ಅಭಿಪ್ರಾಯ / ಸಲಹೆಗಳು

ವೆಂಕಟಪ್ಪ ಚಿತ್ರಶಾಲೆ ಬೆಂಗಳೂರು

ಕಲಾತಪಸ್ವಿ ವೆಂಕಟಪ್ಪ : ಕಲೆಗಾಗಿಯೇ ಇಡೀ ಬದುಕನ್ನು ಸವೆಸಿ, ಜೀವನದ ಪ್ರತಿಗಳಿಗೆಯೂ ಕಲೆಯ ಗುಂಗಿನಲ್ಲೆ ಕಳೆದು, ಕಲೆಗೆ ದುಡಿಯಲೆಂದೇ ಒಂಟಿಯಾಗಿ ಉಳಿದು, ಚಿತ್ರಕಲೆಯ ತಮ್ಮ ಅದ್ಭುತ ಪ್ರತಿಭೆಯಿಂದ ಕರ್ನಾಟಕಕ್ಕೆ ಕೀರ್ತಿತಂದ ಕಲಾ ತಪಸ್ವಿ ವೆಂಕಟಪ್ಪನವರು ಜನಿಸಿದ್ದು, 23-6-1886ರಲ್ಲಿ.

 

ವೆಂಕಟಪ್ಪನವರ ಪೂರ್ವಿಕರು ಚಿತ್ರಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ತಂದೆ ಕೃಷ್ಣಪ್ಪನವರು ಸಹ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನ ಕಲಾವಿದರು.  ಹೀಗಾಗಿ ಬಾಲಕ ವೆಂಕಟಪ್ಪನಿಗೆ ಸಹಜವಾಗಿಯೇ ಚಿಕ್ಕಂದಿನಲ್ಲಿ ಕಲಾಸಕ್ತಿ ಮೂಡಿತು. ಬಾಲಕ ವೆಂಕಟಪ್ಪನ ಸಿಂಹ ಸಿಂಹಿಣಿ ಕಲಾಕೃತಿ ಮಹಾರಾಜರ ಮೆಚ್ಚುಗೆಗೆ ಪಾತ್ರವಾದ್ದರಿಂದ, ವೆಂಕಟಪ್ಪನ ಕಲಾಭ್ಯಾಸಕ್ಕೆ ಮಹಾರಾಜರು ಅನುಕೂಲ ಮಾಡಿಕೊಟ್ಟರು. ಮದ್ರಾಸಿನ ಕಲಾಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಡಿಪ್ಲೋಮಾ ಪಾಸು ಮಾಡಿದ ವೆಂಕಟಪ್ಪನವರು ಉನ್ನತ ಶಿಕ್ಷಣಕ್ಕಾಗಿ ಕಲ್ಕತ್ತಾದ ಪರ್ಸಿಬ್ರೌನ ಹಾಗೂ ಅವನೀಂದ್ರನಾಥ ಠಾಗೂರ್ ಅವರಲ್ಲಿಗೆ ಹೋದರು.

 

1920ರಲ್ಲಿ ಮೈಸೂರಿಗೆ ಹಿಂದುರಿಗಿದ ವೆಂಕಟಪ್ಪನವರು ಸ್ಟುಡಿಯೋ ಆರಂಭಿಸಿ, ರಾಮಾಯಣ, ಮಹಾಭಾರತದ ಕಥಾವಸ್ತುಗಳನ್ನೊಳಗೊಂಡ ಚಿತ್ರಗಳು, ಹಾಗೂ ಐತಿಹಾಸಿಕ ಮಹಾಪುರುμÀರಾದ ಶಂಕರಾಚಾರ್ಯ, ಬುದ್ಧ, ಟಿಪ್ಪುಸುಲ್ತಾನ್ ಹಾಗೂ ಪ್ರತಾಪಸಿಂಹ, ಅರ್ಧನಾರೀಶ್ವರ, ಬಂಗಾಳಿ ಪಕ್ಷಿ ಮುಂತಾದ ಅಪೂರ್ವ ಕಲಾಕೃತಿಗಳನ್ನು ರಚಿಸಿದರು. ವೆಂಕಟಪ್ಪನವರು ಕೇವಲ ಚಿತ್ರರಚನೆಯಲ್ಲಿ ಮಾತ್ರವಲ್ಲ ಶಿಲ್ಪದಲ್ಲೂ ಪ್ರವೀಣರಾಗಿದ್ದರು. ಬುದ್ಧನ ಮಹಾತ್ಯಾಗ, ಶಿವತಾಂಡವ, ವೀಣೆಶೇμÀಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ ಹೀಗೆ ಅನೇಕ ಕಲಾಕೃತಿಗಳು ಇವರ ಪ್ರತಿಭೆಗೆ ಸಾಕ್ಷಿಯೆನಿಸಿವೆ.

 

ವೆಂಕಟಪ್ಪನವರಿಗೆ ಚಿತ್ರ, ಶಿಲ್ಪಕಲೆ ಅಷ್ಟೇಯಲ್ಲದೇ ಸಂಗೀತದಲ್ಲೂ ಅಪಾರ ಆಸಕ್ತಿ. ಅಂತೆಯೇ ವೀಣೆ ಶೇμÀಣ್ಣನವರಲ್ಲಿ ಏಳು ವರ್ಷಗಳ ಕಾಲ ವೀಣೆಯ ಅಭ್ಯಾಸ ಮಾಡಿದರಲ್ಲದೇ, ಸ್ವತಃ ಇಪ್ಪತ್ತೆರಡು ತಂತಿಗಳ ಶ್ರುತಿವೀಣೆ ರೂಪಿಸಿದ ಹಿರಿಮೆ ಇವರದು.

 

ಕಲೆಯ ಸಾಧನೆಗಾಗಿ ಬ್ರಹ್ಮಚಾರಿಯಾಗಿಯೇ ಉಳಿದ ವೆಂಕಟಪ್ಪನವರು ಪ್ರಕೃತಿ ಪ್ರಿಯರು. ಭೂಮಿಯ ಏರು - ತಗ್ಗು, ಹಸಿರು ಗಿಡ-ಮರ- ಬಳ್ಳಿಗಳು, ವರ್ಣರಂಜಿತ ಆಕಾಶ, ಪ್ರಾಣಿ-ಪಕ್ಷಿ, ಹಿಮಾಲಯ ಪರ್ವತಗಳ ಮನಮೋಹಕ ದೃಶ್ಯ, ತಿಳಿನೀರಿನ ಸರೋವರ, ಸೂರ್ಯಾಸ್ತದ ರಂಗು, ಬೆಳ್ಳಿಯಂಚಿನ ಮೋಡ, ಹೀಗೆ ಇವರು ರಚಿಸಿದ ಕಲಾಕೃತಿಗಳು ಪ್ರಕೃತಿಯ ವೈಚಿತ್ರ್ಯಕ್ಕೆ ಬರೆದ ಭಾಷ್ಯಗಳಾಗಿವೆ. ಪ್ರಕೃತಿಯ ಚಿತ್ರಕಲಾ ಪ್ರಪಂಚಕ್ಕೆ ಅನನ್ಯ ಕೊಡುಗೆ ನೀಡಿದ ಈ ಹಿರಿಯ ಸಾಧಕನಿಗೆ 1962ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು. ರಸಋಷಿ, ಕಲಾತಪಸ್ವಿ ವೆಂಕಟಪ್ಪ 25-5-1965ರಲ್ಲಿ ನಿಧನ ಹೊಂದಿದರು.

 

ವೆಂಕಟಪ್ಪ ಚಿತ್ರಶಾಲೆ

 

ಕಬ್ಬನ್ ಪಾರ್ಕಿನ ಸರಕಾರಿ ವಸ್ತು ಸಂಗ್ರಹಾಲಯಕ್ಕೆ ಹೊಂದಿಕೊಂಡಿರುವ ಕೆ.ವೆಂಕಟಪ್ಪ ಚಿತ್ರಶಾಲೆಯ ನೆಲ ಅಂತಸ್ತಿನ ಪ್ರದರ್ಶನಾಲಯದಲ್ಲಿ ವೆಂಕಟಪ್ಪನವರು ತಾವೇ ತಯಾರಿಸಿ ನುಡಿಸುತ್ತಿದ್ದ ಶ್ರುತಿ ವೀಣೆ, ರಾಜ ವೀಣೆ, ತಂಜಾವೂರು ವೀಣೆ, ಲಂಗರ್ ವೀಣೆ, ಪ್ಲಾಸ್ಟರ್ ಆಫ್ ಪ್ಯಾರಿಸ್‍ನಲ್ಲಿ ತಯಾರಿಸಿದ ಸುಂದರ ಉಬ್ಬು ಶಿಲ್ಪಗಳು, ರವೀಂದ್ರ್ರನಾಥ ಠಾಗೂರ್ ಅವರ ಎದೆಮಟ್ಟದ ಪ್ರತಿಮೆ, ನಿಸರ್ಗ ವರ್ಣ ಚಿತ್ರಗಳು, ವೆಂಕಟಪ್ಪನವರಿಗೆ ನೀಡಿದ್ದ ಕೊಡುಗೆಗಳು, ಪಾರಿತೋμÀಕಗಳು ಮತ್ತು ಉಪಯೋಗಿಸುತ್ತಿದ್ದ ವಿದೇಶಿ ಕಲಾಸಾಮಾಗ್ರಿ ಮುಂತಾದವುಗಳನ್ನು ಪ್ರದರ್ಶಿಸಲಾಗಿದೆ. ಈ ಚಿತ್ರಶಾಲೆಯು 1967ರಲ್ಲಿ ತನ್ನ ಶಂಕುಸ್ಥಾಪನೆಯನ್ನು ಕಂಡಿತು. ಅನಂತರ 1975 ರಲ್ಲಿ ಅನಾವರಣಗೊಂಡು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಯಿತು.

 

ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ವೆಂಕಟಪ್ಪ ಚಿತ್ರಶಾಲೆಯ ಸಂರರಕ್ಷಣೆ ಮತ್ತು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಂರಕ್ಷಣೆ ಕಾಮಗಾರಿಗಳ ಸಮಯದಲ್ಲಿ ಸಾರ್ವಜನಿಕರು ಗ್ಯಾಲರಿಗೆ ಭೇಟಿ ನೀಡುವುದು ಸುರಕ್ಷಿತವಲ್ಲವಾದ್ದರಿಂದ ವಸ್ತುಸಂಗ್ರಹಾಲಯವನ್ನು ಹಾಗೂ ವೆಂಕಟಪ್ಪ ಚಿತ್ರಶಾಲೆಯನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಚ್ಚಲ್ಪಟ್ಟಿರುತ್ತದೆ.

 

ಇತ್ತೀಚಿನ ನವೀಕರಣ​ : 18-01-2024 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080