ ಆದೇಶ ಸಂಖ್ಯೆ:ಡಿಪಿಎಆರ್ ೦೫ ಎಆರ್ಬಿ ೨೦೧೮ ದಿನಾಂಕ: ೧೨.೦೯.೨೦೧೮ರಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಿಂದ ಪ್ರವಾಸೋದ್ಯಮ ಇಲಾಖೆಯ ಆಡಳಿತ ವ್ಯಾಪ್ತಿಗೆ ವರ್ಗಾಯಿಸಲಾಗಿದೆ. ಅದರಂತೆ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿ ಈ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.

 

  • ಪ್ರಸ್ತುತ ಕೇಂದ್ರ ಕಛೇರಿಯು ಮೈಸೂರಿನಲ್ಲಿದ್ದು ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಯೋಜನೆ ಮತ್ತು ಯೋಜನೇತರ ಶೀರ್ಷಿಕೆ ಅಡಿಯಲ್ಲಿ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬರುತ್ತಿದೆ.

 

ಆಯುಕ್ತರ ಪಟ್ಟಿ

 

ಕ್ರ.ಸಂ

ಆಯುಕ್ತರ ಹೆಸರು

ಕಾಲಾವಧಿ

1

ಶ್ರೀಮತಿ. ನೀಲಾ ಮಂಜುನಾಥ್, ಕೆ.ಎ.ಎಸ್

05.03.2012 - 21.03.2012

2

ಶ್ರೀ ಕೆ.ಆರ್.ರಾಮಕೃಷ್ಣ, ಕೆ.ಎ.ಎಸ್

19.12.2012 - 01.09.2013

3

ಶ್ರೀ ಪಿ.ಎಸ್.ವಸ್ತ್ರದ್, ಐ.ಎ.ಎಸ್

02.09.2013 - 30.07.2016

4

ಡಾ.ಸಿ.ಜಿ.ಬೆಟಸೂರ ಮಠ, ಕೆ.ಎ.ಎಸ್

02.09.2013 - 30.07.2016

5

ಡಾ.ಎನ್.ಮಂಜುಳಾ, ಐ.ಎ.ಎಸ್

02.08.2016 - 20.11.2017

6

ಶ್ರೀ ಟಿ.ವೆಂಕಟೇಶ್, ಕೆ.ಎ.ಎಸ್

20.11.2017 - 31.07.2020

7

ಶ್ರೀಮತಿ ಬಿ.ಆರ್.ಪೂರ್ಣಿಮ, ಕೆ.ಎ.ಎಸ್

   31.07.2020 - 15.07.2022                   

8

ಶ್ರೀಯುತ ದೇವರಾಜು.ಎ, ಕೆ.ಎ.ಎಸ್

15.07.2022

 

ಇತ್ತೀಚಿನ ನವೀಕರಣ​ : 06-08-2022 11:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080